ಡಾರ್ಜಿಲಿಂಗ್ ನ ಮಿರಿಕ್ ಮತ್ತು ಸುಖಿಯಾ ಪೋಖಾರಿಯಲ್ಲಿ ಭೂಕುಸಿತದಿಂದ 14 ಜನರು ಸಾವನ್ನಪ್ಪಿದ್ದಾರೆ.
ಡಾರ್ಜಿಲಿಂಗ್ ಜಿಲ್ಲಾ ಪೊಲೀಸರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರಿ ಮಳೆಯಿಂದ ಉಂಟಾದ ಭೂಕುಸಿತದಿಂದಾಗಿ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದೆ. ಡಾರ್ಜಿಲಿಂಗ್ ಮತ್ತು ಸಿಲಿಗುರಿ ನಡುವಿನ ಮುಖ್ಯ ರಸ್ತೆಯನ್ನು ನಿರ್ಬಂಧಿಸಲಾಗಿದೆ.
ಭಾರೀ ಮಳೆಯಿಂದಾಗಿ ಜಲಪೈಗುರಿ, ಸಿಲಿಗುರಿ ಮತ್ತು ಕೂಚ್ ಬೆಹಾರ್ ಮೇಲೆ ಪರಿಣಾಮ ಬೀರಿದ್ದು, ಹಲವಾರು ಪ್ರದೇಶಗಳಲ್ಲಿ ಜಲಾವೃತವಾಗಿದೆ.
ರಸ್ತೆ ಅಡಚಣೆಗಳು
ಚಿತ್ರೆ, ಸೆಲ್ಫಿ ದಾರಾ ಮತ್ತು ಇತರ ಸ್ಥಳಗಳಲ್ಲಿ ಭೂಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿ 10 ಅನ್ನು ಅನೇಕ ಸ್ಥಳಗಳಲ್ಲಿ ನಿರ್ಬಂಧಿಸಲಾಗಿದೆ.
ಎನ್ ಎಚ್ ೭೧೭ ಎ ಅನ್ನು ಹಲವಾರು ಭೂಕುಸಿತ ಸ್ಥಳಗಳಲ್ಲಿ ತೆರವುಗೊಳಿಸಲಾಗುತ್ತಿದೆ.
ಪನ್ಬುವಿನಿಂದ ಕಾಲಿಂಪಾಂಗ್ ವರೆಗಿನ ರಸ್ತೆ ತೆರೆದಿರುತ್ತದೆ.
ಕಾಲಿಂಪಾಂಗ್ ನಿಂದ ತೀಸ್ತಾ ಬಜಾರ್ ಮೂಲಕ ಡಾರ್ಜಿಲಿಂಗ್ ಗೆ ಹೋಗುವ ರಸ್ತೆಯು ರಬಿಜೋರಾ ಮತ್ತು ತೀಸ್ತಾ ಬಜಾರ್ ಬಳಿ ಪ್ರವಾಹದಿಂದಾಗಿ ಮುಚ್ಚಲ್ಪಟ್ಟಿದೆ.
ಕೊರೊನೇಷನ್ ಸೇತುವೆಯ ಮೂಲಕ ಸಿಕ್ಕಿಂ ಮತ್ತು ಡಾರ್ಜಿಲಿಂಗ್ ಬೆಟ್ಟಗಳಿಗೆ ಸಂಪರ್ಕವನ್ನು ನಿರ್ಬಂಧಿಸಲಾಗಿದೆ. ಕಾಲಿಂಪಾಂಗ್ ಜಿಲ್ಲೆಯ ಲಾವಾ-ಗೊರುಬಥನ್ ಮಾರ್ಗವನ್ನು ಪರ್ಯಾಯವಾಗಿ ಬಳಸುವಂತೆ ಪೊಲೀಸರು ಪ್ರಯಾಣಿಕರನ್ನು ಒತ್ತಾಯಿಸಿದ್ದಾರೆ.
Due to the incessant heavy rainfall in North Bengal, the hilly regions of Darjeeling, Kalimpong, and Kurseong have been severely affected, with communication and transport links to the plains of Siliguri, Terai, and Dooars almost completely disrupted due to landslides and… pic.twitter.com/ugkbLrTmQr
— Suvendu Adhikari (@SuvenduWB) October 5, 2025