ಶಿವಮೊಗ್ಗ : ರಾಷ್ಟಮಟ್ಟದ ದಸರಾ ಕುಸ್ತಿ ಪಂದ್ಯಾವಳಿ ಅಕ್ಟೋಬರ್.1 ಮತ್ತು 2ರಂದು ಸಾಗರದ ಗಾಂಧಿನಗರದ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದಲ್ಲಿ ಮಧ್ಯಾಹ್ನ 2 ಗಂಟೆಯಿoದ ನಡೆಯಲಿದೆ ಎಂದು ಗಾಂಧಿನಗರ ಯುವಜನ ಸಂಘದ ಅಧ್ಯಕ್ಷ ಸಂತೋಷ್ ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಕರ್ನಾಟಕ ಕರ‍್ಯನಿರತ ಪತ್ರಕರ್ತರ ಭವನದಲ್ಲಿ ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಂಘದ ಸುವರ್ಣ ಮಹೋತ್ಸವ ಅಂಗವಾಗಿ ಬಂಗಾರದ ಬೆಡಗು ಶೀರ್ಷಿಕೆಯಡಿ ಎರಡು ದಿನಗಳ ಕುಸ್ತಿ ಪಂದ್ಯಾವಳಿ ನಡೆಯಲಿದೆ ಎಂದರು.
ಕಳೆದ 49 ವರ್ಷಗಳಿಂದ ಗಾಂಧಿನಗರ ಯುವಜನ ಸಂಘ ಕಲೆ, ಸಾಹಿತ್ಯ, ಸಾಂಸ್ಕೃತಿಕ, ಜಾನಪದ ಸೇರಿ ಹತ್ತು ಹಲವು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಪ್ರತಿ ವರ್ಷ ದಸರಾ ಕುಸ್ತಿ ನಡೆಸುವ ಮೂಲಕ ದೇಶಾದ್ಯಂತ ಪ್ರಸಿದ್ದಿಯನ್ನು ಪಡೆದಿದೆ. ಸಂಘವು ಸುವರ್ಣ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಎರಡು ದಿನ ವಿಶೇಷ ಕುಸ್ತಿ ಪಂದ್ಯಾವಳಿ ಹಮ್ಮಿಕೊಂಡಿದ್ದು, ಬೆಳ್ಳಿಗದೆ, ಬಂಗಾರದ ಬಳೆ, ಅಖಾಡ ಬಳೆ, ಪರ್ಸಿ ಬಳೆ ಸೇರಿ ಆಕರ್ಷಕ ನಗದು ಬಹುಮಾನ ಇರುತ್ತದೆ ಎಂದು ತಿಳಿಸಿದರು.
ಹರಿಯಾಣ, ಪಂಜಾಬ್, ದೆಹಲಿ, ಬೆಳಗಾವಿ ಸೇರಿದಂತೆ ದೇಶದ ಬೇರೆಬೇರೆ ಭಾಗಗಳಿಂದ ಪೈಲ್ವಾನರು ಪಂದ್ಯಾವಳಿಗೆ ಆಗಮಿಸುತ್ತಿದಾರೆ. ಸುಮಾರು 120 ಜೋಡಿ ಕುಸ್ತಿ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ. ಇದರ ಜೊತೆಗೆ ಮಹಿಳಾ ಕುಸ್ತಿ ಪಂದ್ಯಾವಳಿಯನ್ನು ಸಹ ನಡೆಸಲಾಗುತ್ತಿದೆ. ದಾನಿಗಳು, ಸಾಗರದ ಜನತೆ, ಸಂಘಸಂಸ್ಥೆಗಳು ಕುಸ್ತಿ ಕ್ರೀಡೆ ಯಶಸ್ಸಿಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಎರಡು ದಿನ ನಡೆಯುವ ಕುಸ್ತಿ ಪಂದ್ಯಾವಳಿಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದರು.
ಈ ಸುದ್ದಿಗೋಷ್ಟಿಯಲ್ಲಿ ಗಾಂಧಿನಗರ ಯುವಕರ ಸಂಘದ ಧರ್ಮರಾಜ್, ಡಾ.ಶ್ರೀಪಾದ ಹೆಗಡೆ, ಕೆ.ಜಿ.ಸಂತೋಷ್, ವೆಂಕಟೇಶ್ ಬಿಳಿಸಿರಿ, ಗಣೇಶ್, ಶ್ರೀನಿಧಿ, ಕೃಷ್ಣಾನಂದ್, ರಾಘವೇಂದ್ರ ಇನ್ನಿತರರು ಹಾಜರಿದ್ದರು.
BIG NEWS: ‘ಬಿಡದಿ ಟೌನ್ ಶಿಫ್’ ಹೆಸರಿನಲ್ಲಿ ಭೂ ದಂಧೆ; ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ