ದಾವಣಗೆರೆ : ಜಾತಿಗಣತಿ ಸಮೀಕ್ಷೆಗೆ ಹಾಜರಾಗದ ಶಿಕ್ಷಕರಿಗೆ ಸರ್ಕಾರವು ಶಾಕ್ ನೀಡಿದ್ದು, ಮೂವರು ಶಿಕ್ಷಕರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ರಾಜ್ಯಾದ್ಯಂತ ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಸಮಿಕ್ಷೆ- ಜಾತಿಗಣತಿ ನಡೆಯುತ್ತಿದ್ದು, ಗಣತಿಗೆ ಗೈರಾಗಿದ್ದ ಮೂವರು ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ, ಇಬ್ಬರು ಶಿಕ್ಷಕರು, ಓರ್ವ ಹಾಸ್ಟೆಲ್ ವಾರ್ಡನ್ ಸೇರಿ ಮೂವರು ಸಿಬ್ಬಂದಿಗಳನ್ನು ಅಮಾನತುಗೊಳಿಸಿ ದಾವಣಗೆರೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ ಜಿ ಎಂ ಗಂಗಾಧರಸ್ವಾಮಿ, ಭಾ.ಆ.ಸೇ., ಶಿಸ್ತು ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿ, ದಾವಣಗೆರೆ ಜಿಲ್ಲೆ ಆದ ನಾನು ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ಮಂಜುನಾಥ ಡಿ ಕೆ. ಸಹ ಶಿಕ್ಷಕರು, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ. ಜಮಾಪುರ, ದಾವಣಗೆರೆ ಉತ್ತರ ವಲಯ ಇವರನ್ನು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ. ಕರ್ನಾಟಕ ಸರ್ಕಾರಿ ಸಿವಿಲ್ ಸೇವಾ (ವರ್ಗಿಕರಣ ಮತ್ತು ಅಪೀಲು) ನಿಯಮಾವಳಿ, 1957 ರ ನಿಯಮ 10(1)(ಡಿ) ರನ್ವಯ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದೆ.