ಬೆಂಗಳೂರು : ಸರ್ಕಾರಿ ಶಾಲೆಗಳಿಗೆ ಗಣತಿ ಕಾರ್ಯದ ನಿಮಿತ್ತ ರಜೆ ನೀಡಿರುವ ಕುರಿತು ಬಿಜೆಪಿ ನಾಯಕರು ವ್ಯಕ್ತಪಡಿಸಿರುವ ಅಸಮಾಧಾನಕ್ಕೆ ತೀವ್ರ ಪ್ರತಿಕ್ರಿಯೆ ನೀಡಿರುವ ಸಚಿವ ಬೋಸರಾಜು ಅವರು, ಬಿಜೆಪಿ ನಾಯಕರ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಅಭಿವೃದ್ಧಿಯ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲದ ಬಿಜೆಪಿ ನಾಯಕರು, ಕೇಂದ್ರ ಸರ್ಕಾರದ ವಿಫಲತೆ ಮತ್ತು ಮಲತಾಯಿ ಧೋರಣೆಯನ್ನು ಮರೆಮಾಚಲು ಕೇವಲ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಗಣತಿ ಸಹಕಾರ: ಬಿಜೆಪಿಯಿಂದ ರಾಜಕೀಯ ಆರೋಪ
ರಾಜ್ಯ ಸರ್ಕಾರದ ಗಣತಿ ಕಾರ್ಯವು ಯಶಸ್ವಿಯಾಗಿ ನಡೆಯುತ್ತಿದ್ದು, ಗ್ರಾಮೀಣ ಭಾಗದಲ್ಲಿ ಈಗಾಗಲೇ ಶೇ. 92 ರಿಂದ 93 ರಷ್ಟು ಕೆಲಸ ಪೂರ್ಣಗೊಂಡಿದೆ. ರಾಜ್ಯದ ಜನತೆ ಸಂಪೂರ್ಣ ಸಹಕಾರ ನೀಡುತ್ತಿರುವಾಗ, ಈ ಕಾರ್ಯಕ್ಕೆ ಸಹಕಾರ ನೀಡದೆ ಕೇವಲ ರಾಜಕೀಯ ಮಾಡುತ್ತಿರುವವರು ಬಿಜೆಪಿ ನಾಯಕರು ಮಾತ್ರ. “ಬಿಜೆಪಿ ಆರೋಪ ಮಾಡಿದರೆ ಯಾರೂ ಚರ್ಚೆ ಮಾಡಲ್ಲ, ಅವರಲ್ಲಿ ಇರುವುದು ಕೇವಲ ನಾಲ್ಕು ಜನ ಲೀಡರ್ ಗಳು. ಅವರು ತಮ್ಮಷ್ಟಕ್ಕೆ ತಾವೇ ಮಾತನಾಡುತ್ತಾ ಇರುತ್ತಾರೆ,” ಎಂದು ಬೋಸರಾಜು ವ್ಯಂಗ್ಯವಾಡಿದರು.
ಶ್ರೀ ಪ್ರಹ್ಲಾದ್ ಜೋಶಿ, ವಿಜಯೇಂದ್ರ, ಆರ್ ಅಶೋಕ್, ನಾರಾಯಣಸ್ವಾಮಿಯಂತಹ ನಾಯಕರಿಗೆ ರಾಜ್ಯದ ಅಭಿವೃದ್ಧಿ ಬಿಟ್ಟು ಸರ್ಕಾರ ಏನೇ ಮಾಡಿದರೂ ಅದನ್ನು ‘ಕೌಂಟರ್’ ಮಾಡುವುದೇ ಕೆಲಸವಾಗಿದೆ. ರಾಜ್ಯದ ಪ್ರವಾಹ ಮತ್ತು ಸಂಕಷ್ಟದ ಪರಿಸ್ಥಿತಿಯ ಬಗ್ಗೆಯಾಗಲೀ, ಕೇಂದ್ರ ಸರ್ಕಾರ ತೋರಿಸುತ್ತಿರುವ ಮಲತಾಯಿ ಧೋರಣೆಯ ಬಗ್ಗೆಯಾಗಲೀ ಇವರಿಗೆ ಯಾವುದೇ ಚಿಂತನೆಯಿಲ್ಲ ಎಂದು ಅವರು ಟೀಕಿಸಿದರು.
ಅನುದಾನ ತಾರತಮ್ಯ: ದೆಹಲಿಗೆ ಹೋಗಿ ಒತ್ತಾಯ ಮಾಡಿ
ಕೇಂದ್ರದ ಅನುದಾನ ಹಂಚಿಕೆಯಲ್ಲಿನ ತಾರತಮ್ಯದ ಬಗ್ಗೆ ಧ್ವನಿ ಎತ್ತಿದ ಸಚಿವ ಎನ್ ಎಸ್ ಭೋಸರಾಜು, “ರಾಜ್ಯವು ನಾಲ್ಕುವರೆ ಲಕ್ಷ ಕೋಟಿ ತೆರಿಗೆಯನ್ನು ಕೇಂದ್ರಕ್ಕೆ ಕಟ್ಟುತ್ತಿದ್ದರೂ, ನಮಗೆ ಬರುವುದು ಕೇವಲ 60,000 ಕೋಟಿ ಮಾತ್ರ. ಇದರ ಬಗ್ಗೆ ಬಿಜೆಪಿಯವರು ಇಲ್ಲಿ ಟೀಕೆ ಮಾಡುವುದನ್ನು ಬಿಟ್ಟು ದೆಹಲಿಗೆ ಹೋಗಿ ಕೇಂದ್ರ ಸರ್ಕಾರದ ಮೇಲೆ ಒತ್ತಾಯ ಏಕೆ ಮಾಡಬಾರದು?” ಎಂದು ಪ್ರಶ್ನಿಸಿದರು. ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಕ್ಕೆ 38,000 ಕೋಟಿ ನಷ್ಟವಾಗಿದೆ ಎಂದು ವರದಿ ಕಳುಹಿಸಿದಾಗ ಕೇಂದ್ರದಿಂದ ‘ಮುಖದರ್ಶನ’ ಬಿಟ್ಟು ಬೇರೆ ಏನೂ ಸಿಗಲಿಲ್ಲ ಎಂದು ಹೇಳಿದರು.
ಗ್ಯಾರಂಟಿಗಳು ಯಶಸ್ವಿ: ‘ಬಿಜೆಪಿ ನಾಯಕರಿಗೆ ನಾಚಿಕೆ ಇದೆಯೇ?’
“ಪ್ರಧಾನಿ ನರೇಂದ್ರ ಮೋದಿ ಅವರಿಂದಲೂ ಮಾಡಲು ಸಾಧ್ಯವಾಗದಂತಹ ಗ್ಯಾರಂಟಿ ಯೋಜನೆಗಳನ್ನು ನಮ್ಮ ಸರ್ಕಾರ ಯಶಸ್ವಿಯಾಗಿ ಜಾರಿಗೊಳಿಸಿದೆ. ಇದನ್ನು ಕಂಡಾದರೂ ಬಿಜೆಪಿ ನಾಯಕರಿಗೆ ಏನಾದರೂ ನಾಚಿಕೆ ಇದೆಯೇ? ಅವರಿಗೆ ಅಭಿವೃದ್ಧಿ ಬಗ್ಗೆ ಚಿಂತನೆ ಇದೆಯೇ?” ಎಂದು ಸಚಿವರು ಪ್ರಶ್ನಿಸಿದರು. ರಾಜ್ಯದ ಜನತೆಯು ಕೂಡ ಬಿಜೆಪಿ ನಾಯಕರಿಗೆ ಬೇರೆ ಕೆಲಸವಿಲ್ಲ, ಅವರು ಬರೀ ಟೀಕಿಸುತ್ತಲೇ ಇರುತ್ತಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಕೇಂದ್ರ ಸಚಿವರು ಗಣತಿ ಕಾರ್ಯಕ್ಕೆ ಸಹಕಾರ ಕೊಡಬಾರದು ಎಂದು ಹೇಳುವುದು ಎಷ್ಟು ಸರಿ? ಇಲ್ಲಿರುವ ಬಿಜೆಪಿ ನಾಯಕರು ತಮ್ಮ ವೈಯಕ್ತಿಕ ಗುರುತಿಗಾಗಿ ಮಾತ್ರ ಪದೇ ಪದೇ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಬೋಸರಾಜು ತೀವ್ರ ಆಕ್ರೋಶ ವ್ಯಕ್ತಪಡಿಸಿ, ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಬಿಜೆಪಿ ತನ್ನ ರಾಜಕೀಯ ಬಿಟ್ಟು ಸಹಕಾರ ನೀಡಬೇಕೆಂದು ಆಗ್ರಹಿಸಿದರು.
ಉತ್ತರ ಕರ್ನಾಟಕ ಪ್ರವಾಹ ರಾಜಕೀಯ ಹೇಳಿಕೆ ಬಿಟ್ಟು ಅನುದಾನಕ್ಕೆ ತನ್ನಿ
ಉತ್ತರ ಕರ್ನಾಟಕದಲ್ಲಿ ಪ್ರವಾಹ ಹಾಗೂ ಅತಿವೃಷ್ಟಿಯಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಸ್ವತಃ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸಮೀಕ್ಷೆ ನಡೆಸಿ 2000 ಕೋಟಿಯಷ್ಟು ಎನ್‌ಡಿಆರ್‌ಎಫ್ ಮಾರ್ಗಸೂಚಿಗಳಿಗಿಂತಲೂ ಡಬಲ್ ಪರಿಹಾರ ಘೋಷಣೆ ಮಾಡಿದ್ದಾರೆ. ಇಂತಹ ಸಂಧರ್ಭದಲ್ಲಿ ಬಿಜೆಪಿ ನಾಯಕರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವುದನ್ನು ಬಿಟ್ಟು ಕೇಂದ್ರ ಸರ್ಕಾರದ ಮೇಲೆ ಒತ್ತಾಯ ಹೇರಿ ಉತ್ತರ ಕರ್ನಾಟಕದ ಜನರನ್ನು ಸಂಕಷ್ಟ ನೀಗಿಸಲು ಪರಿಹಾರ ದೊರಕಿಸಿಕೊಡುವ ಪ್ರಯತ್ನ ಮಾಡುವುದು ಸೂಕ್ತ. ನಿಮ್ಮ ಹೇಳಿಕೆಗಳು ಮತ್ತು ಟೀಕೆಗಳಿಗೆ ರಾಜ್ಯದ ಜನರು ಬೇಸತ್ತಿದ್ದಾರೆ ಎಂದರು.
ನಾಳೆ ಸಿಎಂ, ಡಿಸಿಎಂ ರಾಜ್ಯದ 525 ಗ್ರಾಮ ಪಂಚಾಯ್ತಿಗಳಲ್ಲಿ ನೀರಿದ್ದರೆ ನಾಳೆ ಯೋಜನೆಗೆ ಚಾಲನೆ: ಸಚಿವ ಎನ್.ಎಸ್ ಭೋಸರಾಜು
‘ಸ್ಥಳೀಯರಿಗೆ ಉದ್ಯೋಗ’ ನೀಡುವ ನಿಟ್ಟಿನಲ್ಲಿ ಸಾಗರದಲ್ಲಿ ‘ರಾಯಲ್ ಎನ್ ಫೀಲ್ಡ್ ಶೋ ರೂಂ’ ಓಪನ್: RBD ಮಹೇಶ್