ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಮತ್ತು ಮಿಲಿಟರಿ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿ ಜನರಲ್ ಅನಿಲ್ ಚೌಹಾಣ್ ಅವರ ಅಧಿಕಾರಾವಧಿಯನ್ನು ಮೇ 30, 2026 ರವರೆಗೆ ಅಥವಾ ಮುಂದಿನ ಆದೇಶದವರೆಗೆ ವಿಸ್ತರಿಸಲಾಗಿದೆ.
ಮಂಗಳವಾರ ಸರ್ಕಾರದ ಪ್ರಕಟಣೆ ಹೀಗೆ ಹೇಳಿದೆ:
“ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಮತ್ತು ಮಿಲಿಟರಿ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿ ಜನರಲ್ ಅನಿಲ್ ಚೌಹಾಣ್ ಅವರ ಸೇವೆಯನ್ನು 2026 ರ ಮೇ 30 ರವರೆಗೆ ವಿಸ್ತರಿಸಲು ಸರ್ಕಾರ ಅನುಮೋದನೆ ನೀಡಿದೆ” ಎಂದಿದೆ.
1981 ರಲ್ಲಿ ಭಾರತೀಯ ಸೇನೆಗೆ ನೇಮಕಗೊಂಡ ಜನರಲ್ ಚೌಹಾಣ್ ಅವರು ತಮ್ಮ ವೃತ್ತಿಜೀವನದಲ್ಲಿ ಹಲವಾರು ಪ್ರಮುಖ ಕಮಾಂಡ್ ಮತ್ತು ಸಿಬ್ಬಂದಿ ನೇಮಕಾತಿಗಳನ್ನು ಹೊಂದಿದ್ದಾರೆ. ಅವರು ಸೆಪ್ಟೆಂಬರ್ 30, 2022 ರಿಂದ ಸಿಡಿಎಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಪರಮ್ ವಿಶಿಷ್ಠ ಸೇವಾ ಪದಕ (ಪಿವಿಎಸ್ಎಂ), ಉತ್ತಮ್ ಯುದ್ಧ್ ಸೇವಾ ಪದಕ (ಯುವೈಎಸ್ಎಂ), ಅತಿ ವಿಶಿಷ್ಠ ಸೇವಾ ಪದಕ (ಎವಿಎಸ್ಎಂ), ಸೇನಾ ಪದಕ (ಎಸ್ಎಂ) ಮತ್ತು ವಿಶಿಷ್ಠ ಸೇವಾ ಪದಕ (ವಿಎಸ್ಎಂ) ಅನ್ನು ಪಡೆದಿದ್ದಾರೆ.