ಕೊಲಂಬಿಯಾ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೊಲಂಬಿಯಾದ ಸೆನೆಟ್ ಅಧ್ಯಕ್ಷರನ್ನು ಭೇಟಿಯಾದರು ಎಂದು ಕಾಂಗ್ರೆಸ್ ಸಾಗರೋತ್ತರ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಶನಿವಾರ ಮಾಹಿತಿ ಹಂಚಿಕೊಂಡಿದ್ದಾರೆ.
ದೇಶಗಳ ನಡುವೆ ಆಳವಾದ ರಾಜಕೀಯ, ರಾಜತಾಂತ್ರಿಕ ಮತ್ತು ವಾಣಿಜ್ಯ ಸಂಬಂಧಗಳನ್ನು ಪೋಷಿಸಲು ಪೆರುವಿನೊಂದಿಗೆ ಸಂಸದೀಯ ಸ್ನೇಹ ಗುಂಪನ್ನು ಪ್ರಾರಂಭಿಸಿರುವ ಬಗ್ಗೆಯೂ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
“ರಾಹುಲ್ ಗಾಂಧಿ ಅವರೊಂದಿಗೆ ಕೊಲಂಬಿಯಾದ ಸೆನೆಟ್ ಅಧ್ಯಕ್ಷ ಲಿಡಿಯೊಸ್ ಗಾರ್ಸಿಯಾ ಅವರನ್ನು ಭೇಟಿಯಾದೆ. ಪೆರುವಿನೊಂದಿಗೆ ಸಂಸದೀಯ ಸ್ನೇಹ ಗುಂಪಿನ ಆರಂಭವು ನಮ್ಮ ದೇಶಗಳ ನಡುವೆ ಆಳವಾದ ರಾಜಕೀಯ, ರಾಜತಾಂತ್ರಿಕ ಮತ್ತು ವಾಣಿಜ್ಯ ಸಂಬಂಧಗಳನ್ನು ಬೆಳೆಸುತ್ತದೆ” ಎಂದು ಬರೆದಿದ್ದಾರೆ.