ಬೆಂಗಳೂರು: ನಗರದಲ್ಲಿ ಬೆಂಗಳೂರು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ನಾಕಾ ಚೆಕ್ ಪಾಯಿಂಟ್ ನಿಂದಾಗಿ ನಿಯಮ ಉಲ್ಲಂಘನೆ ಹಾಗೂ ಸೂಕ್ತ ದಾಖಲೆಗಳಿಲ್ಲದ 250 ವಾಹನಗಳ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತಂತೆ ಬೆಂಗಳೂರು ನಗರ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಅಕ್ಟೋಬರ್ 3, 4ರಂದು ಬೆಂಗಳೂರು ನಗರದಾಧ್ಯಂತ ಪ್ರದೇಶ ಆದಿಪತ್ಯ ಕಾರ್ಯಾಚರಣೆ ಹಾಗೂ ನಾಕಾ ಚೆಕ್ ಪಾಯಿಂಟ್ ಗಳ ಕರ್ತವ್ಯಕ್ಕೆ ಸುಮಾರು 1000 ಅಧಿಕಾರಿಗಳು, ಸ್ಬಬಂದಿಗಳನ್ನು ನೇಮಿಸಲಾಗಿತ್ತು ಎಂದಿದೆ.
ಎರಡು ದಿನ ವಿಶೇಷ ಕಾರ್ಯಾಚರಣೆ ನಡೆಸಿ ಸುಮಾರು 5000ಕ್ಕೂ ಹೆಚ್ಚು ವಾಹನಗಳ್ನು ತಪಾಸಣೆ ಮಾಡಿದ್ದಾರೆ. ಈ ವೇಳೆ ನಿಯಮ ಉಲ್ಲಂಘನೆ ಹಾಗೂ ಸೂಕ್ತ ದಾಖಲೆಗಳಿಲ್ಲದ ಕಾರಣ 250 ವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ ಎಂದು ಹೇಳಿದೆ.
ಇನ್ನೂ ಈ ಕಾರ್ಯಾಚರಣೆಯಲ್ಲಿ ಒಟ್ಟು 11 ಕಳವು ವಾಹನಗಳನ್ನು ಪತ್ತೆ ಮಾಡಿ, ವಶಕ್ಕೆ ಪಡೆಯಲಾಗಿದೆ. ಅಲ್ಲದೇ ನಾರ್ಕೋಟಿಕ್ಸ್ ಸಂಬಂಧ 16 ಪ್ರಕರಣಗಳನ್ನು ದಾಖಲಿಸಲಾಗಿದೆ. ಮದ್ಯಪಾನ ಮಾಡಿ ವಾಹನ ಚಲಾಯಿಸಿದವರ ವಿರುದ್ಧ ಹಾಗೂ ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ ಎಂದಿದೆ.
ಡಾರ್ಜಲಿಂಗ್ ನಲ್ಲಿ ಭಾರೀ ಮಳೆಗೆ 14 ಮಂದಿ ಬಲಿ: ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನ- ಪ್ರಧಾನಿ ಮೋದಿ