ಉತ್ತರ ಪ್ರದೇಶದ ಸೀತಾಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ರಾತ್ರಿಯಲ್ಲಿ ಹಾವಾಗುತ್ತಾಳೆ ಎಂದು ಹೇಳಿಕೊಂಡಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ವರದಿಯ ಪ್ರಕಾರ, ಮೆರಾಜ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ ತನ್ನ ಪತ್ನಿ ನಸೀಮುನ್ ಅವರಿಂದ ರಕ್ಷಣೆ ಕೋರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರನ್ನು ಸಂಪರ್ಕಿಸಿದ್ದಾನೆ. ಸಮಾಧಾನ್ ದಿವಸ್ ಸಂದರ್ಭದಲ್ಲಿ, ಮೆರಾಜ್ ತನ್ನ ತೊಂದರೆಗಳನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ವಿವರಿಸಿ, “ಸರ್, ನನ್ನ ಹೆಂಡತಿ ರಾತ್ರಿಯಲ್ಲಿ ಹಾವಾಗುತ್ತಾಳೆ ಮತ್ತು ನನ್ನನ್ನು ಹೆದರಿಸುತ್ತಾಳೆ” ಎಂದು ಹೇಳಿದನು ಎಂದು ವರದಿಯಾಗಿದೆ. ತನ್ನ ಹೆಂಡತಿ ರಾತ್ರಿಯಲ್ಲಿ ಹಾವಾಗುತ್ತಾಳೆ ಎಂದು ಆ ವ್ಯಕ್ತಿ ಡಿಎಂಗೆ ತಿಳಿಸಿದ್ದಾನೆ.