ಶಿವಮೊಗ್ಗ: ವಿವಿಧ ಸಂಘಟನೆಗಳಲ್ಲಿ ಸೇವೆ ಮಾಡಿದ ಅನುಭವ ತಮಗಿದ್ದು, ಕನ್ನಡ ರಕ್ಷಣಾ ವೇದಿಕೆ ಅಪ್ಪುಸೇನೆ ಮೂಲಕ ಪಟ್ಟಣ ಸೇರಿದಂತೆ ಹಳ್ಳಿಗಳಲ್ಲಿ ಸಂಘಟನೆ ಮಾಡಿ ಕನ್ನಡ ನಾಡು ನುಡಿಯ ಸೇವೆ ಮಾಡಲಾಗುವುದು ಎಂದು ಕನ್ನಡ ರಕ್ಷಣಾ ವೇದಿಕೆ ಅಪ್ಪುಸೇನೆ ತಾಲ್ಲೂಕು ಅಧ್ಯಕ್ಷ ಮಂಜುನಾಥ್ ಉಪ್ಪಳ್ಳಿ ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸೊರಬ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕನ್ನಡ ರಕ್ಷಣಾ ವೇದಿಕೆ ಅಪ್ಪುಸೇನೆಯ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಸಂಘಟನೆಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದಂತ ಅವರು, ಕನ್ನಡ ನಾಡು,ನುಡಿಯ ಬಗ್ಗೆ ಕನ್ನಡಿಗರಾಗಿ ಅಭಿಮಾನವಿರಬೇಕು. ಯಾವುದೇ ವ್ಯಕ್ತಿ ಹೋರಾಡುವ ಜನಪರ ಕಾರ್ಯಗಳಿಗೆ ಇವತ್ತು ಬೆಲೆ ಇದೆ. ಕನ್ನಡದ ನೆಲ,ಜಲದ ಪ್ರಶ್ನೆ ಎದುರಾದಗ ಹೋರಾಟಕ್ಕೆ ಸಿದ್ಧವಿರಬೇಕು ಎಂದರು.
ಜಿಲ್ಲಾ ಗೌರವಾಧ್ಯಕ್ಷ ಪ್ರವೀಣ್ ಹಿರೇಇಡಗೋಡು ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಕನ್ನಡ ರಕ್ಷಣಾ ವೇದಿಕೆ ಅಪ್ಪುಸೇನೆ ವತಿಯಿಂದ ಕನ್ನಡ ಪರ ಕೆಲಸಗಳ ಜತೆಗೆ ಸಮಾಜ ಸೇವೆ, ರಕ್ತದಾನ ಶಿಬಿರ, ವನಮಹೋತ್ಸವ, ರೋಗಿಗಳಿಗೆ ಸಹಾಯಹಸ್ತ ಇನ್ನಿತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಹೊಸ ಪದಾಧಿಕಾರಿಗಳನ್ನು ಆಯ್ಕೆಮಾಡಲಾಗಿದೆ. ಕನ್ನಡ ನಾಡಿನ ರಕ್ಷಣೆಯನ್ನು ಮುಂದಿಟ್ಟುಕೊಂಡಿದ್ದೇವೆ. ಸಂಘಟನೆಯ ಧ್ಯೇಯೋದ್ದೇಶಗಳಿಗೆ ಬದ್ಧರಾಗಿ ನಡೆಯಬೆಕು. ಯಾವುದೆ ಚಟುವಟಿಕೆಗಳು ಕಾನೂನು ಅಡಿಯಲ್ಲಿ ನಡೆದಾಗ ಸಮಾಜಕ್ಕೂ ಸಂಘಟನೆಗೂ ಒಳಿತಾಗುತ್ತದೆ ಎಂದರು.
ಈ ವೇಳೆ ಪದಾಧಿಕಾರಿಗಳಾಗಿ ತಾಲೂಕು ಗೌರವಾಧ್ಯಕ್ಷ ಲಕ್ಷ್ಮಣಪ್ಪ, ಖಜಾಂಚಿ ಚಿದಾನಂದ, ಪ್ರಧಾನ ಕಾರ್ಯದರ್ಶಿ ಭರತ್, ಸಂಘಟನಾ ಕಾರ್ಯದರ್ಶಿ ಪ್ರದೀಪ್, ಯುವ ಘಟಕದ ಅಧ್ಯಕ್ಷ ಸ್ವರೂಪ್, ನಗರ ಘಟಕದ ಅಧ್ಯಕ್ಷ ಪ್ರಜ್ವಲ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಕಿಶೋರ್, ಕಸಬಾ ಹೋಬಳಿ ಘಟಕದ ಅಧ್ಯಕ್ಷ ಸುರೇಂದ್ರ, ಉಳವಿ ಹೋಬಳಿ ಘಟಕದ ಅಧ್ಯಕ್ಷ ರಮೇಶ್, ಸಂಘಟನಾ ಕಾರ್ಯದರ್ಶಿಗಳಾದ ನಾಗಪ್ಪ, ದಾನಶೇಖರ ಪ್ರಮಾಣ ಪತ್ರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ರಾಘವೇಂದ್ರ ಟಿ ಜಂಗಿನಕೊಪ್ಪ, ಸೊರಬ
GST ಕಡಿತದ ನಂತರ ಬೆಲೆಗಳನ್ನು ಕಡಿಮೆ ಮಾಡದ ‘ಇ-ಕಾಮರ್ಸ್ ಕಂಪನಿ’ಗಳನ್ನು ಕೇಂದ್ರ ಸರ್ಕಾರ ತರಾಟೆ