ಬೆಂಗಳೂರು: ನಗರದಲ್ಲಿ ಬೃಹತ್ ಗಾತ್ರದ ಅರಳಿ ಮರ ಉರುಳಿ ಬಿದ್ದು ಯುವತಿಯೊಬ್ಬಳು ಸ್ಥಳದಲ್ಲೇ ಸ್ಥಳದಲ್ಲೇ ಸಾವನ್ನಪ್ಪಿರುವಂತ ಘೋರ ದುರಂತ ನಡೆದಿದೆ.
ಬೆಂಗಳೂರಿನ ಉತ್ತರ ತಾಲ್ಲೂಕಿನ ಸೋಲದೇವನಹಳ್ಳಿ ಠಾಣೆಯ ಬಳಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಬೆಂಗಳೂರಿನ ಆರ್ ಟಿ ನಗರದ ಕೀರ್ತನಾ(23) ಮರ ಬಿದ್ದು ಸಾವನ್ನಪ್ಪಿದಂತ ದುರ್ದೈವಿಯಾಗಿದ್ದಾರೆ.
ಸ್ಯಾಂಡರ್ ವುಡ್ ಪ್ರೀಮಿಯರ್ ಲೀಗ್ ನೋಡೋದಕ್ಕೆ ಕೀರ್ತನಾ ತೆರಳಿದ್ದರು. ಆಚಾರ್ಯ ಕಾಲೇಜು ಮೈದಾನದಲ್ಲಿ ಸ್ಯಾಂಡಲ್ ವುಡ್ ಪ್ರೀಮಿಯರ್ ಪಂದ್ಯಾವಳಿ ನಡೆದಿತ್ತು. ಸ್ನೇಹಿತೆ ಜೊತೆ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ ಮರಳ ಉರುಳಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂದ ಪುಟ್ಟ, ‘ಬೋರ್ಡ್ ನೆಟ್ಟು’ ಹೋದ ಪುಟ್ಟ: ಇದು ಸಾಗರದ ‘ಅರಣ್ಯಾಧಿಕಾರಿ’ಗಳ ‘ಒತ್ತುವರಿ ತೆರವು’ ಕಾರ್ಯಾಚರಣೆ