ಬಳ್ಳಾರಿ : ಸಿರುಗುಪ್ಪ ಪಟ್ಟಣದ ವೈಷ್ಣವಿ ಹೋಟೆಲ್ ನಿಂದ ರಿಲಾಯನ್ಸ್ ಟ್ರೆಂಡ್‌ವರೆಗೆ ಎನ್‌ಹೆಚ್ 150ಎ ದ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ರಸ್ತೆ ಬದಿಯ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಸೆ.23 ರಿಂದ 30 ರ ವರೆಗೆ 110/33/11ಕೆವಿ ಸಿರುಗುಪ್ಪ ವಿದ್ಯುತ್ ವಿತರಣಾ ಕೇಂದ್ರದಿಂದ ಹಾದು ಹೋಗುವ ಎಫ್‌ಐಬಿ ಎಪಿಎಂಸಿ ಫೀಡರ್ ನಿಂದ ವಿದ್ಯುತ್ ಪೂರೈಕೆಯಾಗುವ ಸಿರುಗುಪ್ಪ ಪಟ್ಟಣದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು
ಸಿರುಗುಪ್ಪ ಪಟ್ಟನದ ವಿಶ್ವಜ್ಯೋತಿ ಶಾಲೆ ಹತ್ತಿರ, ಮುರಾರಿ ಬಡಾವಣೆ, ಮಹಾವೀರ ಬಡಾವಣೆ, ಸಿರಿ ನಗರ, ದೇವಲಾಪುರ ಕ್ರಾಸ್, ಮಹಾವೀರ ಎನ್‌ಕ್ಲೇವ್, ವಿವೈ ಸಿಟಿ, ಹೈದರ್ ಅಲಿ ಕಾಲೋನಿ, ಎವಿಎಸ್ ಫಂಕ್ಷನ್ ಹಾಲ್, ಸಿದ್ದಪ್ಪ ನಗರ, ಸಾಯಿಬಾಬಾ ದೇವಸ್ಥಾನ, ದೇವಲಾಪುರ ಗ್ರಾಮ, ಲಕ್ಷ್ಮಿ ವೆಂಕಟೇಶ್ವರ ನಗರ, ರಾಘವಯ್ಯ ಕಾಲೋನಿ, ಎಪಿಎಂಸಿ ಆವರಣ, ಕುವೆಂಪು ನಗರ, ತ್ಯಾಗರಾಜ ನಗರ, ನೀಲಾಂಜನೇಯ ಬಡಾವಣೆ, ವಿನಾಯಕ ನಗರ, ಕೃಷ್ಣ ನಗರ, ಸೌಭಾಗ್ಯ ನಗರ, ಹನುಮಂತ ನಗರ, ಆಶ್ರಯ ಕಾಲೋನಿ, ಕೆಹೆಚ್‌ಬಿ ಕಾಲೋನಿ, ಕರಿಬಸಪ್ಪ ಬಡಾವಣೆ, ವೆಂಕಟಾದ್ರಿ ಬಡಾವಣೆ, ಜಯನಗರ, ಶಾಂತಿನಗರ, ಕುಮಾರಸ್ವಾಮಿ ಬಡಾವಣೆ, ಕುಂಬಾರ ಓಣಿ, ವಿಷ್ಟು ವಿಲಾಸ ನಗರ, ಶ್ರೀ ಕೃಷ್ಣದೇವರಾಯ ಶಾಲೆ ಹತ್ತಿರ ಸೇರಿದಂತೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಸಾರ್ವಜನಿಕರು, ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಸಿರುಗುಪ್ಪ ಜೆಸ್ಕಾಂ ನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಡಿಕ್ಟೇಟ್ ಮಾಡಿ ಬರೆಸುವ ಜಾತಿ ಸಮೀಕ್ಷೆ ಅಧಿಕೃತವಲ್ಲ: ವಿಪಕ್ಷ ನಾಯಕ ಆರ್.ಅಶೋಕ್
Watch Video : ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಹೊಸ ‘AI’ ಅಸ್ತ್ರ ; ಮತ್ತೊಂದು ವಿಡಿಯೋ ಬಿಡುಗಡೆ