ಬೆಂಗಳೂರು : ಕರ್ನಾಟಕ ಹೈಕೋರ್ಟ್ ಗೆ ಸೆಪ್ಟೆಂಬರ್ 27ರಿಂದ ಅ.7ರವರೆಗೆ ದಸರಾ ರಜೆ ಇರಲಿದ್ದು, ಅ.8ರಂದು ಕೋರ್ಟ್ ಕಲಾಪ ಪುನಾರಂಭವಾಗಲಿದೆ.
ರಜಾ ಅವಧಿಯಲ್ಲಿ ಸೆ.30 ಮತ್ತು ಅ.3ರಂದು ಬೆಂಗಳೂರು, ಧಾರವಾಡ ಮತ್ತು ಕಲಬುರಗಿಯಲ್ಲಿ ರಜಾಕಾಲೀನ ಪೀಠಗಳು ತುರ್ತು ಪ್ರಕರಣಗಳ ವಿಚಾರಣೆ ನಡೆಸಲಿವೆ. ಸೆ.30ರಂದು ಬೆಂಗಳೂರು ಪೀಠದಲ್ಲಿ ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಮತ್ತು ಕೆ.ರಾಜೇಶ್ ರೈ ವಿಭಾಗೀಯ ಪೀಠ ಪ್ರಕರಣಗಳ ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿಗಳಾದ ವಿ.ಶ್ರೀಶಾನಂದ ಮತ್ತು ಸಿ.ಎಂ. ಪೂಣಚ್ಚ ಏಕಸದಸ್ಯ ಪೀಠದಲ್ಲಿನ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ.
ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ವಿಭಾಗೀಯ ಪೀಠದ ಪ್ರಕರಣ ಮತ್ತು ಏಕಸದಸ್ಯ ಪೀಠದ ಪ್ರಕರಣಗಳ ವಿಚಾರಣೆ ಕೈಗೆತ್ತಿಕೊಳ್ಳಲಾಗುತ್ತದೆ.ಅ.3ರಂದು ಬೆಂಗಳೂರು ಪೀಠದಲ್ಲಿ ನ್ಯಾಯಮೂರ್ತಿಗಳಾದ ಬಿ.ಎಂ.ಶ್ಯಾಮ್ ಪ್ರಸಾದ್ ಮತ್ತು ಕೆ.ವಿ.ಅರವಿಂದ್ ವಿಭಾಗೀಯ ಪೀಠದಲ್ಲಿ, ನ್ಯಾಯಮೂರ್ತಿಗಳಾದ ಎಂ.ಜಿ.ಎಸ್. ಕಮಲ್ ಮತ್ತು ಸಿ.ಎಂ.ಜೋಶಿ ಏಕಸದಸ್ಯ ಪೀಠದಲ್ಲಿನ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ ಎಂದು ಹೈಕೋರ್ಟ್ ಪ್ರಕಟಣೆ ತಿಳಿಸಿದೆ.