Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲೆಸೆತ, ಲಾಠಿ ಚಾರ್ಜ್ ಕೇಸ್ : ಬಿವೈ ವಿಜಯೇಂದ್ರಗೆ ವರದಿ ಸಲ್ಲಿಸಿದ ಸತ್ಯಶೋಧನಾ ಸಮಿತಿ

27/09/2025 4:29 PM

Watch Video : ತಂದೆ ಸಾವಿನ ನೋವಲ್ಲಿರುವ ‘ಶ್ರೀಲಂಕಾ ಆಲ್ರೌಂಡರ್’ನ ತಬ್ಬಿ ಅಣ್ಣನಂತೆ ಸಂತೈಸಿದ ಕ್ಯಾಪ್ಟನ್ ಸೂರ್ಯ

27/09/2025 4:28 PM

ಆಳಿದ ಮೇಲೂ ಉಳಿಯುವುದು ಸಾಧನೆ ಮಾತ್ರ: ಸಚಿವ ಮಧು ಎಸ್. ಬಂಗಾರಪ್ಪ

27/09/2025 4:27 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ `ಸಿವಿಲ್ ವ್ಯಾಜ್ಯಗಳಲ್ಲಿ’ ಪೊಲೀಸರು `ಹಸ್ತಕ್ಷೇಪ’ ಮಾಡುವಂತಿಲ್ಲ : ಸರ್ಕಾರದಿಂದ ಮಹತ್ವದ ಸುತ್ತೋಲೆ
KARNATAKA

ರಾಜ್ಯದ `ಸಿವಿಲ್ ವ್ಯಾಜ್ಯಗಳಲ್ಲಿ’ ಪೊಲೀಸರು `ಹಸ್ತಕ್ಷೇಪ’ ಮಾಡುವಂತಿಲ್ಲ : ಸರ್ಕಾರದಿಂದ ಮಹತ್ವದ ಸುತ್ತೋಲೆ

By kannadanewsnow5727/09/2025 4:18 PM

* ಅವಿನಾಶ್‌ ಆರ್ ಭೀಮಸಂದ್ರ

ಬೆಂಗಳೂರು: ಸಿವಿಲ್ ವ್ಯಾಜ್ಯಗಳಲ್ಲಿ ಮೊದಲಿಂದಲೂ ಪೊಲೀಸರು ಸುಖಾ ಸುಮ್ನೆ ತಲೆ ಹಾಕುತ್ತಿದ್ದಾರೆ ಎನ್ನುವ ಆರೋಪ ಇದ್ದೇ, ತಮ್ಮ ವ್ಯಾಪ್ತಿಯನ್ನು ಹಲವು ಸಾರಿ ಪೊಲೀಸರು ಸಿವಿಲ್‌ ವ್ಯಾಜ್ಯಗಳಲ್ಲಿ ತಲೆ ಹಾಕಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ.

ಇದಲ್ಲದೇ ಸುಪ್ರಿಂಕೋರ್ಟ್ ಮತ್ತು ಹೈಕೋರ್ಟ್‌ಗಳು ಸಿವಿಲ್ ವ್ಯಾಜ್ಯಗಳಲ್ಲಿ ಪೋಲಿಸರ ಕೆಲಸ ಮತ್ತು ಕಾರ್ಯ ವ್ಯಾಪ್ತಿಗಳ ಬಗ್ಗೆ ತಿಳಿಸುತ್ತಲೇ ಬಂದಿದ್ದು, ಯಾವುದೇ ಕಾರಣಕ್ಕೂ ಕೂಡ ಸಿವಿಲ್ ವ್ಯಾಜ್ಯದಲ್ಲಿ ಪೊಲೀಸರು ತಲೆ ಹಾಕುವ ಹಾಗೇ ಇಲ್ಲ ಅಂತ ಖಡಕ್ ಆಗಿ ಹೇಳಿದೆ.

ಆದರೆ ಸುಪ್ರಿಂಕೋರ್ಟ್ ಮತ್ತು ಹೈಕೋರ್ಟ್ ಏನು ಹೇಳಿದರು ಕೂಡ ಪೊಲೀಸರು ಸಿವಿಲ್ ವ್ಯಾಜ್ಯಗಳಲ್ಲಿ ತಲೆ ಹಾಕುತ್ತಾರೆ ಎನ್ನಲಾಗುತ್ತಿದೆ. ಇದಲ್ಲದೇ ನ್ಯಾಯಾಲಗಳು ಕೂಡ ಅಂತಹ ಪೊಲೀಸ್ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡಿದೆ. ಕೂಡ ಈಗ ಮತ್ತೆ ಪೊಲೀಸ್ ಮಹಾ ನಿರ್ದೇಶಕ ಸಲೀಂ ಅವರು ತಮ್ಮ ಇಲಾಖೆ ಅಧೀನದ ಪೊಲೀಸರಿಗೆ ತಿಳಿ ಹೇಳುವ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು ಅದರ ವಿವರ ಈ ಕೆಳಕಂಡತಿದೆ.

CRM-3/105/2018, Dated 14.11.2018. 2) ಎ.ಎನ್. ವಸಂತ ಮಾಧವ ರಾವ್ ವಿರುದ್ಧ ಕರ್ನಾಟಕ ರಾಜ್ಯ ಸರ್ಕಾರ (ರಿಟ್ ಅರ್ಜಿ ಸಂ. 52846/2016, ದಿನಾಂಕ 16.06.2023)ರಲ್ಲಿ ನೀಡಿದ ತೀರ್ಪು, 3) ಲಲಿತಾ ಕುಮಾರಿ ವಿರುದ್ಧ ಉತ್ತರ ಪ್ರದೇಶ ರಾಜ್ಯ ಮತ್ತು ಇತರರ ಪ್ರಕರಣದಲ್ಲಿ ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್ ತೀರ್ಪು ದಿನಾಂಕ: 12.11.2013. ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಈ ಕಛೇರಿಯ ಉಲ್ಲೇಖ-1ರ ಸುತ್ತೋಲೆ ಅನುಸಾರ ಭೂಮಿ ಮತ್ತು ಕಟ್ಟಡಗಳಿಗೆ ಸಂಬಂಧಿಸಿದ ವಿವಾದಗಳು ಮತ್ತು ವಿಷಯಗಳನ್ನು ನಿರ್ವಹಿಸುವ ಕುರಿತಂತೆ ಪೊಲೀಸ್‌ ಅಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ಒದಗಿಸಿ ಸುತ್ತೊಲೆಯನ್ನು ಈಗಾಗಲೇ ಹೊರಡಿಸಲಾಗಿತ್ತು.
ಆದರೆ, ಕರ್ನಾಟಕ ಗೌರವಾನ್ವಿತ ಉಚ್ಛ ನ್ಯಾಯಾಯಲಯವು, ಎ.ಎನ್. ವಸಂತ ಮಾಧವ ರಾವ್ ವಿರುದ್ಧ ಕರ್ನಾಟಕ ರಾಜ್ಯ ಸರ್ಕಾರ (ಡಬ್ಲ್ಯೂಪಿ ಸಂಖ್ಯೆ: 52846/2016, ದಿನಾಂಕ: 16/06/2023) ಪ್ರಕರಣದಲ್ಲಿ ಕಂಡಿಕೆ ಸಂಖ್ಯೆ: 19 ರಲ್ಲಿ ಈ ಕೆಳಗಿನಂತೆ ಅಭಿಪ್ರಾಯ ಮತ್ತು ನಿರ್ದೇಶನವನ್ನು ನೀಡಿರುತ್ತದೆ.

“19. Therefore, it is appropriate to remind the Police Department/Officers that, when any dispute arise between two parties with regard to the Civil Rights, i.e., either for declaration of title or possession over the properties or any other rights, which is of a civil nature, the police have no right to ask for documents from the parties in the name of adjudication and the police have no power to decide the civil rights of the parties and it is only the jurisdictional Civil Court, who is the Competent Adjudicating Authority to decide the same and not the police. It is the duty of the Department of Home Affairs to ensure that the police officers shall not interfere with the civil disputes and the Department of Home Affairs shall circulate the instruction/circular in this regard.”

ಈ ಹಿನ್ನೆಲೆಯಲ್ಲಿ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ನಿರ್ದೇಶನದನ್ವಯ ಸಿವಿಲ್ ಸ್ವರೂಪದ ವಿವಾದಗಳನ್ನು ನಿರ್ವಹಿಸುವ ಕುರಿತಂತೆ ಮಾರ್ಗದರ್ಶಿ ಸೂಚಿಗಳನ್ನು ಈ ಸುತ್ತೋಲೆ ಅಡಿಯಲ್ಲಿ ನೀಡಲಾಗಿದ್ದು, ಕಾರಣ ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳು ಈ ಸುತ್ತೋಲೆಯನ್ವಯ ಹಾಗೂ ಮಾರ್ಗಸೂಚಿ ಅನುಸಾರ ಸಿವಿಲ್ ಸ್ವರೂಪದ ವಿವಾದಗಳನ್ನು ನಿರ್ವಹಿಸುವುದು.

ಎ. ಮೊದಲು ಪೊಲೀಸ್ ಅಧಿಕಾರಿಗಳು ಸಿವಿಲ್ ಸ್ವರೂಪದ ವ್ಯಾಜ್ಯ ಅಥವಾ ಮೊಕದ್ದಮೆಗಳು ಎಂತಹ ವಿಷಯಗಳಿಗೆ ಸಂಬಂಧಪಡುತ್ತವೆ? ಎಂಬುದರ ಬಗ್ಗೆ ಕಂಡುಕೊಳ್ಳುವುದು ಅಗತ್ಯ ಈಗಾಗಲೇ ಸರ್ವೋಚ್ಛ ನ್ಯಾಯಾಲಯವು ಮತ್ತು ಉಚ್ಚ ನ್ಯಾಯಾಲಯಗಳು ಅಭಿಪ್ರಾಯ ಮತ್ತು ತೀರ್ಪುಗಳನ್ನು ನೀಡಿದಂತೆ ಯಾವ ವ್ಯಾಜ್ಯದಲ್ಲಿ ಅಪರಾಧಿಕತ್ವ ಅಥವಾ ಅಪರಾಧವೆಸಗಿದ ಮನೋಭಾವ ಮತ್ತು ಕೃತ್ಯಗಳು ಕಂಡುಬರದೆ ಹೋದಲ್ಲಿ ಅಂತಹ ಸ್ವರೂಪದ ವ್ಯಾಜ್ಯಗಳನ್ನು ಸಿವಿಲ್ ಸ್ವರೂಪದ ವ್ಯಾಜ್ಯಗಳೆಂದು ಪರಿಗಣಿಸಬಹುದಾಗಿರುತ್ತದೆ. ಉದಾಹರಣೆಗೆ, ಯಾವುದೇ ಅಪರಾಧಿಕತ್ವ ಇಲ್ಲದ-
i. ಕರಾರು ಅಥವಾ ಒಪ್ಪಂದಗಳ ಉಲ್ಲಂಘನೆ,
ii. ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ವ್ಯಾಜ್ಯಗಳು,
iii. ಸ್ಥಿರಾಸ್ತಿಯ ಮೇಲಿನ ಮಾಲೀಕತ್ವ ಅಥವಾ ಹಿತಾಸಕ್ತಿಯ ಘೋಷಣೆಗೆ ಸಂಬಂಧಿಸಿದ ವ್ಯಾಜ್ಯಗಳು, iv. ಸ್ಥಿರಾಸ್ತಿಯ ಮೇಲಿನ ಸ್ವಾಧೀನಕ್ಕೆ ಸಂಬಂಧಿಸಿದ ವ್ಯಾಜ್ಯಗಳು, ಪೂಜಾ ಹಕ್ಕುಗಳು ಮತ್ತು ಪೂಜಾ ಸ್ಥಳಗಳ ನಿರ್ವಹಣೆಗೆ ಸಂಬಂಧಿಸಿದ ವ್ಯಾಜ್ಯಗಳು,
vi, ವಾಣಿಜ್ಯ ಚಟುವಟಿಕೆಗಳಿಗೆ ಸಂಬಂಧಿಸಿದ ವಿವಾದಗಳು,
vii, ಮೇಲ್ನೋಟಕ್ಕೆ ಕ್ರಿಮಿನಲ್ ಹೊಣೆಗಾರಿಕೆ ಸ್ಪಷ್ಟವಾಗಿಲ್ಲದ, ಆದರೆ ಸಿವಿಲ್ ಸ್ವರೂಪದ ವ್ಯಾಜ್ಯಗಳು ಮೇಲ್ನೋಟಕ್ಕೆ ಕಂಡುಬರುವಂತಹ ಪ್ರಕರಣಗಳು.
20.(1) ದೂರುದಾರರು ಸಿವಿಲ್ ವ್ಯಾಜ್ಯವಿರುವ ಮಾಹಿತಿಯುಳ್ಳ ದೂರನ್ನು ಠಾಣಾಧಿಕಾರಿಗೆ ಸಲ್ಲಿಸಿದಾಗ, ಅಂತಹ ಸಂದರ್ಭದಲ್ಲಿ ಠಾಣಾಧಿಕಾರಿಯು ಆ ದೂರು ಅಥವಾ ಮಾಹಿತಿಯನ್ನು ಪರಿಶೀಲಿಸಿದಾಗ, ಮೇಲ್ನೋಟಕ್ಕೆ ಸಿವಿಲ್ ವ್ಯಾಜ್ಯವೆಂದು ಕಂಡುಬಂದಾಗ, ಈ ವಿಷಯವನ್ನು ಠಾಣಾ ದಿನಚರಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು. ಹಾಜರಿರುವ ದೂರುದಾರ ಅಥವಾ ಆತನ ಪ್ರತಿನಿಧಿಗೆ ದೂರಿನಲ್ಲಿ ಸಿವಿಲ್ ಸ್ವರೂಪದ ವ್ಯಾಜ್ಯ ಕಂಡುಬಂದಿರುವುದರಿಂದ ಪರಿಹಾರಕ್ಕಾಗಿ ಸಕ್ಷಮ ಸಿವಿಲ್ ನ್ಯಾಯಾಲಯಕ್ಕೆ ದಾವೆ ದಾಖಲಿಸುವುದು ಸೂಕ್ತವೆಂದು ತಿಳಿಸುವ ಹಿಂಬರಹವನ್ನು ನೀಡುವುದು.

(2) ಆದರೆ, ಸ್ವೀಕರಿಸಿದ ಮಾಹಿತಿ ಅಥವಾ ದೂರಿನಲ್ಲಿ ಅಪರಾಧಿತ್ವದ ಅಂಶಗಳು ಕಂಡುಬಂದು, ಆದರೆ ಸಂಜ್ಞೆ ಅಪರಾಧಿಕ ಅಂಶಗಳು ಮೇಲ್ನೋಟಕ್ಕೆ ಕಂಡುಬರದೇ ಇದ್ದಾಗ, ಠಾಣಾಧಿಕಾರಿಯು ಸಂಜ್ಞೆ ಅಪರಾಧಿಕ ಅಂಶಗಳು ಕಂಡುಕೊಳ್ಳುವ ಕುರಿತಂತೆ ಪ್ರಾಥಮಿಕ ವಿಚಾರಣೆಯನ್ನು ಮಾನ್ಯ ಸರ್ವೋಚ್ಛ ನ್ಯಾಯಾಲಯವು ಲಲಿತಾ ಕುಮಾರಿ ಹಾಗೂ ಇತರರು ವಿರುದ್ಧ ಉತ್ತರ ಪ್ರದೇಶ ರಾಜ್ಯ ಸರ್ಕಾರ ಪ್ರಕರಣದಲ್ಲಿ ನೀಡಿದ ನಿರ್ದೇಶನದಂತೆ ಪ್ರಾಥಮಿಕ ವಿಚಾರಣೆಯನ್ನು ಕೈಗೊಳ್ಳಬಹುದು.

ಒಂದು ವೇಳೆ ಸ್ವೀಕರಿಸಿದ ದೂರಿನಲ್ಲಿ ಆಪಾದಿತ ಅಪರಾಧಿಕ ಕೃತ್ಯವು ಮೂರು ವರ್ಷಗಳಿಗಿಂತ ಮೇಲ್ಪಟ್ಟು, ಆದರೆ ಏಳು ವರ್ಷಗಳಿಗಿಂತ ಕಡಿಮೆ ಅವಧಿಗೆ ಶಿಕ್ಷೆಗೊಳಪಡುವ ಅಪರಾಧವಿರುವುದು ಕಂಡುಬಂದಿದ್ದು, ಆದರೆ ಮೇಲ್ನೋಟಕ್ಕೆ ತನಿಖೆಗೆ ಒಳಪಡಬಹುದಾದ ಪ್ರಕರಣವಲ್ಲವೆಂದು ಕಂಡುಬಂದಾಗ ಠಾಣಾಧಿಕಾರಿಯು ಭಾರತೀಯ ನಾಗರೀಕ ಸುರಕ್ಷಾ ಸಂಹಿತೆಯ ಕಲಂ 173(3) ಅಡಿಯಲ್ಲಿ ಪೊಲೀಸ್ ಉಪ ವಿಭಾಗಾಧಿಕಾರಿಗಳ ಹುದ್ದೆಗೆ ಕಡಿಮೆ ಇಲ್ಲದ ಹಿರಿಯ ಪೊಲೀಸ್ ಅಧಿಕಾರಿಯಿಂದ ಪ್ರಾಥಮಿಕ ವಿಚಾರಣೆ ಕೈಗೊಳ್ಳುವ ಕುರಿತಂತೆ ಲಿಖಿತ ಅನುಮತಿ ಪಡೆದುಕೊಂಡು, ವಿಚಾರಣೆಯನ್ನು ಕೈಗೊಳ್ಳುವುದು ಸೂಕ್ತ.(ಮಾನ್ಯ ಸರ್ವೋಚ್ಛ ನ್ಯಾಯಾಲಯವು ಇಮಾನ್ ಪ್ರತಾಪ್‌ಘಡಿ ವಿರುದ್ಧ ಗುಜರಾತ್ ರಾಜ್ಯ ಸರ್ಕಾರ ಪ್ರಕರಣದಲ್ಲಿ ನೀಡಿದ ನಿರ್ದೇಶನಗಳನ್ನು ಗಮನಿಸುವುದು.) ಈ ಕುರಿತಂತೆ ಹಾಜರಿರುವ ದೂರುದಾರ ಅಥವಾ ಪ್ರತಿನಿಧಿಗೆ ಪ್ರಾಥಮಿಕ ವಿಚಾರಣೆ ಕೈಗೊಳ್ಳುವ ಬಗ್ಗೆ ಮತ್ತು ಹೊರಬರುವ ಫಲಿತಾಂಶದ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂಬ ಹಿಂಬರಹ ನೀಡುವುದು ಸೂಕ್ತ.

(3) ಠಾಣಾಧಿಕಾರಿಯು ಪ್ರಾಥಮಿಕ ವಿಚಾರಣೆಯನ್ನು 14 ದಿನಗಳೊಳಗಾಗಿ ಪೂರ್ಣಗೊಳಿಸಿ ಆ ಮೂಲಕ ದೂರಿನಲ್ಲಿ ಸಂಜ್ಞೆ ಅಪರಾಧಿಕ ಅಂಶಗಳು ಕಂಡುಬಂದ ಅಥವಾ ಕಂಡುಬರದೇ ಇರುವ ಬಗ್ಗೆ ಅಥವಾ ಪ್ರಕರಣವು ತನಿಖೆಗೆ ಅರ್ಹ ಅಥವಾ ಅರ್ಹವಲ್ಲ ಎಂಬ ಬಗ್ಗೆ ಕಂಡುಕೊಂಡು ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದು.

ಒಂದು ವೇಳೆ ಠಾಣಾಧಿಕಾರಿಯು ಪ್ರಾಥಮಿಕ ವಿಚಾರಣೆಯಲ್ಲಿ ಕಂಡುಬಂದ ಫಲಿತಾಂಶದ ಅನುಸಾರ ದೂರಿನಲ್ಲಿ ಸಂಜ್ಞೆ ಅಪರಾಧಿಕ ಅಂಶಗಳು ಅಥವಾ ತನಿಖೆಗೆ ಯೋಗ್ಯವಾದ ಪ್ರಕರಣವೆಂದು ಕಂಡುಬಂದಾಗ, ಠಾಣಾ ದಿನಚರಿಯಲ್ಲಿ ನಮೂದಿಸಿ, ದೂರುದಾರನನ್ನು ಠಾಣೆಗೆ ಹಾಜರಿಸಿಕೊಂಡು ಆತನ ದೂರಿನ ಮೇಲೆ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಳ್ಳುವುದು. ಪ್ರಥಮ ವರ್ತಮಾನ ವರದಿಯನ್ನು, ದೂರಿನ ಮೇಲೆ ಪ್ರಾಥಮಿಕ ವಿಚಾರಣೆ ನಂತರ ದಾಖಲು ಮಾಡಿಕೊಳ್ಳಲಾಗಿದೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಿ ಪ್ರಕರಣ ದಾಖಲಿಸಿಕೊಳ್ಳಲು ಉಂಟಾದ ವಿಳಂಬದ ಬಗ್ಗೆ ಉಲ್ಲೇಖಿಸುವುದು.

ಒಂದು ವೇಳೆ ಪ್ರಾಥಮಿಕ ವಿಚಾರಣೆಯನ್ನು ಯಾವುದೇ ಸಂಜ್ಞೆ ಅಪರಾಧಿಕ ಅಂಶಗಳು ಅಥವಾ ತನಿಖೆಗೆ ಯೋಗ್ಯವಾದ ಪ್ರಕರಣವೆಂದು ಕಂಡುಬರದೇ ಹೋದಾಗ, ಠಾಣಾಧಿಕಾರಿಯು ಠಾಣಾ ದಿನಚರಿಯಲ್ಲಿ ನಮೂದಿಸಿ ಮೇಲಾಧಿಕಾರಿಗಳಿಗೆ ತಿಳಿಸಿ ದೂರುದಾರ ಅಥವಾ ಆತನ ಪ್ರತಿನಿಧಿಗೆ ದೂರನ್ನು ಪ್ರಕರಣವನ್ನಾಗಿ ದಾಖಲಿಸಿಕೊಳ್ಳಲು ಅಥವಾ ತನಿಖೆಗೆ ಯೋಗ್ಯವೆಂದು ಕಂಡುಬರದೇ ಇರುವುದರಿಂದ ಸೂಕ್ತ ಸಿವಿಲ್ ನ್ಯಾಯಾಲಯಕ್ಕೆ ದಾವೆ ದಾಖಲಿಸಿ ಪರಿಹಾರ ಕಂಡುಕೊಳ್ಳುವುದು ಎಂದು ಹಿಂಬರಹ ನೀಡುವುದು ಸೂಕ್ತ.

4) ಠಾಣಾಧಿಕಾರಿಯು ದೂರುದಾರರಿಂದ ಸ್ವೀಕರಿಸಿದ ದೂರಿನಲ್ಲಿ ಸ್ಪಷ್ಟವಾಗಿ ಮೇಲ್ನೋಟಕ್ಕೆ ಸಂಜ್ಞೆ ಅಪರಾಧಿಕ ಅಂಶಗಳು, ಆರೋಪಿಗಳ ವಿವರ ಹಾಗೂ ಅಪರಾಧಿಕ ಚಟುವಟಿಕೆಯಲ್ಲಿ ಅವರ ಪಾತ್ರ ಒಳಗೊಂಡಿರುವ ಅಂಶಗಳು ಮತ್ತು ಸಂಗತಿಗಳನ್ನು ಕಂಡುಕೊಂಡಾಗ, ಆ ದೂರಿನನುಸಾರ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆಯ ಕಲಂ 173 ರಡಿಯಲ್ಲಿ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಳ್ಳುವುದು ಕಡ್ಡಾಯ.

ಸಿ. ಸಿಎಲ್ ಸ್ವರೂಪದ ವಿವಾದಗಳು ಮತ್ತು ಪ್ರಕರಣಗಳಲ್ಲಿ “ಪೊಲೀಸ್ ರಕ್ಷಣೆ ನೀಡುವ ಬಗ್ಗೆ:-
ಎ. ಪೊಲೀಸ್ ಅಧಿಕಾರಿಗಳು ಹಾಗೂ ಠಾಣಾಧಿಕಾರಿಗಳು ಸಿವಿಲ್ ಸ್ವರೂಪದ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಸಿವಿಲ್ ನ್ಯಾಯಾಲಯಗಳ, ಸಕ್ಷಮ ಪ್ರಾಧಿಕಾರಗಳ ಅಥವಾ ರಾಜ್ಯ ಸರ್ಕಾರದ ಲಿಖಿತ ಆದೇಶ ಅಥವಾ ನಿರ್ದೇಶನವಿಲ್ಲದೆ ಪೊಲೀಸ್ ರಕ್ಷಣೆಯನ್ನು ನೀಡುವಂತಹ ಕ್ರಮ ಕೈಗೊಳ್ಳಲು ಕಾನೂನಿನಡಿಯಲ್ಲಿ ಅವಕಾಶ ಹಾಗೂ ಅನುಮತಿ ಇರುವುದಿಲ್ಲ. ಬಿ. ಯಾವುದೇ ವ್ಯಕ್ತಿಯು ತನ್ನ ಆಸ್ತಿ ಅಥವಾ ಸಿವಿಲ್ ಹಕ್ಕುಗಳಿಗೆ ಸಂಬಂಧಿಸಿದಂತೆ ಪೊಲೀಸ್ ರಕ್ಷಣೆ ಕೋರಿ ಅರ್ಜಿ ಅಥವಾ ದೂರನ್ನು ಸಲ್ಲಿಸಿದರೆ, ಆಗ ಪೊಲೀಸ್ ಅಧಿಕಾರಿ ಅಥವಾ ಠಾಣಾಧಿಕಾರಿಯು ಸದರಿ ವ್ಯಕ್ತಿಯು ಹಾಜರಿಸುವ ಹಕ್ಕುಗಳ ದಾಖಲೆ, ಆಸ್ತಿ ನೋಂದಣಿ ದಾಖಲೆಗಳು, ಅಸೆಸೆಂಟ್ ರಿಜಿಸ್ಟರ್‌ ಪ್ರಮಾಣಪತ್ರಗಳು ಇತ್ಯಾದಿಗಳನ್ನು ಆಧರಿಸಿ, ತಾನು ಸದರಿ ಸ್ಥಿರಾಸ್ತಿಯ ಮಾಲೀಕ ಅಥವಾ ಅನುಭವದಾರ ಇರುವ ಬಗ್ಗೆ ಹೇಳಿ, ತನ್ನ ಹಕ್ಕುಗಳ ಮತ್ತು ಸ್ವಾಧೀನತೆಗೆ ಪೊಲೀಸ್ ರಕ್ಷಣೆ ಕೋರಿದಾಗ, ಠಾಣಾಧಿಕಾರಿ/ಪೊಲೀಸ್ ಅಧಿಕಾರಿಯು ಆ ದಾಖಲಾತಿಗಳನ್ನು ಪರಿಶೀಲಿಸುವ ಮತ್ತು ನಿರ್ಣಯಿಸುವ ಅಧಿಕಾರವನ್ನು ಹೊಂದಿರುವುದಿಲ್ಲ. ಆದ್ದರಿಂದ ಅಂತಹ ವ್ಯಕ್ತಿಗೆ ತನ್ನ ಸಿವಿಲ್ ಹಕ್ಕುಗಳ ಮತ್ತು ಸ್ಥಿರಾಸ್ತಿಯ ರಕ್ಷಣೆಗಾಗಿ ಸಕ್ಷಮ ಸಿವಿಲ್‌ ನ್ಯಾಯಾಲಯದಿಂದ ಅಥವಾ ಪ್ರಾಧಿಕಾರದಿಂದ ಪೊಲೀಸ್ ರಕ್ಷಣೆ ನೀಡುವಂತೆ ಆದೇಶ ಅಥವಾ ನಿರ್ದೇಶನವಿದ್ದರೆ ಮಾತ್ರ ಆ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿ ಹಿಂಬರಹ ನೀಡುವುದು.

ಸಿ. ಸಿವಿಲ್ ವ್ಯಾಜ್ಯಗಳಿಗೆ ಸಂಬಂಧಿಸಿರುವ ಸ್ಥಿರಾಸ್ತಿಗಳ ಮಾಲೀಕತ್ವ ಅಥವಾ ಸ್ವಾಧೀನ ಅಥವಾ ಗಡಿಗಳನ್ನು ನಿರ್ಧರಿಸುವ ಚಟುವಟಿಕೆಗಳಲ್ಲಿ ಪೊಲೀಸ್‌ ಅಧಿಕಾರಿಗಳು ತೊಡಗಿಸಿಕೊಳ್ಳಬಾರದು. ಅಂತಹ ಸಂದರ್ಭಗಳಲ್ಲಿ ಸಂಬಂಧಿತ ವ್ಯಕ್ತಿಗಳಿಗೆ ಪರಿಹಾರವನ್ನು ಪಡೆಯಲು ಸಿವಿಲ್ ನ್ಯಾಯಾಲಯ ಅಥವಾ ಸೂಕ್ತ ಸಕ್ಷಮ ಪ್ರಾಧಿಕಾರವನ್ನು ಸಂಪರ್ಕಿಸುವಂತೆ ಸೂಚಿಸಿ ಹಿಂಬರಹ
ನೀಡಬೇಕು.

ಡಿ. ಸಿವಿಲ್ ವ್ಯಾಜ್ಯಗಳಿಗೆ ಸಂಬಂಧಿಸಿರುವ ವ್ಯಕ್ತಿಯು ವಿವಾದಿತ ಆಸ್ತಿಯ ಮೇಲಿನ ತನ್ನ ಸ್ವಾಧೀನಕ್ಕೆ ರಕ್ಷಣೆ ನೀಡುವಂತೆ ಸಿವಿಲ್ ನ್ಯಾಯಾಲಯ ಅಥವಾ ಸಕ್ಷಮ ಪ್ರಾಧಿಕಾರದ ಆದೇಶ ಅಥವಾ ನಿರ್ದೇಶನಗಳೊಂದಿಗೆ ಪೊಲೀಸ್ ಅಧಿಕಾರಿಯನ್ನು ಸಂಪರ್ಕಿಸಿದಾಗ, ಪೊಲೀಸ್ ಅಧಿಕಾರಿ ತನ್ನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು, ನ್ಯಾಯಾಲಯದ ಅಥವಾ ಪ್ರಾಧಿಕಾರದ ನಿರ್ದೇಶನದನುಸಾರ ಪೊಲೀಸ್ ರಕ್ಷಣೆ ಒದಗಿಸುವ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮುಂದುವರೆದು ಸದರಿ ಪೊಲೀಸ್ ಅಧಿಕಾರಿಯು ರಕ್ಷಣೆ ನೀಡುವ ಅವಧಿಯ ಕುರಿತಂತೆ ಆದೇಶ ಅಥವಾ ನಿರ್ದೇಶನ ಹೊರಡಿಸಿದ ನ್ಯಾಯಾಲಯ ಅಥವಾ ಪ್ರಾಧಿಕಾರದ ಸೂಚನೆಯನ್ನು ಅಥವಾ ನಿರ್ದೇಶನಗಳನ್ನು ಪಡೆದುಕೊಳ್ಳುವುದು ಸೂಕ್ತ.

ಇ. ಒಂದು ವೇಳೆ ನ್ಯಾಯಾಲಯ ಅಥವಾ ಪ್ರಾಧಿಕಾರದ ಆದೇಶದನುಸಾರ ಪೊಲೀಸ್‌ ರಕ್ಷಣೆ ಪಡೆದ ವ್ಯಕ್ತಿಯು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ ಆದೇಶ ಪಡೆದಿದ್ದು ಕಂಡುಬಂದು, ಇತರರ ಹಕ್ಕು ಹಾಗೂ ಸ್ವಾಧೀನತೆ ಕುರಿತಂತೆ ಆದೇಶ ಮತ್ತು ನಿರ್ದೇಶನಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂದು ಕಂಡುಬಂದಾಗ, ಸದರಿ ಪೊಲೀಸ್‌ ಅಧಿಕಾರಿಯು ವಿವರವಾದ ಒಂದು ವರದಿಯನ್ನು ತಯಾರಿಸಿ ಆದೇಶ ಅಥವಾ ನಿರ್ದೇಶನ ನೀಡಿದ ನ್ಯಾಯಾಲಯ ಪ್ರಾಧಿಕಾರದ ಗಮನಕ್ಕೆ ತಂದು ಸೂಕ್ತ ನಿರ್ದೇಶನ ಮತ್ತು ಸೂಚನೆಗಾಗಿ ಕೋರಿಕೊಳ್ಳುವುದು ಸಮಂಜಸವಾಗಿರುತ್ತದೆ.

a. ಪೊಲೀಸ್ ಅಧಿಕಾರಿಯು ಸಿವಿಲ್ ಸ್ವರೂಪದ ವ್ಯಾಜ್ಯ/ವಿವಾದಗಳಲ್ಲಿ ಯಾವಾಗ ಮಧ್ಯ ಪ್ರವೇಶಿಸಬಹುದು:- (1) ಮಾನ್ಯ ಸರ್ವೋಚ್ಛ ನ್ಯಾಯಾಲಯ ಹಾಗೂ ಉಚ್ಛ ನ್ಯಾಯಾಲಯಗಳ ತೀರ್ಪುಗಳನುಸಾರ ಪೊಲೀಸ್ ಅಧಿಕಾರಿಗಳು ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಸಂಧರ್ಭವಿದ್ದಲ್ಲಿ ಮಾತ್ರ ಸಿವಿಲ್‌ ಸ್ವರೂಪದ ವ್ಯಾಜ್ಯ/ವಿವಾದಗಳಲ್ಲಿ ಮಧ್ಯ ಪ್ರವೇಶಿಸಬಹುದು, ಇಲ್ಲವಾದಲ್ಲಿ ಸಿವಿಲ್ ಸ್ವರೂಪದ ವಿವಾದಗಳಲ್ಲಿ ಪೊಲೀಸರು ಹಸ್ತಕ್ಷೇಪ ಮಾಡಕೂಡದು. ಆದ್ದರಿಂದ ಸಿವಿಲ್ ಸ್ವರೂಪದ ವಿವಾದಗಳಲ್ಲಿ ಯಾವುದೇ ಮಾಹಿತಿ ಅಥವಾ ದೂರು ಸ್ವೀಕರಿಸಿದಾಗ, ಆ ಪ್ರದೇಶ ಅಥವಾ ಸುತ್ತಮುತ್ತಲಿನ ಪರಿಸ್ಥಿತಿ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಬಗ್ಗೆ ಪೊಲೀಸ್ ಅಧಿಕಾರಿ ಮಾಹಿತಿ ಅಥವಾ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಬೇಕು. ಅಂತಹ ಸಂಧರ್ಭಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಪೊಲೀಸ್‌ ಅಧಿಕಾರಿಗಳು ವಿವಾದದಲ್ಲಿರುವ ಎರಡೂ ಪಕ್ಷಗಳಿಗೆ ಎಚ್ಚರಿಕೆ ಸೂಚನೆ ನೀಡಬೇಕು, ಇಲ್ಲದಿದ್ದರೆ ಉತ್ತಮ ನಡವಳಿಕೆಗಾಗಿ ಬಾಂಡ್ ಪಡೆಯಲು ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ, 2023 ರ ಅಧ್ಯಾಯ-II ರಡಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ

(2) ಒಂದು ವೇಳೆ ಸಿವಿಲ್ ಸ್ವರೂಪದ ವ್ಯಾಜ್ಯ/ವಿವಾದಗಳಲ್ಲಿರುವ ವ್ಯಕ್ತಿಗಳು ತಮ್ಮ ತಮ್ಮಲ್ಲಿ ಹಲ್ಲೆ ಅಥವಾ ದೈಹಿಕ ಅಪರಾಧಗಳನ್ನೆಸಗುವ ಮೂಲಕ ಸಂಜ್ಞೆ ಅಪರಾಧ ಎಸಗುವ ಬಗ್ಗೆ ಕಂಡುಬಂದಾಗ, ಅಥವಾ ವಿವಾದದಲ್ಲಿರುವ ಎರಡೂ ಪಕ್ಷಗಳು ವಿವಾದಿತ ಭೂಮಿ ಅಥವಾ ಆಸ್ತಿಯಲ್ಲಿ ಅಥವಾ ಈ ಸಂಬಂಧ ಜಗಳವಾಡುತ್ತಿದ್ದರೆ, ಪೊಲೀಸ್‌ ಅಧಿಕಾರಿಗಳು ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ, 2023ರ ಕಲಂ 168 ರಿಂದ 172 ಅಡಿಯಲ್ಲಿ ಅಧಿಕಾರಗಳನ್ನು ಚಲಾಯಿಸುವ ಮೂಲಕ ಸಂಜ್ಞೆ ಅಪರಾಧವನ್ನು ತಡೆಗಟ್ಟುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು. ಅಂತಹ ಸಂದರ್ಭಗಳಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳಲು ಮತ್ತು ಯಾವುದೇ ಸಂಜ್ಞೆಯ ಅಪರಾಧವನ್ನು ತಪ್ಪಿಸಲು ಸ್ಥಳದಲ್ಲಿ ಸೇರಿರುವ ವ್ಯಕ್ತಿಗಳನ್ನು ಅಲ್ಲಿಂದ ಹೊರಹೋಗಲು ಅಥವಾ ಚದುರುವಂತೆ ನಿರ್ದೇಶನಗಳನ್ನು ನೀಡಿ ಪಾಲಿಸುವಂತೆ ಸೂಚಿಸಬೇಕು. ಸೂಚನೆ ಅಥವಾ ನಿರ್ದೇಶನ ಪಾಲಿಸದೇ ಇರುವ ವ್ಯಕ್ತಿಗಳನ್ನು ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ಕಲಂ 170 ರಡಿಯಲ್ಲಿ ಬಂಧಿಸುವ ಅಥವಾ ಕಲಂ 172(2) ರಡಿಯಲ್ಲಿ ಆ ಸ್ಥಳದಿಂದ ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಕಾನೂನಿನಲ್ಲಿ ಅವಕಾಶವಿರುತ್ತದೆ.

5(3) ಯಾವುದೇ ವ್ಯಕ್ತಿ ಅಥವಾ ಪಕ್ಷಗಾರರು ಪೊಲೀಸ್‌ ಅಧಿಕಾರಿ ನೀಡಿದ ಯಾವುದೇ ನಿರ್ದೇಶನಗಳನ್ನು ಪಾಲಿಸಲು ವಿಫಲರಾದರೆ, ವಿರೋಧಿಸಿದರೆ, ನಿರಾಕರಿಸಿದರೆ ಅಥವಾ ನಿರ್ಲಕ್ಷಿಸಿದರೆ, ಅಂತಹ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ಬಂಧಿಸಿ ಕಾರ್ಯಾಂಗ ದಂಡಾಧಿಕಾರಿ ಅಥವಾ ನ್ಯಾಯಾಂಗ ದಂಡಾಧಿಕಾರಿಗಳ ಮುಂದೆ ಬಂಧಿಸಿದ 24 ಗಂಟೆಯೊಳಗಡೆ ಹಾಜರುಪಡಿಸಬೇಕು ಅಥವಾ ಲಘು ಪ್ರಕರಣಗಳಲ್ಲಿ ಬಂಧಿತ ವ್ಯಕ್ತಿಗಳನ್ನು ಸಾಧ್ಯವಾದಷ್ಟು ಬೇಗ ಬಿಡುಗಡೆ ಮಾಡಬೇಕು.

(4) ಹಾಜರಿರುವ ಪಕ್ಷ ಅಥವಾ ವ್ಯಕ್ತಿಗಳು ಪೊಲೀಸ್ ಅಧಿಕಾರಿಯ ಸಮ್ಮುಖದಲ್ಲಿ ಯಾವುದೇ ಸಂಜ್ಞೆಯ ಅಪರಾಧವನ್ನು ಎಸಗಿದರೆ, ಆ ಪೊಲೀಸ್ ಅಧಿಕಾರಿಯು ತಕ್ಷಣವೇ ಅಂತಹ ವ್ಯಕ್ತಿಯನ್ನು ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ಕಲಂ 35(1)(ಎ) ಅಡಿಯಲ್ಲಿ ಬಂಧಿಸಿ, ಠಾಣಾಧಿಕಾರಿಯ ಮುಂದೆ ಹಾಜರಿಸಿ ಸ್ವಯಂಪ್ರೇರಿತ ದೂರನ್ನು ಸಲ್ಲಿಸುವುದು ಅಗತ್ಯ.
ಇ. ಅಪರಾಧಿಕ ದುರ್ನಡತೆ(Criminal Misconduct):- ಯಾವುದೇ ಪೊಲೀಸ್ ಅಧಿಕಾರಿಯು ತಾನು ಸ್ವೀಕರಿಸಿದ ದೂರು ಅಥವಾ ಮಾಹಿತಿ ಸಂಪೂರ್ಣವಾಗಿ ಸಿವಿಲ್ ಸ್ವರೂಪದ ವ್ಯಾಜ್ಯವೆಂದು ತಿಳಿದೂ ಸಹ ಸದರಿ ವ್ಯಾಜ್ಯದ ಒಂದು ಪಕ್ಷಕ್ಕೆ ಅಥವಾ ವ್ಯಕ್ತಿಗೆ ಸಹಾಯ ಮಾಡಬೇಕೆನ್ನುವ ದುರುದ್ದೇಶದಿಂದ, ಕಾನೂನು ಬಾಹಿರವಾಗಿ ಸ್ವತ್ತುಗಳನ್ನು ಪಡೆಯಲು, ಸ್ವಾಧೀನಪಡಿಸಿಕೊಳ್ಳಲು ನೆರವು ಅಥವಾ ಸಹಾಯ ಮಾಡಿದರೆ, ಅಂತಹ ನೆರವು ಅಥವಾ ಸಹಾಯವನ್ನು ಅಪರಾಧಿಕ ದುರ್ನಡತೆ ಎಂದು ಪರಿಗಣಿಸಲಾಗುವುದು. ಇದರ ಪರಿಣಾಮವಾಗಿ ಅಂತಹ ಪೊಲೀಸ್‌ ಅಧಿಕಾರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಹಾಗೂ ಇಲಾಖಾ ಶಿಸ್ತು ಕ್ರಮಗಳನ್ನು ಕೈಗೊಳ್ಳಲಾಗುವುದು. ಆದ್ದರಿಂದ, ರಾಜ್ಯದ ಎಲ್ಲಾ ಪೊಲೀಸ್‌ ಅಧಿಕಾರಿಗಳು ಮೇಲೆ ಸೂಚಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಮತ್ತು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.

Police cannot 'interfere' in state's 'civil disputes': Government issues guidelines Police cannot 'interfere' in state's 'civil disputes': Important circular from government
Share. Facebook Twitter LinkedIn WhatsApp Email

Related Posts

ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲೆಸೆತ, ಲಾಠಿ ಚಾರ್ಜ್ ಕೇಸ್ : ಬಿವೈ ವಿಜಯೇಂದ್ರಗೆ ವರದಿ ಸಲ್ಲಿಸಿದ ಸತ್ಯಶೋಧನಾ ಸಮಿತಿ

27/09/2025 4:29 PM1 Min Read

ಆಳಿದ ಮೇಲೂ ಉಳಿಯುವುದು ಸಾಧನೆ ಮಾತ್ರ: ಸಚಿವ ಮಧು ಎಸ್. ಬಂಗಾರಪ್ಪ

27/09/2025 4:27 PM2 Mins Read

BREAKING : ಬಿಗ್ ಬಾಸ್ ಗೆ ಕರೆದಿಲ್ಲ ಅಂದ್ರೆ ಬಾಂಬ್ ಇಡುತ್ತೇನೆ : ಇನ್ಸ್ಟಾಗ್ರಾಮ್ ನಲ್ಲಿ ಯುವಕನಿಂದ ಬೆದರಿಕೆ!

27/09/2025 4:17 PM1 Min Read
Recent News

ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲೆಸೆತ, ಲಾಠಿ ಚಾರ್ಜ್ ಕೇಸ್ : ಬಿವೈ ವಿಜಯೇಂದ್ರಗೆ ವರದಿ ಸಲ್ಲಿಸಿದ ಸತ್ಯಶೋಧನಾ ಸಮಿತಿ

27/09/2025 4:29 PM

Watch Video : ತಂದೆ ಸಾವಿನ ನೋವಲ್ಲಿರುವ ‘ಶ್ರೀಲಂಕಾ ಆಲ್ರೌಂಡರ್’ನ ತಬ್ಬಿ ಅಣ್ಣನಂತೆ ಸಂತೈಸಿದ ಕ್ಯಾಪ್ಟನ್ ಸೂರ್ಯ

27/09/2025 4:28 PM

ಆಳಿದ ಮೇಲೂ ಉಳಿಯುವುದು ಸಾಧನೆ ಮಾತ್ರ: ಸಚಿವ ಮಧು ಎಸ್. ಬಂಗಾರಪ್ಪ

27/09/2025 4:27 PM

ರಾಜ್ಯದ `ಸಿವಿಲ್ ವ್ಯಾಜ್ಯಗಳಲ್ಲಿ’ ಪೊಲೀಸರು `ಹಸ್ತಕ್ಷೇಪ’ ಮಾಡುವಂತಿಲ್ಲ : ಸರ್ಕಾರದಿಂದ ಮಹತ್ವದ ಸುತ್ತೋಲೆ

27/09/2025 4:18 PM
State News
KARNATAKA

ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲೆಸೆತ, ಲಾಠಿ ಚಾರ್ಜ್ ಕೇಸ್ : ಬಿವೈ ವಿಜಯೇಂದ್ರಗೆ ವರದಿ ಸಲ್ಲಿಸಿದ ಸತ್ಯಶೋಧನಾ ಸಮಿತಿ

By kannadanewsnow0527/09/2025 4:29 PM KARNATAKA 1 Min Read

ಬೆಂಗಳೂರು : ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಿಡಿಗೇಡಿಗಳು ಗಣೇಶ ಮೆರವಣಿಗೆಯ ಮೇಲೆ ಕಲ್ಲೆಸೆತ ನಡೆಸಿದ ಪ್ರಕರಣಕ್ಕೆ…

ಆಳಿದ ಮೇಲೂ ಉಳಿಯುವುದು ಸಾಧನೆ ಮಾತ್ರ: ಸಚಿವ ಮಧು ಎಸ್. ಬಂಗಾರಪ್ಪ

27/09/2025 4:27 PM

ರಾಜ್ಯದ `ಸಿವಿಲ್ ವ್ಯಾಜ್ಯಗಳಲ್ಲಿ’ ಪೊಲೀಸರು `ಹಸ್ತಕ್ಷೇಪ’ ಮಾಡುವಂತಿಲ್ಲ : ಸರ್ಕಾರದಿಂದ ಮಹತ್ವದ ಸುತ್ತೋಲೆ

27/09/2025 4:18 PM

BREAKING : ಬಿಗ್ ಬಾಸ್ ಗೆ ಕರೆದಿಲ್ಲ ಅಂದ್ರೆ ಬಾಂಬ್ ಇಡುತ್ತೇನೆ : ಇನ್ಸ್ಟಾಗ್ರಾಮ್ ನಲ್ಲಿ ಯುವಕನಿಂದ ಬೆದರಿಕೆ!

27/09/2025 4:17 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.