ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಮರ್ಡರ್ ಕೇಸಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರದದ ಜೈಲು ಪಾಲಾಗಿದ್ದಾರೆ. ಹಾಸಿಗೆ ದಿಂಬಿಗೆ ಬೇಡಿಕೆ ಇಟ್ಟಿದ್ದರೂ ಅದನ್ನು ಜೈಲು ಅಧಿಕಾರಿಗಳು ಈಡೇರಿಸುತ್ತಿಲ್ಲ. ಕನಿಷ್ಠ ಈ ಜೈಲಿನಿಂದ ಬೇರೆ ಜೈಲಿಗೆ ಶಿಫ್ಟ್ ಆದರೂ ಮಾಡಿಸಲು ಸೂಚಿಸುವಂತೆ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಲು ನಟ ದರ್ಶನ್ ನಿರ್ಧರಿಸಿರುವುದಾಗಿ ತಿಳಿದು ಬಂದಿದೆ.
ನಟ ದರ್ಶನ್ ಕ್ವಾರಂಟೈನ್ ಬ್ಯಾರಕ್ ನಲ್ಲಿ ನರಕ ಅನುಭವಿಸುತ್ತಿದ್ದಾರೆ ಎನ್ನಲಾಗುತ್ತಿದೆ. ನೆಲದಲ್ಲಾದ್ರೂ ಮಲಗ್ತೀನಿ ಬೇರೆ ಬ್ಯಾರಕ್ ಗೆ ಹಾಕಿ ಎಂಬುದಾಗಿ ಜೈಲು ಅಧಿಕಾರಿಗಳ್ನು ದುಂಬಾಲು ಬಿದ್ದಿರುವುದಾಗಿ ಹೇಳಲಾಗುತ್ತಿದೆ.
ಹಾಸಿಗೆ, ದಿಂಬು ಕೊಡದಿದ್ರೂ ಓಕೆ, ಶಿಫ್ಟ್ ಮಾಡಿ ಎಂಬುದಾಗಿ ಒತ್ತಾಯಿಸಿರುವಂತ ನಟ ದರ್ಶನ್ ಒತ್ತಾಯಕ್ಕೆ ಜೈಲು ಅಧಿಕಾರಿಗಳು ಮಾತ್ರ ಜುಮ್ ಎನ್ನುತ್ತಿಲ್ಲ. ಯಾವುದೇ ಕೇಳಿದರೂ ರೂಲ್ಸ್, ರೂಲ್ಸ್ ಎನ್ನುತ್ತಿದ್ದಾರೆ. ಜೈಲು ಅಧಿಕಾರಿಗಳ ವಿರುದ್ಧ ದರ್ಶನ್ ತೀವ್ರ ಅಸಮಾಧಾನ ಹೊರಹಾಗಿದ್ದಾರೆ. ಹೀಗಾಗಿ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಲು ದಾಸ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ.
ಪ್ರತಯೊಂದಕ್ಕೂ ನಿಯಮ, ನಿಯಮ, ನಿಯಮ. ಮ್ಯಾನ್ಯುಯಲ್ ಬಿಟ್ಟು ಹೊರಬರಲ್ಲ ಎಂಬುದಾಗಿ ಅಸಮಾಧಾನಗೊಂಡಿರುವಂತ ನಟ ದರ್ಶನ್ ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.
ಸೆಪ್ಟೆಂಬರ್ ನಲ್ಲಿ GST ಶೇ. 9.1 ರಷ್ಟು ಏರಿಕೆಯಾಗಿ 1.89 ಲಕ್ಷ ಕೋಟಿ ಸಂಗ್ರಹ