ಮಂಡ್ಯ: ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ. ನವೆಂಬರ್ ಗೆ ಯಾವ ಕ್ರಾಂತಿ ಆಗಲ್ಲ ಎಂಬುದಾಗಿ ವಸತಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.
ಇಂದು ಮಡ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನವೆಂಬರ್ ಗೆ ಯಾವ ಕ್ರಾಂತಿ ಇಲ್ಲ, ಮುಖ್ಯಮಂತ್ರಿ ಕುರ್ಚಿಯಲ್ಲಿ ಸಿದ್ದರಾಮಯ್ಯ ಕುಳ್ತಿದ್ದಾರೆ. 5 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರ್ತಾರೆ. ಸ್ವತಃ ಡಿಕೆ ಶಿವಕುಮಾರ್ ಕೂಡ ಹೇಳಿದ್ದಾರೆ ಎಂದರು.
ಮೈಸೂರಿನಲ್ಲಿ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ 5 ವರ್ಷನಾನೇ ಸಿಎಂ. ನಮ್ಮ ಪಕ್ಷ ಹೈಕಾಮಂಡ್ ಪಕ್ಷ ತೀರ್ಮಾನ ಎಲ್ಲ ಹೈಕಾಮಂಡ್ ಮಾಡುತ್ತೆ. ಹೈಕಾಮಂಡ್ ತೀರ್ಮಾನಕ್ಕೆ ನಾವು ಬದ್ದವಾಗಿದ್ದೇವೆ ಎಂದರು.
ಅವರವರ ಬೆಂಬಲಿಗರಿಗೆ ಮುಖ್ಯಮಂತ್ರಿ ಆಗಬೇಕು ಅನ್ನೋದು ಆಸೆ ಇರುತ್ತೆ. ನಮ್ಮ ಅಧ್ಯಕ್ಷರೆ ಯಾರ ಬಗ್ಗೆ ಮಾತನಾಡಬಾರದು ಅಂತ ಸೂಚನೆ ಕೊಟ್ಟಿದ್ದಾರೆ. ವ್ಯಕ್ತಿಗಿಂತ ಪಕ್ಷ ಮುಖ್ಯ. ಯಾರಾದರೂ ಮಾತನಾಡಿದ್ರೆ ಕ್ರಮಕ್ಕೆ ಸೂಚನೆ ಕೊಟ್ಟಿದ್ದಾರೆ. ಈಗಾಗಲೇ ಹಲವರಿಗೆ ನೋಟೀಸ್ ಕೊಟ್ಟಿದ್ದಾರೆ. ಸದ್ಯಕ್ಕೆ ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಎಂದರು.
ಆರ್.ಅಶೋಕ್ ಗೆ ಕೆಲಸ ಏನು ಇಲ್ಲ. ದಸರಾನೇ ಮಾಡಲ್ಲ ಅಂದ್ರು ಅಶೋಕ್ ಹೇಳಿದ ಯಾವುದಾದರೂ ಒಂದು ಮಾತು ಸತ್ಯ ಆಗಿದ್ಯಾ? ಅಶೋಕ್ ಸಿದ್ದರಾಮಯ್ಯ ದಸರಾ ಮಾಡಲ್ಲ ಅಂದ್ರು ದಸರಾ ಮಾಡುದ್ರಲ್ಲ. ಅವರ ಪಕ್ಷದಲ್ಲಿ ಐದಾರು ಗುಂಪು ಗಳಾಗಿದೆ ಅದನ್ನೆ ನೋಡಿಕೊಳ್ಳಲಿ. ನಮ್ಮ ಪಕ್ಷದ ವಿಚಾರ ಬಿಡಿ ನಿಮ್ಮ ಪಕ್ಷ ನೆಲ ಕಚ್ಚಿದೆ ಎಂದು ವಾಗ್ಧಾಳಿ ನಡೆಸಿದರು.
ವರದಿ: ಗಿರೀಶ್ ರಾಜ್, ಮಂಡ್ಯ
ಆ ಯೋಜನೆಗಳಡಿ ಒಂದು ಮನೆಯನ್ನ ಬಿಜೆಪಿ ಕೊಟ್ಟಿದ್ರೆ ನಾನು ದೇವರಾಣೆ ರಾಜಕೀಯ ನಿವೃತ್ತಿ: ಸಚಿವ ಜಮೀರ್ ಅಹಮದ್ ಸವಾಲ್
ಗಮನಿಸಿ : ನಿಮ್ಮ ಮನೆಯಲ್ಲಿ ಎಷ್ಟು ದಿನಗಳವರೆಗೆ `ನೀರು’ ಸಂಗ್ರಹಿಸಿಡಬಹುದು ಗೊತ್ತಾ?