ಬೆಂಗಳೂರು : ರಾಜ್ಯದಲ್ಲಿ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಲು ಅರ್ಹತೆ ಹೊಂದಿದೆ ಎಂದು ಬುಡಕಟ್ಟು ಸಂಶೋಧನಾ ಸಂಸ್ಥೆ ಅಧ್ಯಯನ ವರದಿ ಸಲ್ಲಿಸಿದೆ.
ರಾಜ್ಯಾದ್ಯಂತ ಕುರುಬ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ, ಮೌಲ್ಯಮಾಪನ, ಆರ್ಥಿಕ ಸ್ಥಿತಿಗತಿ ಸೇರಿದಂತೆ ಹತ್ತು ಹಲವು ಆಯಾಮಗಳಲ್ಲಿ ಅಧ್ಯಯನ ನಡೆಸಿರುವ ಸಂಸ್ಥೆ ಸರ್ಕಾರಕ್ಕೆ ಮುಚ್ಚಿದ ಲಕೋಟಿಯಲ್ಲಿ ವರದಿಯನ್ನು ಸಲ್ಲಿಸಿದೆ.
ಕುರುಬರು ರಾಜ್ಯದ ಎಲ್ಲ ಭಾಗಗಳಲ್ಲಿ ಕಂಡು ಬರುತ್ತಾರೆ. ರಾಜ್ಯದಲ್ಲಿ ಇವರನ್ನು ಪ್ರಧಾನವಾಗಿ ‘ಕುರುಬ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಇವರನ್ನು ‘ಧನಗರ್’ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಕುರುಬ ಅದರ ಪರ್ಯಾಯ ಪದಗಳಾದ ಧನಗರ್, ಗೊರೆಯ, ಕುರಬ್, ಕುರುಬನ್, ಕುರುಂಬ, ಕುರುಬ್, ಕುರುಂಬನ್ ಎಂಬ ಪದಗಳಲ್ಲಿ ಧನರ್ಗ ಮತ್ತು ಹಾಲುಮತ ಪದಗಳನ್ನು ಕುರುಬ ಪದಕ್ಕೆ ಪರ್ಯಾಯ ಪದವಾಗಿ ಪರಿಗಣಿಸಿ ರಾಜ್ಯದ ಎಸ್ಟಿ ಪಟ್ಟಿಗೆ ಸೇರ್ಪಡೆ ಮಾಡಲು ಪರಿಗಣಿಸಬಹುದು ಹಾಗೂ ಎಸ್ಟಿ ಪಟ್ಟಿಗೆ ಸೇರಿಸಲು ಅರ್ಹತೆ ಹೊಂದಿದ್ದಾರೆ ಎಂಬ ಅಭಿಪ್ರಾಯ ನೀಡಲಾಗಿದೆ ಎನ್ನಲಾಗಿದೆ.








