ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಭಾರತ ಮತ್ತು ಪಾಕಿಸ್ತಾನ ನಡುವಿನ ನಾಲ್ಕು ದಿನಗಳ ಯುದ್ಧವು ಈಗ ಇಸ್ಲಾಮಾಬಾದ್’ನ ಶಾಲಾ ಪಠ್ಯಪುಸ್ತಕಗಳಲ್ಲಿ ಒಂದು ಭಾಗವಾಗಿದೆ. ಆದ್ರೆ, ಇದ್ರಲ್ಲಿ ಜೆಟ್’ಗಳನ್ನು “ನಾಶಪಡಿಸುವುದರಿಂದ” ಹಿಡಿದು “ವಿಜೇತರನ್ನು” ಘೋಷಿಸುವವರೆಗೆ, ಪಾಕಿಸ್ತಾನವು ಹಲವಾರು ಪ್ರಮಾದಗಳೊಂದಿಗೆ ಶಾಲಾ ಮಕ್ಕಳಿಗೆ ಬೋಧಿಸುತ್ತಿದೆ. ಭಾರತವು ಸಂಘರ್ಷವನ್ನ ಪ್ರಾರಂಭಿಸಿದ್ದು, ಪಾಕಿಸ್ತಾನಿ ಸೈನ್ಯವು “ಪ್ರತ್ಯುತ್ತರ” ನೀಡಿತು ಮತ್ತು ಭಾರತೀಯ ವಾಯುನೆಲೆಗಳನ್ನ ನಾಶಮಾಡಿತು ಮತ್ತು ಪಾಕಿಸ್ತಾನ ಯುದ್ಧವನ್ನ “ಗೆದ್ದಿತು” ಎಂದು ಪಾಕಿಸ್ತಾನಿ ಪಠ್ಯಪುಸ್ತಕ ಹೇಳುತ್ತದೆ.
ಪಾಕಿಸ್ತಾನ ಏನು ಹೇಳಿಕೊಂಡಿದೆ.?
ಭಾರತದ ಮಿಲಿಟರಿ ‘ಆಕ್ರಮಣ’ ; ಪಾಕಿಸ್ತಾನದ ಪಠ್ಯಪುಸ್ತಕದಲ್ಲಿ ಏನು ಹೇಳಲಾಗಿದೆ: ಮೇ 6, 2025 ರಂದು, ಭಾರತವು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನ ಭಾಗವಾಗಿದೆ ಎಂದು ಸುಳ್ಳು ಆರೋಪ ಮಾಡುವ ಮೂಲಕ ಪಾಕಿಸ್ತಾನದ ಮೇಲೆ ದಾಳಿ ನಡೆಸಿತು. ಪಾಕಿಸ್ತಾನ ಎಲ್ಲಾ ಆರೋಪಗಳನ್ನು ನಿರಾಕರಿಸಿತು, ಆದರೆ ಭಾರತವು ಮೇ 7, 2025 ರಂದು ಪಾಕಿಸ್ತಾನದ ವಿರುದ್ಧ ಮಿಲಿಟರಿ ಆಕ್ರಮಣವನ್ನು ನಡೆಸಿತು.
ವಾಸ್ತವವಾಗಿ ಏನಾಯಿತು : ಅಸಲಿಗೆ, ಏಪ್ರಿಲ್ 22, 2025 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದರು, ಅದರಲ್ಲಿ 25 ಮಂದಿ ಪ್ರವಾಸಿಗರು. ಈ ದಾಳಿಗೆ ಪ್ರತೀಕಾರವಾಗಿ, ಭಾರತವು ಮೇ 7, 2025 ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಒಂಬತ್ತು ಭಯೋತ್ಪಾದಕ ಸ್ಥಳಗಳನ್ನ ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ್ ಪ್ರಾರಂಭಿಸಿತು. ತನ್ನ ಸೇನೆಯು ಉದ್ದೇಶಪೂರ್ವಕವಾಗಿ ನಾಗರಿಕ ರಚನೆಗಳನ್ನು ತಪ್ಪಿಸಿತು ಮತ್ತು ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್’ಗಳ ಅಡಗುತಾಣಗಳ ಮೇಲೆ ಮಾತ್ರ ದಾಳಿ ಮಾಡಿತು ಎಂದು ಭಾರತ ಸ್ಪಷ್ಟಪಡಿಸಿದೆ.
ಜನ ಸಾಮಾನ್ಯರಿಗೆ ಮತ್ತೊಂದು ಗುಡ್ ನ್ಯೂಸ್ ; ‘GST’ಯಲ್ಲಿ ಮತ್ತಷ್ಟು ಕಡಿತದ ಸುಳಿವು ನೀಡಿದ ‘ಪ್ರಧಾನಿ ಮೋದಿ’