ನವದೆಹಲಿ : ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಪಂಜಾಬಿ ಖ್ಯಾತ ಗಾಯಕ ರಾಜ್ ವೀರ್ ಜವಾಂಡಾ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.
ಆಸ್ಪತ್ರೆಯಲ್ಲಿ ಸುಮಾರು ಎರಡು ವಾರಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ನಿಧನರಾದರು. ಅವರಿಗೆ 35 ವರ್ಷ ವಯಸ್ಸಾಗಿತ್ತು. ತಮ್ಮ ಭಾವಪೂರ್ಣ ಧ್ವನಿ ಮತ್ತು ಹಿಟ್ ಹಾಡುಗಳಿಗೆ ಹೆಸರುವಾಸಿಯಾಗಿದ್ದ ಗಾಯಕ, ಕಳೆದ ತಿಂಗಳ ಕೊನೆಯಲ್ಲಿ ಪಿಂಜೋರ್ ಬಳಿ ನಡೆದ ರಸ್ತೆ ಅಪಘಾತದ ನಂತರ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಆಸ್ಪತ್ರೆಯ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ರಾಜವೀರ್ ಅವರ ಸ್ಥಿತಿ ಸುಧಾರಿಸಲಿಲ್ಲ. ಪಂಜಾಬ್ ವಿಧಾನಸಭಾ ಸದಸ್ಯ ಪ್ರತಾಪ್ ಸಿಂಗ್ ಬಜ್ವಾ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿಯನ್ನು ದೃಢಪಡಿಸಿದರು. ಬಿಜೆಪಿ ಪಂಜಾಬ್ ಉಪಾಧ್ಯಕ್ಷ ಫತೇಹ್ ಜಂಗ್ ಸಿಂಗ್ ಬಜ್ವಾ ಕೂಡ ರಾಜವೀರ್ ಜವಾಂದ ಅವರ ನಷ್ಟಕ್ಕೆ ಸಂತಾಪ ಸೂಚಿಸಿದರು.
Deeply saddened by the passing of Rajvir Jaivanda ji. Though we all prayed for his speedy recovery, destiny had other plans. My heartfelt condolences to his family, friends, and admirers who are devastated by this untimely loss. May Waheguru bless his soul with eternal peace and… pic.twitter.com/0M7XSRXHEV
— Fatehjung Singh Bajwa (@fatehbajwa2) October 8, 2025