Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ರಾಜ್ಯ ಸರ್ಕಾರದಿಂದ CC, OC ಪಡೆಯದೇ ಮನೆ ಕಟ್ಟಿರುವ ಮಾಲೀಕರಿಗೆ ಗುಡ್ ನ್ಯೂಸ್: ಸರ್ಕಾರದಿಂದ ವಿದ್ಯುತ್, ನೀರು ಸಂಪರ್ಕ

08/10/2025 6:55 PM

ಹೀಗಿದೆ ನಾಡಿನ ಸುಪ್ರಸಿದ್ಧ ಹಾಸನಾಂಬ ದೇವಿ ದರ್ಶನ ಮತ್ತು ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳ ವಿವರ

08/10/2025 6:48 PM

ರಾತ್ರಿ ಮಲಗುವಾಗ ಯಾವ ದಿಕ್ಕಿಗೆ ತಲೆ ಇಟ್ಟುಕೊಂಡು ಮಲಗಬೇಕು? ಇಲ್ಲಿದೆ ಓದಿ

08/10/2025 6:44 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹೀಗಿದೆ ನಾಡಿನ ಸುಪ್ರಸಿದ್ಧ ಹಾಸನಾಂಬ ದೇವಿ ದರ್ಶನ ಮತ್ತು ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳ ವಿವರ
KARNATAKA

ಹೀಗಿದೆ ನಾಡಿನ ಸುಪ್ರಸಿದ್ಧ ಹಾಸನಾಂಬ ದೇವಿ ದರ್ಶನ ಮತ್ತು ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳ ವಿವರ

By kannadanewsnow0908/10/2025 6:48 PM

ಹಾಸನ: ಸಂಪ್ರದಾಯದಂತೆ, ಅಕ್ಟೋಬರ್‌ 09 ರಿಂದ ದೇವಾಲಯ ತೆರೆದು ಮಧ್ಯಾಹ್ನ 12.00 ಗಂಟೆಗೆ ಶಾಸ್ತ್ರೋಕ್ತವಾಗಿ ಪೂಜೆ ನೆರೆವೇರಿಸಲಾಗುವುದು. ಮೊದಲ ದಿನ ಪೂಜಾ ಕೈಂಕಾರ್ಯಕ್ಕೆ ಮಾತ್ರ ಅವಕಾಶವಿದ್ದು, ಸಾರ್ವಜನಿಕರಿಗೆ ಪ್ರವೇಶಾವಕಾಶವಿರುವುದಿಲ್ಲ. ಸಾರ್ವಜನಿಕರಿಗೆ ಅಕ್ಟೋಬರ್‌ 10, ಶುಕ್ರವಾರ ಬೆಳಿಗ್ಗೆ 6.00 ರಿಂದ ದರ್ಶನಾವಕಾಶ ಆರಂಭವಾಗುತ್ತದೆ. ಅಂದು ಸಂಜೆ 7.00 ಗಂಟೆಗೆ ದರ್ಶನ ನಿಲ್ಲಿಸಿ ಪೂಜಾ ಕಾರ್ಯಗಳಿಗೆ ಅವಕಾಶ ನೀಡಬೇಕಾಗಿರುತ್ತದೆ. ಇನ್ನುಳಿದ ದಿನಗಳಲ್ಲಿ ದೇವಾಲಯವು 24 ಗಂಟೆಗಳು ತೆರೆದಿದ್ದರೂ ಸಹ ಪ್ರತಿ ದಿನ ನೈವ್ಯಧ್ಯ ಮತ್ತು ಅಲಂಕಾರ ಕಾರ್ಯಗಳಿಗೆ ಮಧ್ಯಾಹ್ನ 2.00 ರಿಂದ ಮಧ್ಯಾಹ್ನ 3.30 ನಡುವೆ ಮತ್ತು ಬೆಳಗಿನ ಜಾವ 2.00 ರಿಂದ 5.00ರವರೆಗೆ ಸಾರ್ವಜನಿಕರಿಗೆ ದರ್ಶನಾವಕಾಶವಿರುವುದಿಲ್ಲ.

ಈ ಸಮಯಗಳನ್ನು ಹೊರತುಪಡಿಸಿ ಅಕ್ಟೋಬರ್‌ 11 ಶವಿವಾರ ಬೆಳಗಿನ ಜಾವ 6.00 ರಿಂದ ಅಕ್ಟೋಬರ್‌ 22 ಬುಧವಾರ ಸಂಜೆ 7.00 ಗಂಟೆಯವರೆಗೆ ದರ್ಶನಾವಕಾಶವಿರುತ್ತದೆ. ಅಕ್ಟೋಬರ್‌ 22 ರಂದು ಸಂಜೆ 7.00 ಗಂಟೆಗೆ ಸಾರ್ವಜನಿಕರಿಗೆ ಪ್ರವೇಶ ನಿಲ್ಲಿಸಲಾಗುವುದು. ಅಕ್ಟೋಬರ್‌ 23ರಂದು ಪೂಜಾ ಕೈಂಕಾರ್ಯಗಳೊಂದಿಗೆ ಜಾತ್ರಾ ಮಹೋತ್ಸವ ಸಮಾರೂಪವಾಗುವುದು. ದರ್ಶನಕ್ಕೆ ಆಗಮಿಸುವ ಸಾರ್ವಜನಿಕರು ಮೇಲೆ ತಿಳಿಸಿದ ದರ್ಶನದ ಸಮಯವನ್ನು ಗಮನಿಸಿಕೊಂಡು ಬರಲು ಕೋರಿದೆ.

ಇದರೊಂದಿಗೆ ಅಕ್ಟೋಬರ್‌ 11, 17, 18, 19, 20 ದಿನಗಳಂದು ಸಾರ್ವಜನಿಕರು ಬಹಳ ಹೆಚ್ಚಿನ ಸಂಖ್ಯೆಯಲ್ಲಿ ಬರಬಹುದೆಂದು ಅಂದಾಜಿಸಲಾಗಿದೆ. ಈ ದಿನಗಳನ್ನು ಹೊರತುಪಡಿಸಿ, ಬೇರೆ ಸೂಕ್ತ ದಿನ ಆಗಮಿಸಲು ಪ್ರಯತ್ನ ಮಾಡಬಹುದು. ಬರುವ ಸಾರ್ವ ಜನಿಕರಿಗೆ ಧರ್ಮದರ್ಶನ ಹಾಗೂ ರೂ. 300 ಮತ್ತು ರೂ. 1000 ಹೀಗೆ ಮೂರು ಪ್ರತ್ಯೇಕ ಸಾಲುಗಳಲ್ಲಿ ದರ್ಶನಾವಕಾಶ ಕಲ್ಪಿಸಲಾಗಿದೆ.

ಸಚಿವರು, ಶಾಸಕರು, ನ್ಯಾಯಮೂರ್ತಿಗಳು, ಉನ್ನತ ಅಧಿಕಾರಿಗಳು, ಇತರೆ ಗಣ್ಯರು ಆಗಮಿಸುವರು, ತಮ್ಮ ಆಗಮನದ ದಿನಾಂಕವನ್ನು ಜಿಲ್ಲಾಧಿಕಾರಿಗಳ ಕಛೇರಿಗೆ ಮೊದಲೇ ತಿಳಿಸಿ ಬರುವುದು. ನಿಗಧಿತ ದಿನಾಂಕದಂದು ಬೆಳಿಗ್ಗೆ 10.30 ರಿಂದ 12.30 ಗಂಟೆ ನಡುವೆ ಮಾತ್ರ ಆಗಮಿಸುವುದು. ಬೇರೆ ಅವಧಿಯಲ್ಲಿ ಗಣ್ಯರಿಗೆ ದರ್ಶನಾವಕಾಶ ಇರುವುದಿಲ್ಲ. ಗಣ್ಯರು ಮೊದಲು ಹಾಸನದ ಸರ್ಕಾರಿ ಅತಿಥಿ ಗೃಹಕ್ಕೆ (ಪರಿವೀಕ್ಷಣ ಮಂದಿರ) ಆಗಮಿಸಲು ಕೋರಿದೆ. ಸದರಿ ಗಣ್ಯರನ್ನು ಜಿಲ್ಲಾಡಳಿತದ ವಾಹನದಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು, ಇದಕ್ಕೆ ಗಣ್ಯರ ಸಹಕಾರ ಕೋರಿದೆ.

ಗಣ್ಯರು ದರ್ಶನಕ್ಕೆ ಆಗಮಿಸಲು ದಿನಾಂಕವನ್ನು ಪೂರ್ವನಿಗದಿಪಡಿಲು ನಿರ್ಧರಿಸಿದಂತೆ, ದರ್ಶನ ಬಯಸಿದ ದಿನಕ್ಕೆ ಮುಂಚಿತವಾಗಿ ಜಿಲ್ಲಾಧಿಕಾರಿಗಳ ಕಛೇರಿ ಇ-ಮೇಲ್ ವಿಳಾಸಕ್ಕೆ [deo.hassan@gmail.com] ಶಿಷ್ಠಾಚಾರದಲ್ಲಿ ವ್ಯತ್ಯಾಸ ಆಗದ ಬಗ್ಗೆ ಮುತುವರ್ಜಿಯಿಂದ ಪತ್ರ ವ್ಯವಹರಿಸಲು ಕೋರಿ, ದಿನಾಂಕವನ್ನು ಮರು ಖಾತರಿಪಡಿಸಿಕೊಳ್ಳಲು ವಿನಂತಿಸಿದೆ. ಈ ಉದ್ದೇಶವಾಗಿ ಮಂಜುನಾಥ ವಿ., ಕೆ.ಎ.ಎಸ್.‌, ಅಪರ ಜಿಲ್ಲಾಧಿಕಾರಿಗಳು, ಹಾಸನ ಜಿಲ್ಲೆ ಕಛೇರಿ ದೂರವಾಣಿ ಸಂಖ್ಯೆ 08172-250554, ರಾಜೇಶ್‌, ಕೆ.ಎ.ಎಸ್.‌, ಸಹಾಯಕ ಆಯುಕ್ತರು, ಸಕಲೇಶಪುರ ಉಪವಿಭಾಗ, ಸಕಲೇಶಪುರ ಇವರ ದೂರವಾಣಿ ಸಂಖ್ಯೆ: 8971221368 ಉಪವಿಭಾಗಾಧಿಕಾರಿಗಳು, ಹಾಸನ ಉಪವಿಭಾಗ ಕಛೇರಿ ನಿಯಂತ್ರಣ ಕೊಠಡಿ ಸಹಾಯವಾಣಿ ಸಂಖ್ಯೆ: 08172-257119 ಯನ್ನು ಸಂಪರ್ಕಿಸಿ ನಿರ್ಣಯಿಸಲು ಕೋರಿದೆ.

ಹಿಂದಿನ ವರ್ಷಗಳ ಅನುಭವಗಳನ್ನು ಪರಿಶೀಲಿಸಿ, ದೇವಾಲಯ ಪ್ರವೇಶ ಬಹಳ ಕಿರಿದಾಗಿರುವುದರಿಂದ ರಸ್ತೆ ಸಂಪರ್ಕ ಬಹಳ ಸೀಮಿತವಾಗಿರುವುದರಿಂದ ಮತ್ತು ದೇಶಾದ್ಯಂತ ಒಂದು ದಿನಕ್ಕೆ ಸರಾಸರಿ 2 ಲಕ್ಷ ಸಾರ್ವಜನಿಕರ ಆಗಮನದ ನಿರೀಕ್ಷೆ ಇರುವುದರಿಂದ ಈ ಬದಲಾವಣೆಗಳನ್ನು ತರಲಾಗಿದೆ. ಆಗಮಿಸುವ ಲಕ್ಷಾಂತರ ಸಾರ್ವಜನಿಕರ ಸೌಕರ್ಯ, ಸುಗಮ ದರ್ಶನ ಹಾಗೂ ಅತಿಮುಖ್ಯವಾಗಿ ಸುರಕ್ಷತೆಯ ದೃಷ್ಠಿಯಿಂದ ಗಣ್ಯರ ಹಾಗೂ ಸಾರ್ವಜನಿಕರ ಸಹಕಾರವನ್ನು ಕೋರಿದೆ.

ಜಾತ್ರಾ ಮಹೋತ್ಸವದ ಅಂಗವಾಗಿ ಈ ಬಾರಿ 3 ವೇದಿಕೆಗಳಲ್ಲಿ ನಾಡಿನ ಸಂಪದ್ಬರಿತ ನೃತ್ಯ, ಜಾನಪದ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರೊಂದಿಗೆ ಹೆಲಿಕ್ಯಾಪ್ಟರ್‌ ಪ್ರವಾಸ, ಫಲಪುಷ್ಪ ಪ್ರದರ್ಶನ, ವಸ್ತು ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಇವುಗಳ ಸಂಪೂರ್ಣ ಪ್ರಯೋಜನ ಮತ್ತು ಅನುಭವನ್ನು ಪಡೆಯಬೇಕಾಗಿ ಆಗಮಿಸುವ ಸಾರ್ವಜನಿಕರಲ್ಲಿ ಕೋರಿದೆ.

ಈ ಎಲ್ಲಾ ವ್ಯವಸ್ಥೆಗಳಿಗೆ ಮತ್ತು ತೀರ್ಮಾನಗಳಿಗೆ ಜಿಲ್ಲಾಡಳಿತದೊಂದಿಗೆ ಎಲ್ಲಾ ಜನಪ್ರತಿನಿಧಿಗಳು ಹಾಗೂ ಸರ್ಕಾರ ಒಂದಾಗಿ ನಿಂತು ಈ ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗೆ ಬದ್ಧವಾಗಿವೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳ ಗಮನಕ್ಕೆ: ಜಿಯೋದಿಂದ ‘ಎಐ ಕ್ಲಾಸ್ ರೂಮ್ ಫೌಂಡೇಷನ್ ಕೋರ್ಸ್’ ಆರಂಭ, ಪುಲ್ ಫ್ರೀ

‘ಸ್ಥಳೀಯರಿಗೆ ಉದ್ಯೋಗ’ ನೀಡುವ ನಿಟ್ಟಿನಲ್ಲಿ ಸಾಗರದಲ್ಲಿ ‘ರಾಯಲ್ ಎನ್ ಫೀಲ್ಡ್ ಶೋ ರೂಂ’ ಓಪನ್: RBD ಮಹೇಶ್

Share. Facebook Twitter LinkedIn WhatsApp Email

Related Posts

BREAKING: ರಾಜ್ಯ ಸರ್ಕಾರದಿಂದ CC, OC ಪಡೆಯದೇ ಮನೆ ಕಟ್ಟಿರುವ ಮಾಲೀಕರಿಗೆ ಗುಡ್ ನ್ಯೂಸ್: ಸರ್ಕಾರದಿಂದ ವಿದ್ಯುತ್, ನೀರು ಸಂಪರ್ಕ

08/10/2025 6:55 PM1 Min Read

ರಾತ್ರಿ ಮಲಗುವಾಗ ಯಾವ ದಿಕ್ಕಿಗೆ ತಲೆ ಇಟ್ಟುಕೊಂಡು ಮಲಗಬೇಕು? ಇಲ್ಲಿದೆ ಓದಿ

08/10/2025 6:44 PM2 Mins Read

ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ಇಲ್ಲಿದೆ ರಾಶಿ – ದಿಕ್ಕು – ಗ್ರಹ ಬಗ್ಗೆ ಸಂಪೂರ್ಣ ಡೀಟೆಲ್ಸ್

08/10/2025 6:13 PM3 Mins Read
Recent News

BREAKING: ರಾಜ್ಯ ಸರ್ಕಾರದಿಂದ CC, OC ಪಡೆಯದೇ ಮನೆ ಕಟ್ಟಿರುವ ಮಾಲೀಕರಿಗೆ ಗುಡ್ ನ್ಯೂಸ್: ಸರ್ಕಾರದಿಂದ ವಿದ್ಯುತ್, ನೀರು ಸಂಪರ್ಕ

08/10/2025 6:55 PM

ಹೀಗಿದೆ ನಾಡಿನ ಸುಪ್ರಸಿದ್ಧ ಹಾಸನಾಂಬ ದೇವಿ ದರ್ಶನ ಮತ್ತು ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳ ವಿವರ

08/10/2025 6:48 PM

ರಾತ್ರಿ ಮಲಗುವಾಗ ಯಾವ ದಿಕ್ಕಿಗೆ ತಲೆ ಇಟ್ಟುಕೊಂಡು ಮಲಗಬೇಕು? ಇಲ್ಲಿದೆ ಓದಿ

08/10/2025 6:44 PM

“ಉಗ್ರರ ಬಗ್ಗೆ ಮೃದು ಧೋರಣೆ, 26/11 ಮುಂಬೈ ದಾಳಿ ಬಳಿಕ ಕಾಂಗ್ರೆಸ್ ಶರಣಾಯ್ತು” ; ಪ್ರಧಾನಿ ಮೋದಿ

08/10/2025 6:23 PM
State News
KARNATAKA

BREAKING: ರಾಜ್ಯ ಸರ್ಕಾರದಿಂದ CC, OC ಪಡೆಯದೇ ಮನೆ ಕಟ್ಟಿರುವ ಮಾಲೀಕರಿಗೆ ಗುಡ್ ನ್ಯೂಸ್: ಸರ್ಕಾರದಿಂದ ವಿದ್ಯುತ್, ನೀರು ಸಂಪರ್ಕ

By kannadanewsnow0908/10/2025 6:55 PM KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರದಿಂದ ಸಿಸಿ, ಓಸಿ ಪಡೆಯದೇ ಕಟ್ಟಿರುವಂತ ಮನೆಯ ಮಾಲೀಕರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಅದೇ 1200 ಅಡಿಯಲ್ಲಿ…

ಹೀಗಿದೆ ನಾಡಿನ ಸುಪ್ರಸಿದ್ಧ ಹಾಸನಾಂಬ ದೇವಿ ದರ್ಶನ ಮತ್ತು ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳ ವಿವರ

08/10/2025 6:48 PM

ರಾತ್ರಿ ಮಲಗುವಾಗ ಯಾವ ದಿಕ್ಕಿಗೆ ತಲೆ ಇಟ್ಟುಕೊಂಡು ಮಲಗಬೇಕು? ಇಲ್ಲಿದೆ ಓದಿ

08/10/2025 6:44 PM

ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ: ಇಲ್ಲಿದೆ ರಾಶಿ – ದಿಕ್ಕು – ಗ್ರಹ ಬಗ್ಗೆ ಸಂಪೂರ್ಣ ಡೀಟೆಲ್ಸ್

08/10/2025 6:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.