ಬೆಂಗಳೂರು: ಇದು ರಾಜ್ಯವೇ ಬೆಚ್ಚಿ ಬೀಳಿಸೋ ಹೀನಾತಿಹೀನ ಸ್ಟೋರಿಯಾಗಿದೆ. ಅಪ್ರಾಪ್ತೆ ಜೊತೆ ಲೈಂಗಿಕ ಸಂಪರ್ಕಕ್ಕೆ 20 ಲಕ್ಷಕ್ಕೆ ಡಿಮ್ಯಾಂಡ್ ಮಾಡಿರುವಂತ ಘಟನೆ ನಡೆದಿದೆ. ಈ ಕೃತ್ಯವನ್ನು ಮೈಸೂರಿನ ವಿಜಯನಗರ ಠಾಣೆಯ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೈಸೂರಿನ ವಿಜಯನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಅಪ್ರಾಪ್ತೆಯೊಂದಿಗೆ ಲೈಂಗಿಕ ಸಂಪರ್ಕಕ್ಕೆ 20 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಂತ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಪ್ರಾಪ್ತ ಬಾಲಕಿ ರಕ್ಷಣೆ ಮಾಡಲಾಗಿದ್ದು, ಮಹಿಳೆ ಮತ್ತು ವ್ಯಕ್ತಿಯೊಬ್ಬರನ್ನು ಈ ಘಟನೆ ಸಂಬಂಧ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳನ್ನು ಶೋಭಾ ಮತ್ತು ತುಳಸಿಕುಮಾರ್ ಎಂಬುದಾಗಿ ಗುರುತಿಸಲಾಗಿದೆ. ಬೆಂಗಳೂರು ಮೂಲದ ಶೋಭಾ, ತುಳಸಿಕುಮಾರ್ ಅರೆಸ್ಟ್ ಮಾಡಲಾಗಿದೆ.
ಮೈಸೂರಿನ ಒಡನಾಡಿ ಸಂಸ್ಥೆಯ ಮಾಹಿತಿ ಆಧರಿಸಿ ಮೈಸೂರಿನ ವಿಜಯನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ, ಈ ಕೃತ್ಯವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಂದಹಾಗೇ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳುವ ಗ್ಯಾಂಗ್ ಇದಾಗಿದೆ. ಅದರಲ್ಲಿ ಮೊದಲ ಬಾರಿ ಋತುಮತಿಯಾದ ಬಾಲಕಿಯರೇ ಇವರ ಟಾರ್ಗೆಟ್ ಆಗಿದ್ದಾರೆ. ವಾಟ್ಸ್ ಆಪ್ ನಲ್ಲಿ ಬಾಲಕಿಯರ ವೀಡಿಯೋ ತೋರಿಸಿ ಗ್ಯಾಂಗ್ ದುಡ್ಡಿನ ಆಫರ್ ಮಾಡುತ್ತಿದ್ದಂತೆ. 12-13 ವರ್ಷದ ಬಾಲಕಿಯರನ್ನ ತೋರಿಸಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿತ್ತಂತೆ.
SHOCKING :` ಚಿಕನ್’ ಬೇಕು ಎಂದ ಹೆತ್ತ ಮಗನನ್ನೇ ಲಟ್ಟಣಿಗೆಯಿಂದ ಹೊಡೆದು ಕೊಂದ ಪಾಪಿ ತಾಯಿ.!