ರಾಯಚೂರು: ಕಾಂತಾರಾ ಸಿನಿಮಾ ನೋಡಲು ಹೋಗಿದ್ದ ಇಬ್ಬರು ಯುವಕರು ನಾಲೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದಲ್ಲಿ ನಡೆದಿದೆ.
ಮಸ್ಕಿ ಪಟ್ಟಣದ ಹೊರ ವಲಯದಲ್ಲಿ ಈಜಲು ಹೋಗಿದ್ದ ಮುದಗಲ್ ಪಟ್ಟಣದ ವೆಂಕಟೇಶ(28), ಯಲ್ಲಾಲಿಂಗ(28) ಮೃತಪಟ್ಟಿದ್ದಾರೆ. ಮುದುಗಲ್ ನಿಂದ ಮಸ್ಕಿಗೆ ‘ಕಾಂತಾರ ಚಾಪ್ಟರ್ 1’ ಸಿನಿಮಾ ನೋಡಲು ಬಂದಿದ್ದರು. ಮಧ್ಯಾಹ್ನದ ಪ್ರದರ್ಶನಕ್ಕೆ ಟಿಕೆಟ್ ಸಿಗದ ಕಾರಣ ನಾಲೆಯಲ್ಲಿ ಈಜಲು ಹೋಗಿದ್ದರು.
ಈಜು ಬಾರದಿದ್ದ ಕಾರಣ ನಾಲೆಯಲ್ಲಿ ಯಲ್ಲಾಲಿಂಗ ಕೊಚ್ಚಿ ಹೋಗಿದ್ದಾನೆ. ಆತನ ರಕ್ಷಣೆ ಮಾಡಲು ಹೋಗಿ ವೆಂಕಟೇಶನೂ ಸಾವನ್ನಪ್ಪಿದ್ದಾನೆ. ಸಿರವಾರ ಬಳಿ ವೆಂಕಟೇಶ, ಯಲ್ಲಾಲಿಂಗ ಶವಗಳು ಪತ್ತೆಯಾಗಿವೆ. ರಾಯಚೂರು ಜಿಲ್ಲೆ ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.