ಬೆಂಗಳೂರು: ದಸರಾ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಕೆ ಎಸ್ ಆರ್ ಟಿ ಸಿಯು ಮೈಸೂರು ದಸರಾ ವಿಶೇಷ ಬಸ್ಸುಗಳಿಗೆ ಟಿಕೆಟ್ ದರವನ್ನು ಏರಿಕೆ ಮಾಡಿದೆ. ಈ ಬಾರಿ ರೂ.20 ಟಿಕೆಟ್ ದರವನ್ನು ಹೆಚ್ಚಿಸಿದೆ. ಈ ಮೂಲಕ ದಸರಾ ನೋಡಲು ಹೊರಟವರಿಗೆ ಕೆ ಎಸ್ ಆರ್ ಟಿ ಸಿ ಟಿಕೆಟ್ ದರ ಏರಿಕೆಯ ಶಾಕ್ ನೀಡಲಾಗಿದೆ.
ಈ ಕುರಿತಂತೆ ಆದೇಶ ಹೊರಡಿಸಿರುವಂತ ಕೆ ಎಸ್ ಆರ್ ಟಿ ಸಿಯು, ದಸರಾ ಪ್ರಯುಕ್ತ ಪ್ರತಿ ವರ್ಷದಂತೆ ದಸರಾ ವಿಶೇಷ ಬಸ್ಸುಗಳ ಟಿಕೆಟ್ ದರವನ್ನು ರೂ.20 ಹೆಚ್ಚಳ ಮಾಡಿರುವುದಾಗಿ ತಿಳಿಸಿದೆ. ಹೀಗಾಗಿ ಕೆ ಎಸ್ ಆರ್ ಟಿ ಸಿ ವೇಗದೂತ, ತಡೆರಹಿತ, ರಾಜಹಂಸ, ಐರಾವತ ಸೇರಿದಂತೆ ಮೈಸೂರು ದಸರಾ ಪ್ರಯುಕ್ತ ಸಂಚರಿಸುವಂತ ಕೆ ಎಸ್ ಆರ್ ಟಿ ಸಿ ಬಸ್ಸುಗಳ ಟಿಕೆಟ್ ದರ ಹೆಚ್ಚಳವಾದಂತೆ ಆಗಿದೆ.
ಯಾವ್ಯಾವ ಬಸ್ ಟಿಕೆಟ್ ದರ ಎಷ್ಟು ಏರಿಕೆ.? ಇಲ್ಲಿದೆ ಮಾಹಿತಿ
ಕರ್ನಾಟಕ ಸಾರಿಗೆ ವೇಗದೂತ- ರೂ.170ರಿಂದ ರೂ.190ಕ್ಕೆ ಏರಿಕೆ
ತಡೆ ರಹಿತ ಸಾರಿಗೆ- ರೂ.210ರಿಂದ 240 ರೂ.ಗೆ ಏರಿಕೆ.
ರಾಜಾಹಂಸ – ರೂ.270 ರಿಂದ ರೂ.290ಕ್ಕೆ ಏರಿಕೆ.
ಐರಾವತ – ರೂ.430 ರಿಂದ 450 ರೂ.ಗೆ ಏರಿಕೆ.
ಐರಾವತ ಕ್ಲಬ್ ಕ್ಲಾಸ್ – ರೂ.440 ರಿಂದ ರೂ.460ಕ್ಕೆ ಏರಿಕೆಯಾಗಿದೆ.
ಆಯ್ದ ತೆರಿಗೆದಾರರಿಗೆ ತೆರಿಗೆ ಪಾವತಿ ವಿಳಂಬದ ಮೇಲಿನ ಬಡ್ಡಿಯನ್ನು ಆದಾಯ ತೆರಿಗೆ ಇಲಾಖೆ ಮನ್ನಾ
ಖ್ಯಾತ ಕಲಾವಿದ, ರಂಗಕರ್ಮಿ ಯಶವಂತ ಸರದೇಶಪಾಂಡೆ ನಿಧನಕ್ಕೆ ಸಚಿವ ಶಿವರಾಜ ತಂಗಡಗಿ ಸಂತಾಪ