ಬೆಂಗಳೂರು: ಸೌಜನ್ಯ ಪ್ರಕರಣದಲ್ಲಿ ಹೋರಾಟ ಮಾಡುತ್ತಿರುವ ಮಹೇಶ್ ತಿಮರೋಡಿಯನ್ನು ಗಡಿಪಾರು ಮಾಡಲಾಗಿದೆ ಅಂಥ ತಿಳಿದು ಬಂದಿದೆ.
ಮಹೇಶ್ ತಿಮರೋಡಿಯನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಲಾಗಿದೆ ಅಂತ ತಿಳಿದು ಬಂದಿದೆ. ಇದು ಒಂದು ವರ್ಶದ ತನಕ ಇರಲಿದೆ ಎನ್ನಲಾಗಿದ್ದು, ಮಹೇಶ್ ತಿಮರೋಡಿ ಮೇಲೆ ಪ್ರಕರಣ ಇರುವ ತನಕ ಅವರನ್ನು ಗಡಿಪಾರು ಮಾಡುವಂತೆ ದ. ಕನ್ನಡ ಜಿಲ್ಲೆಯ ಸಹಾಯಕ ಆಯುಕ್ತರಾದ ಸ್ಟೆಲ್ಲಾ ಮೇರಿಸು ಅವರು ಈ ಆದೇಶವನ್ನು ಹೊರಡಿಸಿದ್ದಾರೆ ಎನ್ನಲಾಗಿದೆ. ಸದ್ಯ ಎಲ್ಲಾ ಕಾನೂನು ಪ್ರಕ್ರಿಯೆ ನಡೆಯುತ್ತಿದ್ದು, ದ. ಕನ್ನಡ ಪೊಲೀಸರು ಮಹೇಶ್ ತಿಮರೋಡಿ ಕರೆದುಕೊಂಡು ಹೋಗಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಬಿಟ್ಟು ಬರಲಿದ್ದಾರೆ ಎನ್ನಲಾಗಿದೆ.