ಶಿವಮೊಗ್ಗ : ಜಾತಿ ಜನಗಣತಿ ಸಂದರ್ಭದಲ್ಲಿ ಬಿಲ್ಲವರು ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಬಿಲ್ಲವ ಎಂದು ನಮೂದಿಸಿ, ಉಪಜಾತಿ ಕಾಲಂನಲ್ಲಿ ಏನನ್ನೂ ನಮೂದಿಸಬಾರದು ಎಂದು ಬಿಲ್ಲವ ಸಂಘದ ಅಧ್ಯಕ್ಷ ಕರ್ಕಿಕೊಪ್ಪ ಚಂದ್ರು ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಂಗಳವಾರ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಲ್ಲವ ಎನ್ನುವುದು ನಮ್ಮ ಅಧಿಕೃತ ಜಾತಿಯಾಗಿದ್ದು ಉಪಜಾತಿ ನಮೂದಿಸಿ ಅನಗತ್ಯ ಗೊಂದಲ ಸೃಷ್ಟಿ ಮಾಡಬೇಡಿ ಎಂದು ಸಮುದಾಯದವರಿಗೆ ಮನವಿ ಮಾಡಿದರು.
ರಾಜ್ಯದ ವಿವಿಧ ಬಿಲ್ಲವ ಸಂಘಟನೆಗಳ ತೀರ್ಮಾನಂದAತೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಮ್ಮಲ್ಲಿ ಬಳಕೆ ಇರುವ ಉಪನಾಮಗಳ ಬಳಕೆಯಿಂದ ಅನಗತ್ಯ ಗೊಂದಲ ಉಂಟಾಗುತ್ತದೆ. ಸರ್ಕಾರಿ ಸೌಲಭ್ಯ ಪಡೆಯಲು ಮುಂದಿನ ದಿನಗಳಲ್ಲಿ ತೊಡಕುಂಟಾಗಬಹುದು. ಈ ಹಿನ್ನೆಲೆಯಲ್ಲಿ ಕಾಲಂನಲ್ಲಿ 11ರಲ್ಲಿ ಏನೂ ಬರೆಯುವುದು ಬೇಡ. ಸರ್ಕಾರವು ಬಿಲ್ಲವ ಜಾತಿಯೊಂದಿಗೆ ಕ್ರಿಶ್ಚಿಯನ್ ಎಂಬ ಪದ ಸೇರಿಸಿ ಇನ್ನೊಂದು ಉಪಜಾತಿ ಮಾಡುವ ಕುರಿತು ತೆಗೆದುಕೊಂಡ ತೀರ್ಮಾನಕ್ಕೆ ಸಮುದಾಯ ಬಾಂಧವರು ಅಕ್ಷೇಪಣೆ ಸಲ್ಲಿಸಿದ್ದಾರೆ. ನಮ್ಮಲ್ಲಿ ಬಿಲ್ಲವ ಕ್ರಿಶ್ಚಿಯನ್ ಎಂಬ ಜಾತಿ ಇಲ್ಲ. ಸಮುದಾಯ ಬಾಂಧವರು ಗಣತಿಗೆ ಬಂದಾಗ ಇದನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದರು.
ಈ ಸುದ್ದಿಗೋಷ್ಠಿಯಲ್ಲಿ ಸಮಾಜದ ಉಪಾಧ್ಯಕ್ಷ ನಾಗರಾಜ್ ಮಾತನಾಡಿದರು. ಗೋಷ್ಟಿಯಲ್ಲಿ ಎಸ್.ರಾಜು, ಮಂಜು ಎನ್., ಸುಮಾ ರವಿ, ಕೃಷ್ಣಮೂರ್ತಿ, ಬಿ.ಎಸ್.ಸುಂದರ್ ಹಾಜರಿದ್ದರು.
ಶಿವಮೊಗ್ಗ: ಆಧುನಿಕ ತಂತ್ರಜ್ಞಾನದ ಮೂಲಕ ಕೃಷಿಯಲ್ಲಿ ಪ್ರಗತಿಗೆ ಶ್ರಮಿಸಿ- ಶಾಸಕ ಗೋಪಾಲಕೃಷ್ಣ ಬೇಳೂರು
ಶಿವಮೊಗ್ಗ: ಸಮೀಕ್ಷೆ ವೇಳೆ ಜಾತಿ ಕಾಲಂನಲ್ಲಿ ‘ದೀವರು’ ಎಂದು ಬರೆಸಿ- ಅಭಿಯಾನ ಸಂಚಾಲಕ ವೆಂಕಟೇಶ್ ಮೇಳವರಿಗೆ ಮನವಿ