ನಿಮ್ಮ ಬ್ಯಾಂಕಿನ ನಿಷ್ಕ್ರಿಯ ಖಾತೆಗಳಲ್ಲಿರುವ(2 ವರ್ಷಗಳಿಂದ 10 ವರ್ಷಗಳವರೆಗೂ ಚಲನೆ ಇಲ್ಲದವು) ಹಣ / ಕೇಂ ಮಾಡದ ಡೆಪಾಸಿಟ್ಗಳು (10 ವರ್ಷಕ್ಕಿಂತ ಹೆಚ್ಚಿನವು) ಆರ್ಬಿ ಐ ನ ಡಿಇಎ ಫಂಡ್ಗೆ ವರ್ಗಾಯಿಸಲ್ಪಡುತ್ತವೆ. ನೀವು ಅಥವಾ ನಿಮ್ಮ ಕಾನೂನುಬದ್ದ ವಾರಸುದಾರರು ಅದನ್ನು ಯಾವಾಗ ಬೇಕಾದರೂ ಕ್ಲೇಂ ಮಾಡಬಹುದು.
ಹೌದು, ನಿಮ್ಮ ಹಣವನ್ನು ಕ್ಲೇಂ ಮಾಡಲು 3 ಸುಲಭ ಹೆಜ್ಜೆಗಳು
1. ಯಾವುದೇ ಬ್ಯಾಂಕ್ ಶಾಖೆಗೆ ಭೇಟಿಕೊಡಿ, ಅದು ನಿಮ್ಮ ಎಂದಿನ ಶಾಖೆ ಅಲ್ಲದಿದ್ದರೂ ಸರಿ.
2. ಕೆವೈಸಿ ದಾಖಲೆಗಳೊಂದಿಗೆ ಒಂದು ಫಾರಂ ಸಲ್ಲಿಸಿ (ಆಧಾರ್, ಪಾಸ್ಪೋರ್ಟ್, ವೋಟರ್ ಐಡಿ ಅಥವಾ ಡ್ರೈವಿಂಗ್ ಲೈಸೆನ್ಸ್)
3. ಪರಿಶೀಲನೆಯ ನಂತರ ನಿಮ್ಮ ಹಣವನ್ನು ಬಡ್ಡಿಯೊಂದಿಗೆ (ಏನಾದರೂ ಇದ್ದಲ್ಲಿ) ಪಡೆಯಿರಿ.
ನಿಮ್ಮ ಕ್ಲೇಂ ಆಗಿಲ್ಲದ ಠೇವಣಿಗಳ ಬಗ್ಗೆ ತಿಳಿಯಲು
ನಿಮ್ಮ ಬ್ಯಾಂಕಿನ ವೆಬ್ಸೈಟ್ ಹುಡುಕಿ ಅಥವಾ ಆರ್ಬಿಐ ನ UDGAM ಪೋರ್ಟಲ್ ಪರಿಶೀಲಿಸಿ (https://udgam.rbi.org.in) ಪ್ರಸ್ತುತ 30 ಬ್ಯಾಂಕ್ಗಳನ್ನು ಕವರ್ ಮಾಡಲಾಗುತ್ತಿದೆ.
ಅಕ್ಟೋಬರ್ ನಿಂದ ಡಿಸೆಂಬರ್ 2025 ವರೆಗೆ ದೇಶದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ನಡೆಸಲಾಗುತ್ತಿರುವ ವಿಶೇಷ ಅನ್ಕೇಮ್ಸ್ ಅಸೆಟ್ ಕ್ಯಾಂಪ್ಗಳಿಗೆ ಭೇಟಿ ನೀಡಿ.
ಹೆಚ್ಚಿನ ವಿವರಗಳಿಗಾಗಿ https://rbikehtahai.rbi.org.in : rbikehtahai@rbi.org.in
ಅಧಿಕೃತ ವಾಟ್ಸಪ್ ನಂಬರ್ 99990 41935