ದಾವಣಗೆರೆ: ಆ ವಿದ್ಯಾರ್ಥಿ ಓದಿನಲ್ಲೂ ಚುರುಕು, ಆಟದಲ್ಲೂ ಮುಂದು. ಕಬ್ಬಡಿ ಆಟ ಆಡುವಾಗ ಬಿದ್ದಾಗ ಕೈ ಮುರಿದಿದೆ. ಇದಕ್ಕಾಗಿ ಸಾವಿರಾರು ರೂಪಾಯಿ ಖರ್ಚಾಗಿದೆ. ಅಷ್ಟು ಹಣ ಹೊಂದಿಸಲು ಪರದಾಡುತ್ತಿದ್ದಾರೆ. ಇಂತಹ ಬಡ ವಿದ್ಯಾರ್ಥಿ ನಿಮ್ಮ ಸಹಾಯದ ನಿರೀಕ್ಷಿಸಿದೆ.
ಈ ಕುರಿತು ಶಾಲೆಯ ಮುಖ್ಯ ಶಿಕ್ಷಕ ಬಸಲಿಂಗಪ್ಪ ಹುಗ್ಗಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ವಿದ್ಯಾರ್ಥಿ ಚನ್ನಗಿರಿ ತಾಲ್ಲೂಕಿನ ಶ್ರೀ ಮಹಾರುದ್ರಸ್ವಾಮಿ ಪ್ರೌಢ ಶಾಲೆಯ ವಸತಿ ನಿಲಯದಲ್ಲಿ 8ನೇ ತರಗತಿ ಓದುತ್ತಿದ್ದಾನೆ. ಈತ ಮೂಲತಃ ಹರಪನಹಳ್ಳಿ ತಾಲೂಕಿನವನಾಗಿದ್ದು ಅತ್ಯಂತ ಬಡ ವಿದ್ಯಾರ್ಥಿಯಾಗಿದ್ದಾನೆ ಎಂದು ಹೇಳಿದ್ದಾರೆ.
ನಮ್ಮ ಶಾಲೆಯಲ್ಲಿ ಕಬಡ್ಡಿ ಆಡುವಾಗ ಬಿದ್ದು ಕೈ ಮುರಿದಿದ್ದು ಹೊಸಪೇಟೆಯ ಪುತ್ತೂರು ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದು. ಸುಮಾರು 50,000 . ವೆಚ್ಚವಾಗಿದ್ದು ನಮ್ಮ ಶಾಲೆಯಿಂದ ನಾನು ಮತ್ತು ನಮ್ಮ ಶಿಕ್ಷಕರು ಸೇರಿ ರೂ.20,000ಗಳನ್ನು ಶಸ್ತ್ರ್ರ ಚಿಕಿತ್ಸೆಗೆ ನೀಡಿದ್ದೇವೆ. ಉಳಿದ ಹಣವನ್ನು ಪೋಷಕರು ಬರಿಸುವ ಸ್ಥಿತಿಯಲ್ಲಿಲ್ಲ. ಆದ್ದರಿಂದ ನಿಮ್ಮ ಕೈಲಾದ ಸಹಾಯವನ್ನು ಈ ಬಡ ವಿದ್ಯಾರ್ಥಿಗೆ ಮಾಡುವಂತೆ ವಿನಂತಿಸಿದ್ದಾರೆ.
ವಿದ್ಯಾರ್ಥಿ ಪೋಷಕರ ಯಾವುದೇ ಫೋನ್ ಪೇ ನಂಬರ್ ಇಲ್ಲದಿರುವುದರಿಂದ ದಯವಿಟ್ಟು ನನ್ನ ನಂಬರಿಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.
ಪೋನ್ ಪೇ, ಜೀ ಪೇ ನಂಬರ್ 9743700082.
ಬಸಲಿಂಗಪ್ಪ ಹುಗ್ಗಿ, ಮುಖ್ಯ ಶಿಕ್ಷಕರು ಶ್ರೀ ಮಹಾರುದ್ರಸ್ವಾಮಿ ಪ್ರೌಢಶಾಲೆ ನಲ್ ಕುದುರೆ ಗೋಮಾಳ ಚನ್ನಗಿರಿ ತಾಲೂಕ್, ದಾವಣಗೆರೆ ಜಿಲ್ಲೆ.