ಬೆಂಗಳೂರು: ಸೆಪ್ಟೆಂಬರ್.22ರ ನಾಳೆಯಿಂದ ವಿವಾದದ ನಡುವೆಯೂ ಸಾಮಾಜಿ ಹಾಗೂ ಶೈಕ್ಷಣಿಕ ಸಮೀಕ್ಷೆ ಆರಂಭಗೊಳ್ಳಲಿದೆ. ವಿವಾದಕ್ಕೆ ಕಾರಣವಾಗಿದ್ದಂತ ಕ್ರಿಶ್ಚಿಯನ್ ಗೆ ಮತಾಂತರ ಆದ 33 ಜಾತಿಗಳನ್ನು ಹಿಂದುಳಿದ ವರ್ಗಗಳ ಆಯೋಗವು ಸಮೀಕ್ಷೆ ನಡೆಸುವ ನಿರ್ಧಾರದಿಂದ ಕೈ ಬಿಟ್ಟಿದೆ. ಹೀಗಾಗಿ ಮತಾಂತರ ಆಗಿದ್ದರೇ ಆ ಧರ್ಮವೇ ಫಿಕ್ಸ್ ಆದಂತೆ ಆಗಿದೆ.
ಇಂದು ಹಿಂದುಳಿದ ವರ್ಗಗಳ ಆಯೋಗವು ಈ ಮಾಹಿತಿ ನೀಡಿದ್ದು, ಗೊಂದಲಕ್ಕೆ ಕಾರಣವಾದಂತ 33 ಜಾತಿಗಳನ್ನು ಸಾರ್ವಜನಿಕರ ಸಲಹೆಯ ಮೇರೆಗೆ ಕೈಬಿಡಲಾಗಿದೆ. ನಾಳೆಯಿಂದ ಆರಂಭಗೊಳ್ಳುವಂತ ಜಾತಿ ಗಣತಿ ಸಮೀಕ್ಷೆಯ ಪಟ್ಟಿಯಲ್ಲಿ ಆ ಜಾತಿಗಳು ಇರೋದಿಲ್ಲ. ಇಚ್ಚೆ ಇರೋರು ಅವುಗಳನ್ನು ಸ್ವಇಚ್ಚೆಯಿಂದ ಬರೆಸಬಹುದು ಎಂದಿದೆ.
ಇನ್ನೂ ಮತಾಂತರವಾದ ಜಾತಿಗಳಿಗೆ ಮೂಲ ಜಾತಿ ಬಿಟ್ಟು ಮತಾಂತರವಾದ ಧರ್ಮವೇ ಅನ್ವಯಿಸಲಿದೆ. ಮೂಲ ಜಾತಿ ಅವರಿಗೆ ಅನ್ವಯಿಸೋದಿಲ್ಲ. ಸಮೀಕ್ಷೆಯ ನಂತ್ರ ಯಾವ ಜಾತಿ ಯಾವ ಕೆಟಗರಿಯಲ್ಲಿ ಬರುತ್ತದೆ ಎಂಬುದಾಗಿ ತಜ್ಞರ ತಂಡವು ನಿರ್ಧರಿಸಲಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್ ಆರ್ ನಾಯಕ್ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲೊಂದು ಶಾಕಿಂಗ್ ಕೃತ್ಯ: ಬಳ್ಳಾರಿಯಲ್ಲಿ ಹೆಣ್ಣು ಮಗುವೆಂದು ಹಸುಗೂಸು ಕಾಲುವೆಗೆ ಎಸೆದು ಕೊಂದ ಪಾಪಿ ತಾಯಿ
BREAKING: ಹಾಸನದಲ್ಲಿ ಗಣಪತಿ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ್ದ ಮುಸುಕುಧಾರಿ ಮಹಿಳೆ ಅರೆಸ್ಟ್