ಬಾಗಲಕೋಟೆ: ಕೂಡಲ ಸಂಗಮನದ ಪಂಚಮಸಾಲಿ ಪೀಠಾಧಿಪತಿ ಸ್ಥಾನದಿಂದ ಬಸವ ಜಯಮೃತ್ಯಂಜಯಶ್ರೀಗಳನ್ನು ಉಚ್ಚಾಟಿಸಲಾಗಿದೆ. ಈ ಬೆನ್ನಲ್ಲೇ ಸ್ವಾಮೀಜಿ ವಿರುದ್ಧ ಸಿಡಿ ಬಾಂಬ್ ಅನ್ನು ಶಾಸಕ ವಿಜಯಾನಂದ ಕಾಶಪ್ಪನವರ್ ಸಿಡಿಸಿದ್ದಾರೆ.
ಇಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನಲ್ಲಿ ನಡೆದಂತ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಟ್ರಸ್ಟ್ ಸಭೆಯಲ್ಲಿ ಕೂಡಲಸಂಗಮದ ಪಂಚಮಸಾಲಿ ಪೀಠಾಧಿಪತಿ ಸ್ಥಾನದಿಂದ ಜಯಮೃತ್ಯುಂಜಯಶ್ರೀಗಳನ್ನು ಉಚ್ಚಾಟಿಸುವಂತ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಹೀಗಾಗಿ ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ಬೀಗವನ್ನು ಸಿಬ್ಬಂದಿಗಳು ಹಾಕಿದ್ದಾರೆ. ಪಂಚಮಸಾಲಿ ಪೀಠಕ್ಕೆ ಬೀಗ ಹಾಕಿಕೊಂಡು ಸಿಬ್ಬಂದಿ ಹೋಗಿದ್ದಾರೆ.
ಇನ್ನೂ ಪೀಠಾಧಿಪತಿ ಸ್ಥಾನದಿಂದ ಬಸವ ಜಯಮೃತ್ಯುಂಜಯಶ್ರೀಗಳನ್ನು ಉಚ್ಚಾಟಿಸಿದ ಬಳಿಕ ಸ್ವಾಮೀಜಿ ವಿರುದ್ಧ ಸಿಡಿ ಬಾಂಬ್ ಅನ್ನು ಶಾಸಕ ವಿಜಯಾನಂದ ಕಾಶಪ್ಪನವರ್ ಸಿಡಿಸಿದ್ದಾರೆ. ಶ್ರೀಗಳು ಸಿಡಿ ಎಲ್ಲೆಲ್ಲಿ ಹೋಗಿವೆ ಅವೆಲ್ಲವನ್ನೂ ಹೊರ ತೆಗೆಯುವೆ. ಸ್ವಾಮೀಜಿ ಎಲ್ಲೆಲ್ಲಿ ಆಸ್ತಿ ಮಾಡಿದ್ದಾರೆ ಎಲ್ಲವನ್ನೂ ಹೊರತೆಗೆಯುವೆ. ನಮ್ಮ ಹತ್ತಿರ ಎಲ್ಲಾ ದಾಖಲೆ ಇವೆ. ಟೈಂ ಬಂದಾಗ ಹೊರಗೆ ಎಳೆಯುವೆ ಎಂಬುದಾಗಿ ಕಾರ್ಯಕಾರಿಣಿ ಸಭೆಯಲ್ಲಿ ಶಾಸಕ ಹಾಗೂ ಅಖಿಲ ಭಾರತ ಪಂಚಮಸಾಲಿ ಟ್ರಸ್ಟ್ ಅಧ್ಯಕ್ಷರಾಗಿರುವಂತ ವಿಜಯಾನಂದ ಕಾಶಪ್ಪನವರ್ ಸ್ಪೋಟಕ ಬಾಂಬ್ ಸಿಡಿಸಿದ್ದಾರೆ.
ಏಲಿಯನ್ಸ್ ಈಗ ನಮ್ಮ ಮಾತನ್ನು ಕೇಳಿಸಿಕೊಳ್ಳುತ್ತಿವೆ: ನಾಸಾ ಅಧ್ಯಯನ | Aliens Listening
BREAKING: ಹಾಸನದಲ್ಲಿ ಗಣಪತಿ ವಿಗ್ರಹಕ್ಕೆ ಚಪ್ಪಲಿ ಹಾಕಿದ್ದ ಮುಸುಕುಧಾರಿ ಮಹಿಳೆ ಅರೆಸ್ಟ್