Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

29 ರಾಜ್ಯಗಳಲ್ಲಿ ‘ವಾಣಿಜ್ಯ LPG’ ಮಾರಾಟ ಆರಂಭ ; ಸರತಿ ಸಾಲಲ್ಲಿ ನಿಲ್ಲಬೇಕಿಲ್ಲ, IVRS, SMS, ವಾಟ್ಸಾಪ್ ಮೂಲಕ ಬುಕ್ ಮಾಡಿ!

14/03/2026 9:25 PM

BREAKING : ‘ಆಕ್ರಮಣಕಾರಿ ಕೃತ್ಯ’ : ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವಾಯುದಾಳಿಗೆ ಭಾರತ ಖಂಡನೆ

14/03/2026 9:13 PM

ಕರ್ನಾಟಕದಲ್ಲಿ ಎಲ್‌ಪಿಜಿ ಅಭಾವ ಎಫೆಕ್ಟ್; ‘ಇಂದಿರಾ ಕ್ಯಾಂಟೀನ್’​​ಗಳು ಬಂದ್ ಭೀತಿ!

14/03/2026 9:08 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಕೆಯುಡಬ್ಲೂಜೆ ಗ್ರಂಥಾಲಯ’ವನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಉದ್ಘಾಟನೆ
KARNATAKA

‘ಕೆಯುಡಬ್ಲೂಜೆ ಗ್ರಂಥಾಲಯ’ವನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಉದ್ಘಾಟನೆ

By kannadanewsnow0906/10/2025 9:15 PM

ಬೆಂಗಳೂರು: ಇಂದಿನ ಡಿಜಿಟಲ್ ಯುಗದಿಂದಾಗಿ ಪುಸ್ತಕ ಓದುವ ಹವ್ಯಾಸವು ದೂರವಾಗಿರುವುದು ವಿಷಾದಕರ. ಪತ್ರಕರ್ತರು ನಿರಂತರವಾಗಿ ಓದುವ ಹವ್ಯಾಸದಲ್ಲಿ ತೊಡಗಿಕೊಂಡರೆ ಮಾತ್ರ ಜ್ಞಾನ ಸಂಪಾದಿಸಿಕೊಂಡು, ವೃತ್ತಿ ಬದ್ಧತೆ ತೋರಿಸಲು ಸಾಧ್ಯ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಅಭಿಪ್ರಾಯಪಟ್ಟರು.

ಕಂದಾಯ ಭವನದಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) ಕಚೇರಿಯಲ್ಲಿ ಸಂಘದ ಸದಸ್ಯರಿಗಾಗಿ ಸ್ಥಾಪಿಸಿರುವ ಗ್ರಂಥಾಲಯ ಸೌಲಭ್ಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಬಹುತೇಕ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳೇ ರಾರಾಜಿಸುತ್ತವೆ. ಪತ್ರಕರ್ತರು ಸದಾ ವಸ್ತುನಿಷ್ಠ ವರದಿಗಳಿಗೆ ಗಮನ ನೀಡಿದರಷ್ಟೇ ಪತ್ರಿಕೋದ್ಯಮ ಮೌಲ್ಯ ಉನ್ನತಿಗೇರಲು ಸಾಧ್ಯ ಎಂದೂ ಅವರು ಹೇಳಿದರು.

ಜಿಲ್ಲಾಧಿಕಾರಿಯಾಗಿ ನಾನು ಬಂದ ಮೇಲೆ ಬೆಂಗಳೂರಿನಲ್ಲಿ ಸುಮಾರು 300 ಎಕರೆ ಅಕ್ರಮ ಒತ್ತುವರಿ ತೆರವು ಮಾಡಲಾಗಿದೆ. ಯಾವುದೇ ಸಂದರ್ಭಗಳಲ್ಲಿ ಯಾವುದೇ ಒತ್ತಡಕ್ಕೂ ಮಣಿಯದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ತನ್ನಿಂದ ಸಾಧ್ಯವಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಹಿರಿಯ ಪತ್ರಕರ್ತರಾದ ಕಂ.ಕ.ಮೂರ್ತಿ, ಪುಸ್ತಕಗಳು ಜ್ಞಾನದ ಭಂಡಾರವಾಗಿದ್ದು, ಪತ್ರಕರ್ತರು ಪುಸ್ತಕಗಳ ಓದಿನತ್ತ ಹೆಚ್ಚಿನ ಒಲವನ್ನು ತೋರಿಸಿದರೆ ಮಾತ್ರ ಪ್ರಬುದ್ಧರಾಗಲು ಸಾಧ್ಯ. ಸಾಹಿತ್ಯ ಕೃತಿಗಳು ಪತ್ರಕರ್ತರಿಗೆಂದೂ ಮಾರ್ಗದರ್ಶಿಯಾಗುತ್ತವೆ. ಇದನ್ನು ತಮ್ಮ ಬದುಕಿನಲ್ಲಿಯೂ ಅಳವಡಿಸಿಕೊಂಡಿದ್ದೇವೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಈಗಾಗಲೇ ನಮ್ಮ ಸಂಘವು ತನ್ನ ಸದಸ್ಯರಿಗೆ ಹಲವು ಸೌಲಭ್ಯಗಳನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಆ ನಿಟ್ಟಿನಲ್ಲಿ ಇದೀಗ ಗ್ರಂಥಾಲಯವೂ ಕೂಡಾ ಸಹಕಾರಿಯಾಗಲಿ ಎನ್ನುವ ಉದ್ದೇಶದಿಂದ ಈ ಪ್ರಯತ್ನ ಮಾಡಲಾಗಿದೆ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ಸಂಘದ ರಾಜ್ಯ ಉಪಾಧ್ಯಕ್ಷರುಗಳಾದ ಭವಾನಿ ಸಿಂಗ್ ಠಾಕೂರ್, ಅಜಮಾಡು ಕುಟ್ಟಪ್ಪ, ಪುಂಡಲೀಕ ಬಾಳೋಜಿ, ಕಾರ್ಯದರ್ಶಿಗಳಾದ ಮತ್ತೀಕೆರೆ ಜಯರಾಮ್, ಸೋಮಶೇಖರ ಕೆರೆಗೋಡು, ನಿಂಗಪ್ಪ ಚಾವಡಿ, ಖಜಾಂಚಿ ವಾಸುದೇವ ಹೊಳ್ಳ ಮತ್ತು ಸಂಘದ ವಿವಿಧ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶಿವಮೊಗ್ಗ: ಹೆಚ್ಚಿನ ಬಡ್ಡಿ ಆಸೆಗೆ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಹೋಡಿಕೆ ಮಾಡಬೇಡಿ- ಶಾಸಕ ಗೋಪಾಲಕೃಷ್ಣ ಬೇಳೂರು ಕಿವಿಮಾತು

BREAKING: ರಾಜ್ಯ ಸರ್ಕಾರದಿಂದ ‘ಹಾಸನಾಂಭ ಉತ್ಸವ’ದ ವೇಳೆ ‘VIP ಸಂಪ್ರದಾಯ’ಕ್ಕೆ ಬ್ರೇಕ್, ‘ಜನಸ್ನೇಹಿ ಉತ್ಸವ’ಕ್ಕೆ ಅಂಕಿತ

Share. Facebook Twitter LinkedIn WhatsApp Email

Related Posts

ಕರ್ನಾಟಕದಲ್ಲಿ ಎಲ್‌ಪಿಜಿ ಅಭಾವ ಎಫೆಕ್ಟ್; ‘ಇಂದಿರಾ ಕ್ಯಾಂಟೀನ್’​​ಗಳು ಬಂದ್ ಭೀತಿ!

14/03/2026 9:08 PM1 Min Read

ಮಂಡ್ಯ ಜಿಲ್ಲೆಯಲ್ಲಿ ಅನಿಲ ಸರಬರಾಜು ವ್ಯತ್ಯಯ ಆತಂಕ ಬೇಡ; ಜಿಲ್ಲಾಧಿಕಾರಿಗಳ ಅಭಯ

14/03/2026 9:03 PM1 Min Read

ಮಂಡ್ಯದ ಮದ್ದೂರಿನ ಗೊರವನಹಳ್ಳಿ ಗ್ರಾಮದಲ್ಲಿ ಲಘು ಲಾಠಿಚಾರ್ಜ್, ಉದ್ವಿಗ್ನ ವಾತಾವರಣ

14/03/2026 8:57 PM2 Mins Read
Recent News

29 ರಾಜ್ಯಗಳಲ್ಲಿ ‘ವಾಣಿಜ್ಯ LPG’ ಮಾರಾಟ ಆರಂಭ ; ಸರತಿ ಸಾಲಲ್ಲಿ ನಿಲ್ಲಬೇಕಿಲ್ಲ, IVRS, SMS, ವಾಟ್ಸಾಪ್ ಮೂಲಕ ಬುಕ್ ಮಾಡಿ!

14/03/2026 9:25 PM

BREAKING : ‘ಆಕ್ರಮಣಕಾರಿ ಕೃತ್ಯ’ : ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ವಾಯುದಾಳಿಗೆ ಭಾರತ ಖಂಡನೆ

14/03/2026 9:13 PM

ಕರ್ನಾಟಕದಲ್ಲಿ ಎಲ್‌ಪಿಜಿ ಅಭಾವ ಎಫೆಕ್ಟ್; ‘ಇಂದಿರಾ ಕ್ಯಾಂಟೀನ್’​​ಗಳು ಬಂದ್ ಭೀತಿ!

14/03/2026 9:08 PM

ಮಂಡ್ಯ ಜಿಲ್ಲೆಯಲ್ಲಿ ಅನಿಲ ಸರಬರಾಜು ವ್ಯತ್ಯಯ ಆತಂಕ ಬೇಡ; ಜಿಲ್ಲಾಧಿಕಾರಿಗಳ ಅಭಯ

14/03/2026 9:03 PM
State News
KARNATAKA

ಕರ್ನಾಟಕದಲ್ಲಿ ಎಲ್‌ಪಿಜಿ ಅಭಾವ ಎಫೆಕ್ಟ್; ‘ಇಂದಿರಾ ಕ್ಯಾಂಟೀನ್’​​ಗಳು ಬಂದ್ ಭೀತಿ!

By kannadanewsnow0914/03/2026 9:08 PM KARNATAKA 1 Min Read

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧವು ಈಗ ಕರುನಾಡಿನ ಅಡುಗೆ ಮನೆಯವರೆಗೂ ತಲುಪಿದೆ. ವಾಣಿಜ್ಯ ಸಿಲಿಂಡರ್‌ಗಳ ತೀವ್ರ ಅಭಾವದಿಂದಾಗಿ ಹೋಟೆಲ್ ಉದ್ಯಮ,…

ಮಂಡ್ಯ ಜಿಲ್ಲೆಯಲ್ಲಿ ಅನಿಲ ಸರಬರಾಜು ವ್ಯತ್ಯಯ ಆತಂಕ ಬೇಡ; ಜಿಲ್ಲಾಧಿಕಾರಿಗಳ ಅಭಯ

14/03/2026 9:03 PM

ಮಂಡ್ಯದ ಮದ್ದೂರಿನ ಗೊರವನಹಳ್ಳಿ ಗ್ರಾಮದಲ್ಲಿ ಲಘು ಲಾಠಿಚಾರ್ಜ್, ಉದ್ವಿಗ್ನ ವಾತಾವರಣ

14/03/2026 8:57 PM

ಮಾತ್ರೆ ಬೇಡ, ಮದ್ದು ಬೇಡ: ನಿಮ್ಮ ಲೈಂಗಿಕ ಜೀವನಕ್ಕೆ ಇಲ್ಲಿವೆ 6 ನೈಸರ್ಗಿಕ ಸೀಕ್ರೆಟ್ಸ್ !

14/03/2026 8:55 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.