ಬೆಂಗಳೂರು: ಯಾರು ರಾಜ್ಯ, ದೇಶದ ಪ್ರಗತಿಗೆ ಕೆಲಸ ಮಾಡುತ್ತಾರೆ ಅವರನ್ನು ಗುರುತಿಸುವ ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಏಷಿಯಾನೆಟ್ ಸುವರ್ಣ ಹಾಗೂ ಕನ್ನಡ ಪ್ರಭ ಪತ್ರಿಕೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಎಮಿನೆಂಟ್ ಎಂಜನೀಯರ್ ಅವಾರ್ಡ್ ಕಾರ್ಯಕ್ರಮವನ್ನು ಕೇಂದ್ರ ರೈಲ್ವೆ ಹಾಗೂ ಜಲ ಸಂಪನ್ಮೂಲ ಸಚಿವ ವಿ. ಸೋಮಣ್ಣ ಅವರೊಂದಿಗೆ ಉದ್ಘಾಟಿಸಿದರು.
ಕನ್ನಡಪ್ರಭ ಸ್ವಾತಂತ್ರ್ಯ ನಂತರದ ಅತ್ಯಂತ ಪರಿಣಾಮ ಕಾರಿಯಾಗಿ ಪತ್ರಿಕೋದ್ಯಮ ದಲ್ಲಿ ತನ್ನ ಹೆಜ್ಜೆ ಗುರುತು ಬಿಟ್ಟಿದೆ. ಹಲವಾರು ಪತ್ರಿಕೆಗಳು ಬರುತ್ತವೆ. ದೇಶ ಹಾಗೂ ಜನರ ಏಳಿಗೆಗೆ ನಿರಂತರವಾಗಿ ಉಳಿಸಿಕೊಂಡು ಬಂದಿರುವುದು ಕನ್ನಡಪ್ರಭ. ಇವರು ಅನೇಕ ವೈಚಾರಿಕತೆ ಜನರಲ್ಲಿ ಬಿತ್ತಿದ್ದಾರೆ. ವಿಶ್ವಾಸಾರ್ಹತೆಗೆ ಜನರು ನಂಬಿದ್ದು ಕನ್ನಡ ಪ್ರಭವನ್ನು. ಕನ್ನಡ ಪ್ರಭ ಮುದ್ರಣ ಮಾದ್ಯಮದ ವಿಶ್ವ ವಿದ್ಯಾಲಯ. ಇಲ್ಲಿ ಕೆಲಸ ಮಾಡಿದವರು ಅನೇಕ ಕಡೆ ಯಶಸ್ವಿ ಪತ್ರಕರ್ತರಾಗಿದ್ದಾರೆ. ಇಂತಹ ಸಂಸ್ಥೆಯಿಂದ ಪ್ರಶಸ್ತಿ ಪಡೆದಿರುವುದು ಪುರಸ್ಕೃತರು ಹೆಮ್ಮೆ ಪಡುವ ವಿಷಯ ಎಂದರು.
ಸರ್ಕಾರವೂ ಪ್ರಶಸ್ತಿ ನೀಡುತ್ತದೆ. ಒಂದು ಕಾಲದಲ್ಲಿ ಸರ್ಕಾರದ ಕೆಲಸ ಮಾಡುವುದು ಗೌರವದ ಸಂಕೇತವಾಗಿತ್ತು. ಅವತ್ತಿನ ಅಸಿಸ್ಟಂಟ್ ಎಂಜನಿಯರ್ ಗೆ ಸಿಗುವ ಗೌರವ ಈಗ ಚೀಪ್ ಎಂಜನೀಯರ್ ಗೆ ಸಿಗುತ್ತಿಲ್ಲ. ಸರ್ಕಾರದ ಘನತೆ ಉಳಿಸುವುದು ಸರ್ಕಾರದ ಕೆಲಸ, ಎಂಜನೀಯರ್ ಗೌರವ ಉಳಿಸುವ ಕೆಲಸ ನಾವು ಮಾಡಬೇಕು. ನಾವು ಮಾಡುವ ಕೆಲಸ ಪ್ರಾಮಾಣಿಕವಾಗಿರಬೇಕು ಮತ್ತು ಇತರಿಗೆ ಪ್ರೇರಣೆಯಾಗಿರಬೇಕು. ಕನ್ನಡ ಪ್ರಭ ಸಣ್ಣ ಸಣ್ಣ ಊರುಗಳಲ್ಲಿ ಕೆಲಸ ಮಾಡುವ ಎಂಜನೀಯರ್ ಗಳನ್ನು ಗುರುತಿಸಿರುವುದು ಶ್ಲಾಘನೀಯ. ಅವರು ದೇಶದ ಭವಿಷ್ಯ. ಅವರು ಹೆಮ್ಮರವಾಗಿ ಬೆಳೆಯುವ ವಿಶ್ವಾಸ ಇದೆ. ನೀವು ಇನ್ನೂ ಹೆಚ್ಚಿನ ಸಾಧನೆ ಮಾಡಲು ಈ ಪ್ರಶಸ್ತಿ ಪ್ರೇರಣೆಯಾಗಿದೆ ಎಂದರು.
ಹೊಸತನದ ಹುಡುಕಾಟ
ನಾನು ಎಂಜನೀಯರ್ ಐ ಎಂ ಎ ಎಂಜನೀಯರ್ ಬಾಯ್ ಚಾಯ್ಸ್ ನಾಟ್ ಪೊಲಿಟಿಷಿಯನ್ ಬಾಯ್ ಚಾಯ್ಸ್. ನಾನು ಹೈಸ್ಕೂಲ್‌ನಲ್ಲಿ ಇದ್ದಾಗ ಎಂಜನೀಯರ್ ಆಗಬೇಕೆಂದು ಕನಸು ಕಂಡಿದ್ದೆ, ಕೆಲಸ ಮಾಡಿದರೆ ಟಾಟಾ ಮೋಟರ್ಸ್ ನಲ್ಲೇ ಕೆಲಸ ಮಾಡಬೇಕೆಂದುಕೊಂಡಿದ್ದೆ, ಟಾಟಾ ಮೋಟರ್ಸ್ ಗೆ ಸೆಲೆಕ್ಟ್ ಆದಾಗ ನನ್ನ ಜೀವನ ಸಾರ್ಥಕ ಆಯಿತು ಅಂತ ಅಂದುಕೊಂಡೆ, ಟಾಟಾದಾಗಿನ ಅನುಭವ ನನ್ನ ಆಡಳಿತ ನಡೆಸಲು ಅನುಕೂಲವಾಯಿತು. ಒಬ್ಬ ತಂತ್ರಜ್ಞಾನ ಹೊಂದಿರುವವರು ನಿರ್ಣಯ ಕೈಗೊಳ್ಳುವ ಸ್ಥಾನದಲ್ಲಿ ಇದ್ದರೆ ಎಷ್ಟು ಬದಲಾವಣೆ ಆಗುತ್ತದೆ ಎನ್ನುವುದು ಗೊತ್ತಾಗುತ್ತದೆ. ಎಲ್ಲರಿಗೂ ಜ್ಞಾನ ಇರುತ್ತದೆ. ಜ್ಣಾನದಿಂದ ವಿಜ್ಞಾನ, ವಿಜ್ಞಾನದಿಂದ ತಂತ್ರಜ್ಞಾನ ತಂತ್ರಜ್ಞಾನದಿಂದ ಎಐ. ಇಡೀ ದೇಶವೇ ಹೊಸತನದ ಹುಡುಕಾಟದಲ್ಲಿದೆ. ನಾವು ಆಡಳಿತದಲ್ಲಿ ಹೊಸತನ ತರಲು ಅನೇಕ ವರದಿಗಳನ್ನು ಮಾಡಿದ್ದೇವೆ. ಸರ್ ಎಂ. ವಿಶ್ವೇಶ್ವರಯ್ಯ ಅವರು ಪರಂಪರೆ ಬಿಟ್ಟು ಹೊಗಿದ್ದಾರೆ. ಅವರು ಹುಟ್ಟಿರುವ ನಾಡಿನಲ್ಲಿ ಅಭಿವೃದ್ಧಿ ಸಾಧಿಸುವುದು ರಾಜ್ಯಕ್ಕೆ ಅಗತ್ಯವಿದೆ. ಯಾರು ರಾಜ್ಯ, ದೇಶದ ಪ್ರಗತಿಗೆ ಕೆಲಸ ಮಾಡುತ್ತಾರೆ ಅವರನ್ನು ಗುರುತಿಸುವ ಕೆಲಸ ಮಾಡಬೇಕು. ಟ್ರಂಪ್ ಅಮೇರಿಕಾ ಅಧ್ಯಕ್ಷ ಆದರೂ ಅವರಿಗೆ ಸಮಾಧಾನ ಇಲ್ಲ. ಅವರು ಬಹಿರಂಗವಾಗಿಯೇ ನೊಬೆಲ್ ಪ್ರಶಸ್ತಿ ಗೆ ಬೇಡುತ್ತಿದ್ದಾರೆ. ನಿಜವಾದ ದೇಶದ ಅಭಿವೃದ್ಧಿ ಮಾಡುವವರು ರೈತರು ಮತ್ತು ಕೂಲಿ ಕಾರ್ಮಿಕರು, ಆಡಳಿತ ಮಾಡುವವರು ಹಣ ಬಿಡುಗಡೆ ಮಾಡಿದರೆ ಅದನ್ನು ಕೂಲಿ ಕಾರ್ಮಿಕ ರಸ್ತೆ ಮಾಡುತ್ತಾನೆ. ರೈತ ಜಗತ್ತಿಗಾಗಿ ದುಡಿಯುತ್ತಿದ್ದಾನೆ. ಅವರು ನಿಜವಾದ ಆರ್ಥಿಕತೆಯ ಬೆಳವಣಿಗೆಕಾರರು ಎಂದರು.
ಸಕ್ರೀಯ ಸಚಿವ ಸೋಮಣ್ಣ
ಸೋಮಣ್ಣ ಅವರು ಒಬ್ಬ ಸಂಪುಟ ಸಚಿವರಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಕಾಯಕವೇ ಕೈಲಾಸ ಅಂತ ಕೆಲಸ ಮಾಡುವವರು ಸೋಮಣ್ಣ ಅವರು, ಅವರು ಕರ್ತವ್ಯ ಪ್ರಜ್ಞೆಯಿಂದ ಕೆಲಸ ಮಾಡುತ್ತಾರೆ. ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಸರ್ಕಾರ ಹತ್ತು ವರ್ಷದಲ್ಲಿ 25 ಲಕ್ಷ ಕೋಟಿ ರೂ. ಹಣ ನಿಡಿದ್ದಾರೆ. ನಾವು ಅದನ್ನು ಅನುಭವಿಸುತ್ತಿದ್ದೇವೆ. ಅದನ್ನು ಸೋಮಣ್ಣ ಅವರು ಪ್ರಾಮಾಣಿಕವಾಗಿ ಮಾಡಬೇಕೆಂದು ಮಾಡುತ್ತಿದ್ದಾರೆ. ಕನ್ನಡ ಪ್ರಭ ಮುತ್ತುಗಳನ್ಮು ಹುಡುಕಿ ಸಮಾಜಕ್ಕೆ ಪರಿಚಯಿಸಿದ್ದಾರೆ ಎಂದರು.
ಬಿವಿಬಿ ನಾವೆಲ್ಲ ಓದಿದ ಕಾಲೇಜ್ ಅದು ಐಐಟಿ ಮಟ್ಟದಲ್ಲಿ ಬೆಳೆದಿದೆ. ನಾನು ಈಗ ನೋಡಿದಾಗ ನಾನು ಈಗ ವಿದ್ಯಾರ್ಥಿ ಆಗಬೇಕಿತ್ತು ಅಂತ ಅನಿಸಿತು. ಅಶೊಕ ಶೆಟ್ಟರ್ ಅದನ್ನು ಆ ಮಟ್ಡಕ್ಕೆ ಬೆಳೆಸಿದ್ದಾರೆ. ವಿಸಿ ಸ್ಥಾನ ಅವರ ಜ್ಞಾನಕ್ಕೆ ದೊಡ್ಡದಲ್ಲ. ಸರ್ಕಾರ ಅವರ ಜ್ಞಾನವನ್ನು ಬಳಸಿಕೊಳ್ಳಬೇಕು. ಚಾಲುಕ್ಯರ ದೊರೆ ಆರನೇ ವಿಕ್ರಮಾಧಿತ್ಯನ ಕಾಲದ ಶಾಸನದಲ್ಲಿ ಒಂದು ಉಲ್ಲೇಖವಿದೆ. ಆಳುವುದು ಬೇರೆ ಆಡಳಿತ ಮಾಡುವುದು ಬೇರೆ. ಆದರೆ ಈಗ ಆಳುವವರು ಅಧಿಕಾರ ಮಾಡಲು ಹೊರಟಿದ್ದಾರೆ. ಅಧಿಕಾರ ಮಾಡುವವರು ಆಳಲು ಹೊರಟ್ಟಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಪ್ರಭ ಸಂಪಾದಕ ರವಿ ಹೆಗಡೆ, ಎಫ್ ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಹಾಗೂ ಮತ್ತಿತರರು ಹಾಜರಿದ್ದರು.
BREAKING: ‘ಚುನಾವಣಾ ರಾಜಕೀಯ’ಕ್ಕೆ ನಿವೃತ್ತಿ ಘೋಷಿಸಿದ ‘ಗೀತಾ ಶಿವರಾಜ್ ಕುಮಾರ್’ | Geetha Shivarajkumar
SHOCKING : ಎದೆಹಾಲು ಕುಡಿಯುವಾಗಲೇ ಉಸಿರುಗಟ್ಟಿ ಒಂದೂವರೆ ತಿಂಗಳ ಮಗು ಸಾವು.!