ಮುಂಬೈ : ಆಸ್ಟ್ರೇಲಿಯಾದ ಮಾಜಿ ಮಹಿಳಾ ಕ್ರಿಕೆಟರ್ ಮತ್ತು ಎರಡು ಬಾರಿಯ ವಿಶ್ವಕಪ್ ವಿಜೇತೆ ಲಿಸಾ ಕೈಟ್ಲಿ ಅವರನ್ನು ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ಗುರುವಾರ ನೇಮಕ ಮಾಡಲಾಗಿದೆ.
1997 ಮತ್ತು 2005ರಲ್ಲಿ ಮಹಿಳೆಯರ ಏಕದಿನ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದ ಕೈಟ್ಲಿ, ಮಹಿಳಾ ಕ್ರಿಕೆಟ್‌ನಲ್ಲಿ ಅತ್ಯಂತ ಗೌರವಾನ್ವಿತ ತರಬೇತುದಾರರಲ್ಲಿ ಒಬ್ಬರಾಗಿದ್ದಾರೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಉನ್ನತ ಜಾಗತಿಕ ಟಿ20 ಲೀಗ್‌ಗಳಲ್ಲಿನ ಶ್ರೇಷ್ಠ ಆಟದ ವೃತ್ತಿಜೀವನ ಮತ್ತು ತರಬೇತಿ ಅನುಭವದೊಂದಿಗೆ ಅವರು, ಮುಂಬೈ ಇಂಡಿಯನ್ಸ್ ತಂಡಕ್ಕೆ ಅಪ್ರತಿಮ ಅನುಭವ ಮತ್ತು ದೃಷ್ಟಿಕೋನವನ್ನು ತರಲಿದ್ದಾರೆ. ಮುಂಬೈ ಇಂಡಿಯನ್ಸ್ ಮಹಿಳಾ ತಂಡವು ಈಗಾಗಲೆ ಡಬ್ಲ್ಯುಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡವಾಗಿದ್ದು, ಕೇವಲ ಮೂರು ಆವೃತ್ತಿಗಳಲ್ಲಿ ಎರಡು ಚಾಂಪಿಯನ್‌ಷಿಪ್‌ಗಳನ್ನು ಗೆದ್ದುಕೊಂಡಿದೆ. ಮುಂಬೈ ಇಂಡಿಯನ್ಸ್ ತಂಡ 2023 ಮತ್ತು 2025ರಲ್ಲಿ ಡಬ್ಲ್ಯುಪಿಎಲ್ ಚಾಂಪಿಯನ್ ಆಗಿದೆ.
‘ಲಿಸಾ ಕೈಟ್ಲಿ ಅವರನ್ನು ಮುಂಬೈ ಇಂಡಿಯನ್ಸ್ ಕುಟುಂಬಕ್ಕೆ ಸ್ವಾಗತಿಸಲು ಸಂತೋಷವಾಗುತ್ತಿದೆ. ಲಿಸಾ ತನ್ನ ಉತ್ಸಾಹದಿಂದ ಹೊಸ ಪೀಳಿಗೆಯ ಕ್ರಿಕೆಟ್ ಅಭಿಮಾನಿಗಳಿಗೆ ಸ್ಫೂರ್ತಿ ನೀಡಿದ್ದಾರೆ. ಅವರು ಕೋಚ್ ಆಗಿ ತಮ್ಮ ವೃತ್ತಿಜೀವನವನ್ನು ಮುಂದುವರಿಸಲು ನಾವು ಅವರನ್ನು ಪ್ರೋತ್ಸಾಹಿಸುತ್ತೇವೆ. ಅವರ ಆಗಮನ ಮುಂಬೈ ಇಂಡಿಯನ್ಸ್ಗೆ ಒಂದು ರೋಮಾಂಚಕಾರಿ ಹೊಸ ಅಧ್ಯಾಯವನ್ನು ಸೂಚಿಸುತ್ತದೆ. ನಾವು ಇನ್ನೂ ಎತ್ತರಕ್ಕೆ ಏರಲು ಎದುರು ನೋಡುತ್ತಿದ್ದೇವೆ’ ಎಂದು ಶ್ರೀಮತಿ ನೀತಾ ಎಂ. ಅಂಬಾನಿ ಅವರು ಸಂತೋಷವನ್ನು ವ್ಯಕ್ತಪಡಿಸಿದರು.
‘ಡಬ್ಲ್ಯುಪಿಎಲ್ನಲ್ಲಿ ಹಲವು ಮಾನದಂಡಗಳನ್ನು ಸ್ಥಾಪಿಸಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಸೇರುವುದು ಗೌರವದ ಸಂಗತಿ. ಮೈದಾನದ ಒಳಗೆ ಮತ್ತು ಹೊರಗೆ ಹೊಸ ಪೀಳಿಗೆಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸಲು, ತಂಡದೊಂದಿಗೆ ಕೆಲಸ ಮಾಡುವುದನ್ನು ನಾನು ಎದುರು ನೋಡುತ್ತಿದ್ದೇನೆ’ ಎಂದು ಲಿಸಾ ಕೈಟ್ಲಿ ಹೇಳಿದರು.
54 ವರ್ಷದ ಲಿಸಾ ಕೈಟ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳೆರಡಕ್ಕೂ ತರಬೇತಿ ನೀಡಿದ ವಿಶೇಷ ಹೆಗ್ಗಳಿಕೆ ಹೊಂದಿದ್ದಾರೆ. ಇಂಗ್ಲೆಂಡ್ ತಂಡಕ್ಕೆ ಪೂರ್ಣ ಸಮಯದ ಮುಖ್ಯ ತರಬೇತುದಾರರಾದ ಮೊದಲ ಮಹಿಳೆ ಅವರಾಗಿದ್ದಾರೆ. ಆಸ್ಟ್ರೇಲಿಯಾದ ಡಬ್ಲ್ಯುಬಿಬಿಎಲ್, ಇಂಗ್ಲೆಂಡ್ನ ದಿ ಹಂಡ್ರೆಡ್ ಮತ್ತು ಡಬ್ಲ್ಯುಪಿಎಲ್ನಲ್ಲಿ ಫ್ರಾಂಚೈಸಿ ತರಬೇತಿ ಅನುಭವವನ್ನು ಹೊಂದಿದ್ದಾರೆ. ಇತ್ತೀಚೆಗೆ ಕಳೆದ ತಿಂಗಳು ದಿ ಹಂಡ್ರೆಡ್‌ನಲ್ಲಿ ನಾರ್ಥರ್ನ್ ಸೂಪರ್ಚಾರ್ಜರ್ಸ್ ಮಹಿಳಾ ತಂಡದ ಪ್ರಶಸ್ತಿ ಗೆಲುವಿಗೆ ಮಾರ್ಗದರ್ಶನ ನೀಡಿದ್ದಾರೆ. ಕೈಟ್ಲಿ ಒಬ್ಬ ಸ್ಟೈಲಿಶ್ ಓಪನಿಂಗ್ ಬ್ಯಾಟರ್ ಎಂದು ಹೆಸರುವಾಸಿಯಾಗಿದ್ದಾರೆ. ಕೈಟ್ಲಿ 9 ಟೆಸ್ಟ್‌ಗಳನ್ನು ಆಡಿದ್ದಾರೆ. ಜತೆಗೆ ಆಸ್ಟ್ರೇಲಿಯಾ ತಂಡವನ್ನು 82 ಏಕದಿನ ಪಂದ್ಯಗಳಲ್ಲಿ ಮತ್ತು ಒಂದು ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಪ್ರತಿನಿಧಿಸಿದ್ದಾರೆ.
ನಾಳೆ ಶಿವಮೊಗ್ಗ ನಗರ, ಕುಂಸಿ, ಆಯನೂರಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
ಬೆಂಗಳೂರಿನ 1,200 ಚದುರ ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ಕಟ್ಟಡ ಮಾಲೀಕರಿಗೆ ಸರ್ಕಾರ ಗುಡ್ ನ್ಯೂಸ್