ಬೆಂಗಳೂರು: ರಾಜ್ಯ ಸರ್ಕಾರದಿಂದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಗುಡ್ ನ್ಯೂಸ್ ಎನ್ನುವಂತ ವೈದ್ಯಕೀಯ ವೆಚ್ಚ ಸಹಾಯಧನಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಕುರಿತಂತೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯು, ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಮಂಡಳಿಯು ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನವನ್ನು ನೀಡುತ್ತಿದೆ ಎಂದಿದೆ.
ಯಾವೆಲ್ಲ ಆರೋಗ್ಯ ತೊಂದರೆಗಳಿಗೆ ಸಹಾಯಧನ ಪಡೆಯಬಹುದು?
- ಪಿತ್ತಕೋಶದ ತೊಂದರೆಗೆ ಸಂಬಂಧಿಸಿದ ಚಿಕಿತ್ಸೆ
- ಮೂತ್ರ ಪಿಂಡದಲ್ಲಿನ ಕಲ್ಲು ತೆಗೆಯುವ ಚಿಕಿತ್ಸೆ
- ಅಲ್ಸರ್ ಚಿಕಿತ್ಸೆ
- ಮೆದುಳಿನ ರಕ್ತಸ್ತ್ರಾವ ಚಿಕಿತ್ಸೆ
- ಹೃದಯ ಸಂಬಂಧಿ ಖಾಯಿಲೆ
- ಡಯಾಲಿಸಿಸ್
- ಕಿಡ್ನಿ ಜೋಡಣೆ
- ಕಿಡ್ನಿ ಶಸ್ತ್ರ ಚಿಕಿತ್ಸೆ
- ಇ ಎನ್ ಟಿ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆ
- ಕಣ್ಣಿನ ಶಸ್ತ್ರಚಿಕಿತ್ಸೆ
- ನರರೋಗ ಶಸ್ತ್ರಚಿಕಿತ್ಸೆ
- ಮೂಳೆ ಶಸ್ತ್ರಚಿಕಿತ್ಸೆ
- ವ್ಯಾಸ್ಕ್ಯೂಲರ್ ಶಸ್ತ್ರ ಚಿಕಿತ್ಸೆ
- ಗರ್ಭಕೋಶ ಶಸ್ತ್ರಚಿಕಿತ್ಸೆ
- ಅಸ್ತಮಾ ಚಿಕಿತ್ಸೆ
- ಗರ್ಭಪಾತ ಪ್ರಕರಣಗಳು
- ಅನ್ನನಾಳದ ಚಿಕಿತ್ಸೆ ಸೇರಿದಂತೆ ಇತರೆ ಖಾಯಿಲೆಗಳ ಚಿಕಿತ್ಸೆಗಳು
ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಮಂಡಳಿಯು ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನವನ್ನು ನೀಡುತ್ತಿದೆ. ಮಂಡಳಿಯು ಸೂಚಿಸಿರುವ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಫಲಾನುಭವಿಯು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.#ಶ್ರಮೇವ_ಜಯತೇ#KBOCWWB #ಕಾರ್ಮಿಕ_ಇಲಾಖೆ pic.twitter.com/djp35028aN
— Construction Workers Welfare Board (@WorkersBoard) September 29, 2025
JEE ಮುಖ್ಯ ಪರೀಕ್ಷೆ-2026 ಕುರಿತು ವಿದ್ಯಾರ್ಥಿಗಳಿಗೆ NTAಯಿಂದ ಮಹತ್ವದ ಸಲಹೆ ಬಿಡುಗಡೆ | JEE Main 2026
SHOCKING :` ಚಿಕನ್’ ಬೇಕು ಎಂದ ಹೆತ್ತ ಮಗನನ್ನೇ ಲಟ್ಟಣಿಗೆಯಿಂದ ಹೊಡೆದು ಕೊಂದ ಪಾಪಿ ತಾಯಿ.!