ಶಿವಮೊಗ್ಗ : ನ್ಯಾಯಾಂಗ ಸೇವೆಗೆ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಕಾನೂನು ಸೇವೆಯನ್ನು ಕೇವಲ ಉದ್ಯೋಗವಾಗಿ ನೋಡಬೇಡಿ. ಪ್ರಾಮಾಣಿಕತೆ, ಸಹನೆ ಮತ್ತು ಕಠಿಣ ಪರಿಶ್ರಮ ಈ ವೃತ್ತಿಯ ಮೂಲಭೂತ ಅಸ್ತ್ರ ಅಧ್ಯಯನಕ್ಕೆ ಆದ್ಯತೆ ನೀಡಿ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಜೆ.ಎಂ.ಖಾಜಿ ಹೇಳಿದರು.
ಇಂದು ಶಿವಮೊಗ್ಗದ ಸಾಗರದ ವಕೀಲರ ಭವನದಲ್ಲಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದಂತ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದಂತ ಅವರು, ನ್ಯಾಯಾಂಗ ಸೇವೆ ಎಂದರೆ ಕೇವಲ ತೀರ್ಪುಗಳನ್ನು ನೀಡುವುದಲ್ಲ. ನ್ಯಾಯಾಂಗ ಸೇವೆ ನ್ಯಾಯಕ್ಕಾಗಿ ಬಾಗಿಲು ತಟ್ಟುವ ಪ್ರತಿಯೊಬ್ಬ ನಾಗರೀಕನ ಬದುಕನ್ನು ಸ್ಪರ್ಶಿಸುವ ಹೊಣೆಯಾಗಿರುತ್ತದೆ. ಶಿವಮೊಗ್ಗ, ಸಾಗರದ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುವಾಗ ಕಾನೂನು ಸೇವೆಯನ್ನು ಆಳವಾಗಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಿತು. ಸಾಗರ ನ್ಯಾಯಾಂಗ ಸೇವೆಗೆ ಮಾತ್ರವಲ್ಲದೇ ಸಾಹಿತ್ಯ ಮತ್ತು ನಿಸರ್ಗ ಪ್ರೇಮಕ್ಕೂ ಸಾಕ್ಷಿಯಾಗಿದೆ ಎಂದರು.
ನ್ಯಾಯಾಂಗ ಮತ್ತು ವಕೀಲ ವೃತ್ತಿ ಸಮಾಜದ ಎರಡು ಪ್ರಮುಖ ಸ್ತಂಭಗಳು. ವಕೀಲರು ತಮ್ಮ ವಾದಗಳ ಮೂಲಕ ಸತ್ಯವನ್ನು ಬೆಳಗಿಸುತ್ತಾರೆ. ನ್ಯಾಯಾಧೀಶರು ತೀರ್ಪುಗಳ ಮೂಲಕ ಅದಕ್ಕೆ ರೂಪ ನೀಡುತ್ತಾರೆ. ಬಾರ್ ಮತ್ತು ಬೆಂಚ್ಗಳು ಸಮಾಜದಲ್ಲಿ ವಿಶ್ವಾಸವನ್ನು ಉಳಿಸುವ ಜವಾಬ್ದಾರಿ ಹೊಂದಿರುತ್ತದೆ. ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಜನಸಾಮಾನ್ಯರ ಹಕ್ಕುಗಳನ್ನು ಕಾಪಾಡಿ ಸಮಯಕ್ಕೆ ಸರಿಯಾಗಿ ನ್ಯಾಯದಾನ ನೀಡುವ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಅವರು ಹೇಳಿದರು.
ಈ ವೇಳೆ ಸಾಗರದ ವಕೀಲರ ಸಂಘದ ಅಧ್ಯಕ್ಷ ಎಂ.ಬಿ.ಗಿರೀಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ವಕೀಲರ ಪರಿಷತ್ನ ಎಂ.ದೇವರಾಜ್, ನ್ಯಾಯಾಧೀಶರಾದ ಎಸ್.ನಟರಾಜ್, ದೀಪಾ ಕೆ.ಆರ್., ಮಾದೇಶ ಎಂ.ಬಿ. ಪ್ರಮುಖರಾದ ಶೇಖರಪ್ಪ, ಪರಿಮಳ, ಎಂ.ಬಿ.ಪುಟ್ಟಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು. ನ್ಯಾಯಾಂಗ ಕ್ಷೇತ್ರದಲ್ಲಿನ ಸವಾಲುಗಳ ಕುರಿತು ನ್ಯಾಯವಾದಿ ಜ್ಯೋತಿ ಕೋವಿ ಮಾತನಾಡಿದರು. ಹಿರಿಯ ನ್ಯಾಯವಾದಿ ಬಸಪ್ಪ ಗೌಡ ಕೆ. ಅಭಿನಂದನಾ ಭಾಷಣ ಮಾಡಿದರು. ಶಂಕರ್ ಸ್ವಾಗತಿಸಿದರು. ಪ್ರೇಮ್ ಸಿಂಗ್ ವಂದಿಸಿದರು. ಎಂ.ರಾಘವೇoದ್ರ ನಿರೂಪಿಸಿದರು.
ಬಂದ ಪುಟ್ಟ, ‘ಬೋರ್ಡ್ ನೆಟ್ಟು’ ಹೋದ ಪುಟ್ಟ: ಇದು ಸಾಗರದ ‘ಅರಣ್ಯಾಧಿಕಾರಿ’ಗಳ ‘ಒತ್ತುವರಿ ತೆರವು’ ಕಾರ್ಯಾಚರಣೆ
ಜಾತಿಗಣತಿ ವಿಷಯದಲ್ಲಿ ಗೊಂದಲ ಹೆಚ್ಚಾಗುತ್ತಿದೆ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ
BREAKING: ಬೆಂಗಳೂರಲ್ಲಿ ಘೋರ ದುರಂತ: ಬೃಹತ್ ಗಾತ್ರದ ಅರಳಿ ಮರ ಉರುಳಿ ಬಿದ್ದು ಯುವತಿ ಸ್ಥಳದಲ್ಲೇ ಸಾವು