ಕಲಬುರ್ಗಿ: ರಾಜ್ಯದ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ. ಜನರು ಕುಪಿತರಾಗಿದ್ದಾರೆ. ಎಲ್ಲಿ ನಮ್ಮ ಮೇಲೆ ಬೀಳುತ್ತಾರೋ ಎಂಬಂತಿದೆ ಸಚಿವರ ಪರಿಸ್ಥಿತಿ. ರಾಜ್ಯ ಸರಕಾರ ತೀಕ್ಷ್ಣ- ತ್ವರಿತವಾಗಿ ಕ್ರಮ ಕೈಗೊಳ್ಳಬೇಕಿತ್ತು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕೆಲವೆಡೆ ಶೇ 100ರಷ್ಟು ಬೆಳೆ ನಾಶವಾಗಿದೆ. ನಾನು ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಸ್ಥಳೀಯ ನಾಯಕರು ಸಮಸ್ಯೆ ಇರುವಲ್ಲಿಗೆ ತೆರಳಿ ಸರಕಾರದ ಗಮನ ಸೆಳೆಯುತ್ತೇವೆ ಎಂದು ಹೇಳಿದರು. ರೈತರಿಗೆ ಪರಿಹಾರ ಮೊದಲು ಕೊಡಿ ಎಂದು ಆಗ್ರಹಿಸಿದರು. ಅಧಿಕಾರದಲ್ಲಿ ಇರುವವರು ಸಮಸ್ಯೆ ಪರಿಹಾರಕ್ಕೆ ಆದ್ಯತೆ ಕೊಡಬೇಕು ಎಂದು ಪ್ರಶ್ನೆಗೆ ಉತ್ತರಿಸಿದರು.
ವಿಜಯೇಂದ್ರ ಅವರು ತೀರ್ಮಾನಿಸಿ ಒಂದೆರಡು ದಿನದಲ್ಲೇ ಇಲ್ಲಿಗೆ ಬಂದಿದ್ದೇವೆ. ಉಸ್ತುವಾರಿ ಸಚಿವರು ಅವರವರ ಜಿಲ್ಲೆಗೆ ಹೋಗಿ ಉಸ್ತುವಾರಿ ಕಾರ್ಯ ಮಾಡಬೇಕಿತ್ತು. ರೈತರ ಸಮಸ್ಯೆ ಪರಿಹರಿಸಬೇಕಿತ್ತು. ಪರಿಹಾರ ಕೊಡಬೇಕಿತ್ತು ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
ಬಿಹಾರ ಚುನಾವಣೆ ನಂತರ ಮೋದಿ ಸರಕಾರಕ್ಕೆ ಅಂತ್ಯ ಹಾಡುತ್ತೇವೆಂದು ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆ ಕುರಿತು ಪತ್ರಕರ್ತರು ಗಮನ ಸೆಳೆದರು. ‘ಅವರ ಪರಿಸ್ಥಿತಿ ಏನಿದೆ ಎಂದು ಅವರು ನೋಡಿಕೊಳ್ಳಲಿ. ಅವರ ಠೇವಣಿ ಜಪ್ತಿ ಆಗುತ್ತಿದೆ. ಇರಲಿ; ಚುನಾವಣೆಗೆ ಮುಂಚೆ ಹೀಗೇ ಮಾತನಾಡುತ್ತಾರೆ. ಫಲಿತಾಂಶ ಬಂದ ಮೇಲೆ ಅವರೇ ಬದಲಾಗಿರುತ್ತಾರೆ’ ಎಂದು ತಿಳಿಸಿದರು.
ಅ.2ರಂದು ಗಾಂಧಿ ಜಯಂತಿ ಹಿನ್ನಲೆ: ಬೆಂಗಳೂರಲ್ಲಿ ಪ್ರಾಣಿವಧೆ, ಮಾಂಸ ಮಾರಾಟ ನಿಷೇಧಿಸಿ GBA ಆದೇಶ
SHOCKING :` ಚಿಕನ್’ ಬೇಕು ಎಂದ ಹೆತ್ತ ಮಗನನ್ನೇ ಲಟ್ಟಣಿಗೆಯಿಂದ ಹೊಡೆದು ಕೊಂದ ಪಾಪಿ ತಾಯಿ.!