ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗವು ಕೈಗೊಂಡಿರುವ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಸಮೀಕ್ಷೆಗೆ ಬೆಂಬಲಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಹಿಂದುಳಿದ ವರ್ಗಗಳ ಮಾನ್ಯ ಸಚಿವರು, ಲೋಕಸಭಾ ಸದಸ್ಯರು, ವಿಧಾನಸಭೆಯ ಸದಸ್ಯರು, ವಿಧಾನಪರಿಷತ್ತಿನ ಸದಸ್ಯರು, ಹಾಗೂ ಹಿರಿಯ ನಾಯಕರು 25-09-2025 ರ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ವಿಭಾಗವಾರು ಸಮಿತಿಗಳನ್ನು ಕೆಳಕಂಡಂತೆ ರಚಿಸಲಾಗಿರುತ್ತದೆ. ಈ ಮೂಲಕ ಜಾತಿಗಣತಿ ಸಮೀಕ್ಷೆಗೆ ಮತ್ತಷ್ಟು ಚುರುಕನ್ನು ಸರ್ಕಾರ ನೀಡಿದೆ.
ಸಮಿತಿ-I : ಬೆಂಗಳೂರು ವಿಭಾಗ
1. ಬೈರತಿ ಸುರೇಶ್, ಸಚಿವರು
2. ಎಂ.ಆರ್.ಸೀತಾರಾಮ್, ಶಾಸಕರು
3. ಡಿ.ಟಿ.ಶ್ರೀನಿವಾಸ್, ಶಾಸಕರು
4. ಪುಟ್ಟರಂಗ ಶೆಟ್ಟಿ, ಶಾಸಕರು
5. ಎಂ.ಸಿ.ವೇಣುಗೋಪಾಲ್, ಮಾಜಿ ಶಾಸಕರು
6. ಪಿ.ಆರ್.ರಮೇಶ್, ಮಾಜಿ ಶಾಸಕರು
ಸಮಿತಿ -II : ಕಲಬುರ್ಗಿ ವಿಭಾಗ
1. ಬೋಸರಾಜ್, ಸಚಿವರು
2.ಡಾ. ಯತೀಂದ್ರ ಸಿದ್ದರಾಮಯ್ಯ, ಶಾಸಕರು
3.ಡಾ.ಅಜಯ್ ಸಿಂಗ್, ಶಾಸಕರು
4. ರಮೇಶ್ ಬಾಬು, ಶಾಸಕರು
5. ತಿಪ್ಪಣ್ಣ ಕಮಕನೂರು, ಶಾಸಕರು
6. ಹೆಚ್.ಆರ್.ಗವಿಯಪ್ಪ, ಶಾಸಕರು
ಸಮಿತಿ-III : ಮೈಸೂರು ವಿಭಾಗ
1. ಮಧು ಬಂಗಾರಪ್ಪ, ಸಚಿವರು
2. ಮಂಕಾಳ್ ವೈದ್ಯ, ಸಚಿವರು
3. ಎ.ಎಸ್.ಪೊನ್ನಣ್ಣ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು
4. ಪ್ರದೀಪ್ ಈಶ್ವರ್, ಶಾಸಕರು
5.ಡಾ.ರವಿಕುಮಾರ್, ಮುಖ್ಯಮಂತ್ರಿಗಳ ವೈದ್ಯಾಧಿಕಾರಿಗಳು
6. ವಿ.ಆರ್. ಸುದರ್ಶನ್, ಮಾಜಿ ಉಪಸಭಾಪತಿಗಳು
ಸಮಿತಿ-IV : ಬೆಳಗಾವಿ ವಿಭಾಗ
1. ಸಂತೋಷ್ ಲಾಡ್, ಸಚಿವರು
2. ಬಿ.ಕೆ.ಹರಿಪ್ರಸಾದ್, ಶಾಸಕರು
3. ಹೆಚ್.ಎಂ.ರೇವಣ್ಣ, ಮಾಜಿ ಸಚಿವರು
4. ಶ್ರೀನಿವಾಸ ಮಾನೆ , ಶಾಸಕರು
5. ಉಮಾಶ್ರೀ, ಶಾಸಕರು
6. ರಾಘವೇಂದ್ರ ಹಿಟ್ನಾಳ್, ಶಾಸಕರು
ವಿಶೇಷ ಆಹ್ವಾನಿತರು :
ಹಿಂದುಳಿದ ವರ್ಗಗಳ/ಸಮುದಾಯಗಳ ಕರ್ನಾಟಕದ ಪಾರ್ಲಿಮೆಂಟ್ ಸದಸ್ಯರು, ಕರ್ನಾಟಕ ವಿಧಾನಸಭೆಯ ಸದಸ್ಯರು, ವಿಧಾನ ಪರಿಷತ್ತಿನ ಸದಸ್ಯರು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವಿಭಾಗಗಳ ಅಧ್ಯಕ್ಷರು ಮತ್ತು ಹಿಂದುಳಿದ ವರ್ಗಗಳ ಎಲ್ಲಾ ಸಮುದಾಯಗಳ ರಾಜ್ಯ ಘಟಕ ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷರು ಈ ಸಮಿತಿಯ ವಿಶೇಷ ಆಹ್ವಾನಿತರಾಗಿರುತ್ತಾರೆ.
ಸಮಿತಿಯ ಕಾರ್ಯ ಜವಾಬ್ದಾರಿ:
ಸಮಿತಿಯ ಸದಸ್ಯರು ಕೂಡಲೇ ವಿಭಾಗವಾರು ಸಭೆ ಮತ್ತು ಮಾಧ್ಯಮಗೋಷ್ಠಿಗಳನ್ನು ನಡೆಸಿ ಹಿಂದುಳಿದ ವರ್ಗಗಳಲ್ಲಿ ಜಾಗೃತಿ ಮೂಡಿಸಲು ಮತ್ತು ರಾಜ್ಯ ಹಿಂದುಳಿದ ವರ್ಗಗಳ ಸಮೀಕ್ಷೆಯನ್ನು ಸ್ವಾಗತಿಸಿ ಬೆಂಬಲಿಸಲು ಕೋರಿದೆ. ಸಮಿತಿಯು ಆಯೋಜಿಸುವ ಸಭೆ ಮತ್ತು ಮಾಧ್ಯಮಗೋಷ್ಠಿಗಳಲ್ಲಿ ರಾಜ್ಯ ಸರ್ಕಾರವು ಕೈಗೊಂಡಿರುವ ತೀರ್ಮಾನವು ಸಕಾಲಿಕ ಮತ್ತು ಸಮಂಜಸವೆಂಬುದನ್ನು ಮನವರಿಕೆ ಮಾಡಿಕೊಡುವುದರ ಜೊತೆಗೆ, ಕಾಂಗ್ರೆಸ್ ಪಕ್ಷದ ನಿಲುವಿಗೆ ಅನುಗುಣವಾಗಿ ಮತ್ತು ಸಾಮಾಜಿಕ ನ್ಯಾಯದ ಪರಿಪಾಲನೆಯ ಹಿನ್ನೆಲೆಯಲ್ಲಿ ಈ ಸಮೀಕ್ಷೆಯನ್ನು ಕೈಗೊಂಡಿರುವ ಅಂಶವನ್ನು ತಿಳಿಸಲಿದೆ.
ಈ ಸಮೀಕ್ಷೆಯಿಂದ ರಾಜ್ಯದಲ್ಲಿ ಹಿಂದುಳಿದ ಸಮುದಾಯಗಳ ಫಲಾನುಭವಿಗಳನ್ನು ಗುರುತಿಸಲು, ಹಿಂದುಳಿದ ಜಾತಿಗಳ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮತ್ತು ಫಲಾನುಭವಿಗಳಿಗೆ ನೇರವಾಗಿ ಸರ್ಕಾರದ ವತಿಯಿಂದ ಹಣ ಅಥವಾ ಅನುದಾನ ಡಿಬಿಟಿ ಮುಖಾಂತರ ಪಾವತಿ ಮಾಡಲು ಅವಕಾಶವಾಗುತ್ತದೆ. ಸಾಮಾಜಿಕ ನ್ಯಾಯದ ಪರಿಪಾಲನೆಯ ಹಿನ್ನೆಲೆಯಲ್ಲಿ, ರಾಜ್ಯದ ಹಿಂದುಳಿದ ಸಮುದಾಯಗಳ ಪ್ರಗತಿ ಮತ್ತು ಅಭಿವೃದ್ಧಿಯ ಹಿನ್ನೆಲೆಯಲ್ಲಿ ಮತ್ತು ಅರ್ಹ ಫಲಾನುಭವಿಗಳ ಆಯ್ಕೆ ಮಾಡುವ ಕಾರಣಕ್ಕೆ ಇಂತಹ ಸಮೀಕ್ಷೆ ಅನಿವಾರ್ಯ ಮತ್ತು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ನಾಗರೀಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತಾದ ಸಮೀಕ್ಷೆಯ ಕಾರ್ಯ ನ್ಯಾಯಸಮ್ಮತವಾಗಿದ್ದು, ಇದನ್ನು ನಾವು ಬೆಂಬಲಿಸುತ್ತೇವೆ ಮತ್ತು ಸ್ವಾಗತಿಸುತ್ತೇವೆ ಎಂದು ಸಮಿತಿಯ ಮುಖಾಂತರ ತಿಳಿಸಲಿದೆ.
ವಿಭಾಗವಾರು ಮತ್ತು ಜಿಲ್ಲಾವಾರು ಸಭೆಗಳನ್ನು ನಡೆಸುವ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಸಣ್ಣ ಸಣ್ಣ ಸಮುದಾಯಗಳನ್ನು ಗುರುತಿಸಿ ಅವರಿಗೆ ಸಮೀಕ್ಷೆಯ ಪ್ರಾಮುಖ್ಯತೆ ಮತ್ತು ಅನಿವಾರ್ಯತೆಯನ್ನು ತಿಳಿಸುವುದು ಸಮಿತಿಯು ಜವಾಬ್ದಾರಿಯಾಗಿರುತ್ತದೆ. ಇದರ ಜೊತೆಗೆ ಸಾಮಾಜಿಕ ನ್ಯಾಯದ ಪರಿಪಾಲನೆಯ ಹಿನ್ನೆಲೆಯಲ್ಲಿ ಅವಕಾಶ ವಂಚಿತ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸಿಗಬೇಕಾದ ನ್ಯಾಯಯುತ ಅವಕಾಶಗಳ ಮಾಹಿತಿಯನ್ನು ಸಮಿತಿಯು ನೀಡತಕ್ಕದ್ದು. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಗೆ ಅನುಗುಣವಾಗಿ ಹಿಂದುಳಿದ ವರ್ಗಗಳ ಹಕ್ಕು ಮತ್ತು ಜವಾಬ್ದಾರಿಗಳನ್ನು ಸಮುದಾಯಗಳಿಗೆ ತಿಳಿಸಿಕೊಡುವ ಕೆಲಸವನ್ನು ಸಮಿತಿಯು ನಿರ್ವಹಿಸುವರು.