ನವದೆಹಲಿ: ನವರಾತ್ರಿಯ ಹೊತ್ತಲ್ಲೇ ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಅದೇ 2025-26ನೇ ಹಣಕಾಸು ವರ್ಷದಲ್ಲಿ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯ ಅಡಿಯಲ್ಲಿ 25 ಲಕ್ಷ ಹೆಚ್ಚುವರಿ ಎಲ್ ಪಿ ಜಿ ಸಂಪರ್ಕಗಳನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವಂತ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ ದೀಪ್ ಸಿಂಗ್ ಪುರಿ ಅವರು, ಕೇಂದ್ರ ಸರ್ಕಾರವು 2025-26ನೇ ಹಣಕಾಸು ವರ್ಷದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಂದರೇ ಪಿಎಂಯುವೈ ಅಡಿಯಲ್ಲಿ 25 ಲಕ್ಷ ಹೆಚ್ಚುವರಿ LPG ಸಂಪರ್ಕಗಳನ್ನು ಉಚಿತವಾಗಿ ಮಹಿಳೆಯರಿಗೆ ನೀಡಲು ಅನುಮೋದಿಸಿದೆ ಎಂದಿದ್ದಾರೆ.
ನವರಾತ್ರಿಯ ಹೊತ್ತಲ್ಲೇ ಉಜ್ವಲ ಯೋಜನೆಯ ಅಡಿಯಲ್ಲಿ 25 ಲಕ್ಷ ಠೇವಣಿ ರಹಿತ ಎಲ್ ಪಿಜಿ ಸಂಪರ್ಕಗಳನ್ನು ಮಹಿಳೆಯರಿಗೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದುರ್ಗಾ ದೇವಿಗೆ ನೀಡಿದ ಗೌರವದೊಂದಿಗೆ ಮಹಿಳೆಯರನ್ನು ನಡೆಸಿಕೊಳ್ಳುವ ಪ್ರಧಾನಿ ಮೋದಿಯವರ ಬದ್ಧತೆಗೆ ಇದು ಮತ್ತೊಂದು ಸಾಕ್ಷಿಯಾಗಿದೆ.
ದೇಶದ ಮಹಿಳೆಯರು ಪಿಎಂ ಉಜ್ವಲ ಯೋಜನೆಯಡಿಯಲ್ಲಿ, ಫಲಾನುಭವಿಗಳು ಸಿಲಿಂಡರ್, ಅನಿಲ ಒತ್ತಡ ನಿಯಂತ್ರಕ, ಸುರಕ್ಷಾ ಮೃದು ಕೊಳವೆ, ದೇಶೀಯ ಅನಿಲ ಗ್ರಾಹಕ ಕಾರ್ಡ್ ಕಿರುಪುಸ್ತಕ ಮತ್ತು ಅನುಸ್ಥಾಪನಾ ಶುಲ್ಕಗಳ ಭದ್ರತಾ ಠೇವಣಿಯನ್ನು ಒಳಗೊಂಡಿರುವ ಠೇವಣಿ-ಮುಕ್ತ ಅಡುಗೆ ಅನಿಲ ಸಂಪರ್ಕವನ್ನು ಪಡೆಯಲಿದ್ದಾರೆ
ಇದಲ್ಲದೇ ಮೊದಲ ಮರುಪೂರಣ ಮತ್ತು ಅಡುಗೆ ಅನಿಲ ಸ್ಟೌವ್ ಅನ್ನು ಸಹ ಉಚಿತವಾಗಿ ನೀಡಲಾಗುತ್ತದೆ. ಫಲಾನುಭವಿಗಳು ಅಡುಗೆ ಅನಿಲ ಸಂಪರ್ಕ, ಮೊದಲ ಮರುಪೂರಣ ಅಥವಾ ಸ್ಟೌವ್ ಗಳಿಗಾಗಿ ಯಾವುದೇ ಶುಲ್ಕ ಪಾವತಿ ಮಾಡುವ ಅಗತ್ಯವಿಲ್ಲ, ಏಕೆಂದರೆ ಈ ವೆಚ್ಚಗಳನ್ನು ಭಾರತ ಸರ್ಕಾರ ಮತ್ತು ತೈಲ (ಅಡುಗೆ ಅನಿಲ) ಮಾರುಕಟ್ಟೆ ಕಂಪನಿಗಳು (ಒಎಂಸಿ ಸಂಸ್ಥೆಗಳು) ಭರಿಸುತ್ತವೆ.
ಫಲಾನುಭವಿಗಳು 14.2 ಕೆಜಿ ಸಿಂಗಲ್ ಬಾಟಲ್ ಸಂಪರ್ಕ, 5 ಕೆಜಿ ಸಿಂಗಲ್ ಬಾಟಲ್ ಸಂಪರ್ಕ ಅಥವಾ 5 ಕೆಜಿ ಡಬಲ್ ಬಾಟಲ್ ಸಂಪರ್ಕದಿಂದ ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಸೂಕ್ತ ಬಾಟಲ್ ಸಂಪರ್ಕ ಆಯ್ಕೆ ಮಾಡುವ ಅವಕಾಶವನ್ನು ಹೊಂದಲಿದ್ದಾರೆ.
ನಾಳೆ ಶಿವಮೊಗ್ಗ ನಗರ, ಕುಂಸಿ, ಆಯನೂರಿನ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
ಬೆಂಗಳೂರಿನ 1,200 ಚದುರ ಅಡಿಗಿಂತ ಹೆಚ್ಚಿನ ವಿಸ್ತೀರ್ಣದ ಕಟ್ಟಡ ಮಾಲೀಕರಿಗೆ ಸರ್ಕಾರ ಗುಡ್ ನ್ಯೂಸ್