ಮುಂಬೈ: ಸಾಲದ ಮಾಸಿಕ ಕಂತುಗಳನ್ನು ದೀರ್ಘಕಾಲ ಬಾಕಿ ಉಳಿಸಿಕೊಂಡರೆ ಬೈಕ್ ಮತ್ತು ಕಾರನ್ನು ಸಾಲದ ನೀಡದ ಕಂಪನಿಗಳು ಜಪ್ತಿ ಮಾಡಿದಂತೆ ಇನ್ನು ಮುಂದೆ ಮೊಬೈಲ್ ಕೂಡಾ ಜಪ್ತಿಯಾಗಲಿದೆ.
ಹೌದು. ಭಾರತೀಯ ರಿಸರ್ವ್ ಬ್ಯಾಂಕ್ ಈ ಬಗ್ಗೆ ಚಿಂತನೆ ನಡೆಸಿದೆ. ಮೊಬೈಲ್ ಅನ್ನು ಸಾಲ ಮಾಡಿ ಖರೀದಿಸಿ, ಅದರ ಪ್ರತಿ ತಿಂಗಳ ಕಂತನ್ನು (ಇಎಂಐ) ಸರಿಯಾಗಿ ಪಾವತಿಸದೇ ಇದ್ದಲ್ಲಿ ಅದನ್ನು ಮಾಡಿ, ಬಳಸಲು ಲಾಕ್ ಸಾಧ್ಯವಾಗದಂತೆ ಮಾಡಲು ಆರ್ಬಿಐ ಚಿಂತನೆ ನಡೆಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಸಾಲಗಳ ಕುರಿತು ಹೊಸ ನಿಯಮವನ್ನು ಜಾರಿಗೆ ತರಲು ಯೋಜಿಸುತ್ತಿದೆ. ಹೊಸ ಆರ್ಬಿಐ ನಿಯಮ ಜಾರಿಗೆ ಬಂದ ನಂತರ, ಸಾಲದಾತರು ಸಾಲವನ್ನು ಮರುಪಾವತಿಸಲು ಸಾಧ್ಯವಾಗದವರ ಫೋನ್ಗಳನ್ನು ರಿಮೋಟ್ ಆಗಿ ಲಾಕ್ ಮಾಡುತ್ತಾರೆ.
2024 ರಲ್ಲಿ ಹೋಮ್ ಕ್ರೆಡಿಟ್ ಫೈನಾನ್ಸ್ ನಡೆಸಿದ ಅಧ್ಯಯನವು ಪ್ರಮುಖ ಅಂಶಗಳನ್ನು ಬಹಿರಂಗಪಡಿಸಿದೆ. ಗ್ರಾಹಕರು ಮೊಬೈಲ್ ಫೋನ್ಗಳು ಸೇರಿದಂತೆ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನ ಎಲೆಕ್ಟ್ರಾನಿಕ್ಸ್ ಅನ್ನು ಕ್ರೆಡಿಟ್ನಲ್ಲಿ ಖರೀದಿಸುತ್ತಾರೆ ಎಂದು ಕಂಡುಬಂದಿದೆ. ಟೆಲಿಕಾಂ ನಿಯಂತ್ರಕದ ಪ್ರಕಾರ, 1.4 ಬಿಲಿಯನ್ಗಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ 1.16 ಬಿಲಿಯನ್ಗಿಂತಲೂ ಹೆಚ್ಚು ಮೊಬೈಲ್ ಸಂಪರ್ಕಗಳಿವೆ.
ಭಾರತದಲ್ಲಿ ಮಾರಾಟವಾಗುವ ಮೊಬೈಲ್ ಸೇರಿ ಗ್ರಾಹಕ ಬಳಕೆಯ ಎಲೆಕ್ಟ್ರಾನಿಕ್ ಉಪಕರ ಣಗಳ ಪೈಕಿ 3ನೇ 1ರಷ್ಟನ್ನು ಜನರು ಇಎಂಐ ಮೂಲಕವೇ ಖರೀದಿಸುತ್ತಾರೆ. ದೇಶದಲ್ಲಿ 140 ಕೋಟಿ ಜನಸಂಖ್ಯೆ ಇದ್ದು, 116 ಕೋಟಿ ಮಂದಿ ಮೊಬೈಲ್ ಸಂಪರ್ಕ ಪಡೆದಿದ್ದಾರೆ. ಹಲವು ಮಂದಿ ಕಂತಿನಲ್ಲಿ ತೀರಿಸುವುದಾಗಿ ಮೊಬೈಲ್ ಖರೀದಿಸುತ್ತಾರೆ. ಆದರೆ ಸಕಾಲಕ್ಕೆ ಪಾವತಿಸುವುದೇ ಇಲ್ಲ. ಅಂತಹ ಪದ್ಧತಿಗೆ ಕಡಿವಾಣ ಹಾಕಲು ಆರ್ಬಿಐ ಮುಂದಾಗಿದೆ.
ಈ ಬಗ್ಗೆ ಗುರುವಾರ ಮಾತಾಡಿದ ಆರ್ ಬಿಐನ ಉಪಗವರ್ನರ್ ರಾಜೇಶ್ವರ್ ರಾವ್, ಈ ಯೋಜನೆಯ ಸಾಧ್ಯತೆಗಳನ್ನು ಪರಿಶೀಲಿ ಸಲಾಗುತ್ತಿದೆ. ಈಗ ವಾಹನಗಳ ಸಾಲದ ಪಾವತಿ ಸರಿಯಾಗಿ ಆಗದಿದ್ದಲ್ಲಿ ಬ್ಯಾಂಕುಗಳು ಅವುಗಳನ್ನು ಜಪ್ತಿ ಮಾಡುತ್ತವೆ. ಆದರೆ ಫೋನ್ಗೆ ಅಂತಹ ಕ್ರಮಗಳಿಲ್ಲ. ಅದಕ್ಕಾಗಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.