ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ವು ಭಾರತೋಯ ಸಾರ್ವಜನಿಕ ಸಂಪರ್ಕ ಮಂಡಳಿಯ (PRCI) ವತಿಯಿಂದ ನಡೆದ *15ನೇ ವಿಶ್ವ ಸಂವಹನ ಸಮ್ಮೇಳನ ಮತ್ತು ಎಕ್ಸಲೆನ್ಸ್ ಅವಾರ್ಡ್ಸ್ 2025 ರ ಕಾರ್ಯಕ್ರಮದಲ್ಲಿ 9 ವಿಭಾಗಗಳಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಗಳಿಸಿದೆ.
ಈ ಕೆಳಗಿನ ವಿಭಾಗಗಳಲ್ಲಿ ಪ್ರಶಸ್ತಿಗಳು ಲಭಿಸಿದೆ:
*ಡಿಜಿಟಲ್ ಮೀಡಿಯಾ ಇನೋವೇಶನ್ ಮತ್ತು ಹೌಸ್ ಜರ್ನಲ್ ಪ್ರಿಂಟ್ (ಪ್ರಾದೇಶಿಕ) ವಿಭಾಗದಲ್ಲಿ ಚಿನ್ನದ ಪದಕ
*ಹೆಲ್ತ್ ಕೇರ್ ಕಮ್ಯುನಿಕೇಶನ್ ಫಿಲ್ಮ್ಸ್ ವಿಭಾಗದಲ್ಲಿ ಬೆಳ್ಳಿ ಪದಕ
*ವಿಶಿಷ್ಟ ಮಾನವ ಸಂಪನ್ಮೂಲ (HR) ಕಾರ್ಯಕ್ರಮಕ್ಕಾಗಿ ಕಂಚಿನ ಪದಕ
*ಗ್ರಾಹಕ ಸೇವಾ ಶ್ರೇಷ್ಠತೆ,ಬ್ಯಾಂಡಿಂಗ್, ವೆಬ್‌ಸೈಟ್ ಮತ್ತು ಮೈಕ್ರೋಸೈಟ್, ಕಾರ್ಪೊರೇಟ್ ಫಿಲ್ಮ್ಸ್, ಮಾರ್ಕೆಟಿಂಗ್ ಕ್ಯಾಂಪೇನ್ ಮತ್ತು ಆಂತರಿಕ ಕಮ್ಯುನಿಕೇಶನ್ ಕ್ಯಾಂಪೇನ್ ವಿಭಾಗಗಳಲ್ಲಿ ಪ್ರಶಸ್ತಿಗಳು ಲಭಿಸಿರುತ್ತವೆ.
ಈ ಸಾಧನೆಗಳು ನಿಗಮವು ಆಧುನಿಕ ತಂತ್ರಜ್ಞಾನ, ನವೀನ ಚಟುವಟಿಕೆಗಳು ಮತ್ತು ಪರಿಣಾಮಕಾರಿ ಸಾರ್ವಜನಿಕ ಸಂಪರ್ಕ ಕಾರ್ಯಾಚರಣೆಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿರುವುದಕ್ಕೆ ಸಾಕ್ಷಿಯಾಗಿದೆ.
ಇಂದು ಗೋವಾದ ದ ಫರ್ನ್ ಕದಂಬ ಹೋಟೆಲ್ನಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಡಾ. ಗಣೇಶ್ ಗಾಂವ್ಕರ್, ಗೌರವಾನ್ವಿತ ವಿಧಾನಸಭಾಧ್ಯಕ್ಷರು ಗೋವಾ ವಿಧಾನಸಭೆ ಮತ್ತು ಕುಮಾರಿ ಎಸ್ಟರ್ ವ್ಯಾಲೆರಿ ನೊರೊನ್ಹಾ ನಟಿ ಮತ್ತು ಗಾಯಕಿ ಮತ್ತು ಮಿಲಿನ್ ತೆಂಡೂಲ್ಕರ್, ನಟ, ರೂಪದರ್ಶಿ ಮತ್ತು ಸಮಾಜ ಸೇವಕ ಎಂ ಬಿ ಜಯರಾಮ್, ಮುಖ್ಯಸ್ಥರು ಹಾಗೂ ಅಧ್ಯಕ್ಷರು ಪಿ ಆರ್ ಸಿ ಐ ರವರು ಪ್ರಶಸ್ತಿ ಪ್ರದಾನ ಮಾಡಿದರು.
ಚಂದ್ರಶೇಖರ್, ವಿಭಾಗೀಯ ನಿಯಂತ್ರಣಾಧಿಕಾರಿ, ತುಮಕೂರು ವಿಭಾಗ ಮತ್ತು ಬಸವರಾಜು ವಿಭಾಗೀಯ ನಿಯಂತ್ರಣಾಧಿಕಾರಿ, ಚಿಕ್ಕಬಳ್ಳಾಪುರ ವಿಭಾಗ ರವರು ನಿಗಮದ ಪರವಾಗಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.