ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ನಲ್ಲಿ ಭಾನುವಾರ ಸುರಿದ ಭಾರಿ ಮಳೆ ಮತ್ತು ಭೂಕುಸಿತದಲ್ಲಿ ಹಲವಾರು ಜನರು ಸಾವನ್ನಪ್ಪಿದ್ದಾರೆ. ಇದಲ್ಲದೆ, ಅತಿಯಾದ ಮಳೆಯಿಂದಾಗಿ, ಕಬ್ಬಿಣದ ಸೇತುವೆಯೂ ಕುಸಿದಿದೆ.
ವರದಿಯ ಪ್ರಕಾರ, ಸಿಲಿಗುರಿ ಮತ್ತು ಮಿರಿಕ್ ಅನ್ನು ಸಂಪರ್ಕಿಸುವ ದುಧಿಯಾದಲ್ಲಿ ಬಾಲಸನ್ ನದಿಗೆ ಅಡ್ಡಲಾಗಿ ಕಬ್ಬಿಣದ ಸೇತುವೆ ಕುಸಿದು ಸಂಚಾರ ಸ್ಥಗಿತಗೊಂಡಿದೆ.
ಬಂಗಾಳದಲ್ಲಿ ಭಾರೀ ಮಳೆಗೆ ಹಲವರ ಸಾವು
ಡಾರ್ಜಿಲಿಂಗ್ ಸಂಸದರೂ ಆಗಿರುವ ಬಿಜೆಪಿ ಮುಖಂಡ ರಾಜು ಬಿಸ್ತಾ ಮಾತನಾಡಿ, ಭಾರಿ ಮಳೆಯಿಂದಾಗಿ ಹಲವಾರು ಸಾವುಗಳು ಮತ್ತು ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಹೇಳಿದ್ದಾರೆ. ನಿಖರವಾದ ಸಂಖ್ಯೆಯನ್ನು ಬಹಿರಂಗಪಡಿಸಲಾಗಿಲ್ಲವಾದರೂ, ಭೂಕುಸಿತದಿಂದಾಗಿ ಮಿರಿಕ್ ನಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ.
“ಡಾರ್ಜಿಲಿಂಗ್ ಮತ್ತು ಕಾಲಿಂಪಾಂಗ್ ಜಿಲ್ಲೆಗಳ ಅನೇಕ ಭಾಗಗಳಲ್ಲಿ ಭಾರಿ ಮಳೆಯಿಂದ ಉಂಟಾದ ಭಾರಿ ಹಾನಿಯ ಬಗ್ಗೆ ತಿಳಿದು ನನಗೆ ತೀವ್ರ ದುಃಖವಾಗಿದೆ. ಸಾವುಗಳು ಸಂಭವಿಸಿವೆ, ಆಸ್ತಿಪಾಸ್ತಿಗಳ ನಷ್ಟ ಮತ್ತು ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ನಾನು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇನೆ ಮತ್ತು ಸಂಬಂಧಿತ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ” ಎಂದು ಬಿಸ್ಟಾ ಎಕ್ಸ್ ನಲ್ಲಿ ಬರೆದಿದ್ದಾರೆ