ಬೆಂಗಳೂರು : ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಹಮ್ಮಿಕೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸದ್ಯ ಎಲ್ಲೆಡೆ ನೆಟ್ವರ್ಕ್ ಸಮಸ್ಯೆ ಉಂಟಾಗಿದೆ. ಪರಿಣಾಮ ಸಮೀಕ್ಷೆ ಬಂದ ಶಿಕ್ಷಕರು ಮೊಬೈಲ್ ನೆಟ್ವರ್ಕ್ ಗಾಗಿ ಮರ ಮತ್ತು ನಿರೀನ ಟ್ಯಾಂಕ್ ಹತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಸರ್ಕಾರದಿಂದ ನಡೆಸಲಾಗುತ್ತಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗಾಗಿ ಮೊಬೈಲ್ಗೆ ನೆಟವರ್ಕ್ ಸಿಗದ ಕಾರಣ ಸಮೀಕ್ಷೆಗೆ ನಿಯುಕ್ತಿಗೊಂಡ ಶಿಕ್ಷಕರೊಬ್ಬರು ನೆಟವರ್ಕ್ಗಾಗಿ ಮರ ಹತ್ತಿದ ಪ್ರಸಂಗ ಹುಲಸೂರ ತಾಲೂಕಿನ ಮಿರಖಲ್ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಜರುಗಿದೆ.
ಸಮೀಕ್ಷೆಗೆಂದು ನಿಯುಕ್ತಿಗೊಂಡ ಮಿರಖಲ್ ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕ ಗೋವಿಂದ ಮಹಾರಾಜ ನೆಟವರ್ಕ್ ಸಲುವಾಗಿ ಮರವೇರಿದ ಶಿಕ್ಷಕರಾಗಿದ್ದಾರೆ. ಕಳೆದ ಸೆ. 22ರಿಂದ ರಾಜ್ಯ ಸರ್ಕಾರದಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗೆ ಚಾಲನೆ ನೀಡಲಾಗಿದ್ದು, ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಗಡಿ ಗ್ರಾಮ ಮಿರಖಲ್ನಲ್ಲಿ ನೆಟವರ್ಕ್ ಸಿಗದ ಹಿನ್ನೆಲೆ ಶಿಕ್ಷಕ ಮರ ಹತ್ತಿದ್ದಾರೆ. ಆದರೆ ಮರ ಹತ್ತಿದ ನಂತರವು ಸಹ ಸರಿಯಾದ ನೆಟವರ್ಕ್ ಸಂಪರ್ಕ ಸಿಗದೆ ನೆರೆಯ ಮಹಾರಾಷ್ಟ್ರದ ನೆಟವರ್ಕ್ ಸಿಗುತ್ತಿತ್ತು ಎನ್ನಲಾಗಿದೆ. ಹೀಗಾಗಿ ಶಿಕ್ಷಕ ಮರದಿಂದ ಕೆಳಗೆ ಇಳಿಯುವಂತಾಗಿದೆ ಎಂದು ತಿಳಿದು ಬಂದಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಮೊಬೈಲ್ ನೆಟ್ವರ್ಕ್ ಅನಿವಾರ್ಯ. ಆದರೆ ಮೊಬೈಲ್ ನೆಟ್ವರ್ಕ್ ಸಿಗದ ಕಾರಣ ಗಣತಿದಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬೀದರ್ ಜಿಲ್ಲೆಯ ಮಹಾರಾಷ್ಟ್ರದ ಗಡಿಯಲ್ಲಿ ಬರುವ ಔರಾದ್, ಕಮಲನಹರ, ಬಸವ ಕಲ್ಯಾಣ, ಹುಲಸೂರು ತಾಲೂಕಿನ ಕೆಲವು ಗ್ರಾಮ ಹಾಗೂ ತಾಂಡಾಗಳಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆ ಉಂಟಾಗಿದೆ. ನೆಟ್ವರ್ಕ್ಗಾಗಿ ಶಿಕ್ಷಕರು ಮರ ಮತ್ತು ನೀರಿನ ಟ್ಯಾಂಕ್ ಹತ್ತಿದ ಆಶ್ಚರ್ಯಕರ ಸಂಗತಿಗಳು ನಡೆದಿವೆ.







