ನೆಲಮಂಗಲ: ಹಿರಿಯ ನಟಿ ದಿವಂಗತ ಲೀಲಾವತಿ ಅವರ ಸ್ಮರಣಾರ್ಥದ ಮಠದ ಮಕ್ಕಳ ಅನ್ನ ದಾಸೋಹ ಸಂಗ್ರಹ ಸೇವೆಗಾಗಿ ಕಾರೊಂದನ್ನು ನಟ ವಿನೋದ್ ರಾಜ್ ಉಡುಗೋರೆಯಾಗಿ ನೀಡಿದ್ದಾರೆ.
ಬೆಂಗಳೂರು ಹೊರವಲಯದ ನೆಲಮಂಗಲ ಬಳಿಯ ಸೋಲದೇವನಹಳ್ಳಿ ತೋಟದಲ್ಲಿ ಬಾಗಲಕೋಟೆಯ ಮಹಾಂತ ಮಂದಾರ ಮಠ ಬನಹಟ್ಟಿ ಪೂಜ್ಯ ಶ್ರೀ ಮಹಾಂತಾ ದೇವರು ಸ್ವಾಮೀಜಿ ಅವರಿಗೆ ತಾಯಿ ಲೀಲಾವತಿ ಅವರ ಸ್ಮರಣಾರ್ಥ ಮಠದ ಮಕ್ಕಳ ಅನ್ನದಾಸೋಹ ಸಂಗ್ರಹ ಸೇವೆಗೆ ನೆರವಾಗುವುದಕ್ಕೆ ನಟ ವಿನೋದ್ ರಾಜ್ ಕಾರೊಂದನ್ನು ಉಡುಗೋರೆಯಾಗಿ ನೀಡಿದರು.
ನಟ ವಿನೋದ್ ರಾಜ್ ಈ ಹಿಂದೆ ಲೀಲಾವತಿ ಹೆಸರಿನ ಸಾರ್ವಜನಿಕ ಆಸ್ಪತ್ರೆ, ಪಶು ಚಿಕಿತ್ಸಾಲಯ, ರಸ್ತೆ ರಿಪೇರಿಗೆ ತನ್ನದೆ ಆದಂತ ನೆರವು ನೀಡಿ ಸಾಮಾಜಿಕ ಸೇವೆಯನ್ನು ಮೆರೆದಿದ್ದರು. ಇದೀಗ ಮಕ್ಕಳ ಅನ್ನ ದಾಸೋಹಕ್ಕೆ ನೆರವಾಗಲಿ ಎಂಬುದಾಗಿ ಕಾರು ನೀಡಿದ್ದಾರೆ.
Watch Video : ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಹೊಸ ‘AI’ ಅಸ್ತ್ರ ; ಮತ್ತೊಂದು ವಿಡಿಯೋ ಬಿಡುಗಡೆ
ನವೆಂಬರಿನಲ್ಲಿ ‘ರಾಜ್ಯ ಸಂಪುಟ’ ಪುನರ್ ರಚನೆ, ಹೊಸಬರಿಗೆ ಅವಕಾಶ: ಎಂಎಲ್ಸಿ ಸಲೀಂ ಅಹಮದ್ ಸ್ಪೋಟಕ ಹೇಳಿಕೆ