ಬೆಂಗಳೂರು: ಐದು ಗ್ರಹಗಳಾದ ಇಂದಿನ ಯುವ ಪೀಳಿಗೆಯಲ್ಲಿ ತೀವ್ರ ಜೀವನಶೈಲಿಯ ಬದಲಾವಣೆಗಳನ್ನು ತಂದಿವೆ, ಇದು ವ್ಯಸನ, ಒಂಟಿತನ, ಖಿನ್ನತೆ ಮತ್ತು ಹೃದಯ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗಿದೆ ಎಂದು ಲೋಕಸಭಾ ಸದಸ್ಯರಾದ ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ (ಎಫ್‌ಕೆಸಿಸಿಐ) ವತಿಯಿಂದ ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಡಾ. ಮಂಜುನಾಥ್, ಈ ‘ಐದು ಗ್ರಹ’ಗಳಿಂದಾಗಿ ಯುವ ಪೀಳಿಗೆ ಹೃದಯ ನಾಳೀಯ ಕಾಯಿಲೆಗಳಿಗೆ ತುತ್ತಾಗುವ ಆತಂಕಕಾರಿ ಸಂಗತಿಗಳು ಹೊರಬರುತ್ತಿವೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಯುವಜನತೆಯನ್ನು ಇನ್ಸ್ಟಾಗ್ರಾಂ ರೀಲ್ಸ್ ಗಳು ಸೆಳೆಯುತ್ತವೆ. ಹೆಚ್ಚೆಚ್ಚು ರೀಲ್ಸ್ ಮಾಡುವುದು, ರೀಲ್ಸ್ ನೋಡುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಾಮಾಜಿಕ ಮಾಧ್ಯಮ ಬಳಕೆಯನ್ನು ಜನತೆಯಲ್ಲಿ ನಿಯಂತ್ರಿಸುವ ಅವಶ್ಯಕತೆಯಿದೆ, ಅದರಲ್ಲೂ ವಿಶೇಷವಾಗಿ ವೇಗವಾಗಿ ಹರಡುತ್ತಿರುವ ನಕಾರಾತ್ಮಕ ವಿಷಯಗಳನ್ನು ತಡೆಯಬೇಕಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪರಿಶೀಲಿಸದ ಮಾಹಿತಿಗಳು ತುಂಬಾ ಇರುತ್ತವೆ, ಇದು ಸಾಮಾಜಿಕ ರಚನೆಯನ್ನು ತೊಂದರೆಗೊಳಿಸುವುದಲ್ಲದೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದರು.
ಎಫ್‌ಕೆಸಿಸಿಐ ಅಧ್ಯಕ್ಷರಾದ ಎಂ.ಜಿ. ಬಾಲಕೃಷ್ಣ ಅವರು `ಆರೋಗ್ಯವೇ ಸಂಪತ್ತು’ ಎಂದು ಜನರು ತಮ್ಮ ದೈನಂದಿನ ಬದುಕು, ವ್ಯವಹಾರಗಳ ಜೊತೆಗೆ ಆರೋಗ್ಯದ ಮೇಲೂ ಗಮನಹರಿಸಬೇಕು ಎಂದರು. ಎಫ್‌ಕೆಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾದ ಉಮಾ ರೆಡ್ಡಿ ಅವರು ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಜಾತಿ ಸಮೀಕ್ಷೆಯು ಹಿಂದೂ ಧರ್ಮವನ್ನು ಒಡೆಯುವ ಪ್ರಯತ್ನ: ಆರ್.ಅಶೋಕ್ ಕಿಡಿ
ನಾಳೆಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ/ಜಾತಿ ಸಮೀಕ್ಷೆ ಆರಂಭ: ಈ ಪ್ರಶ್ನೆಗಳಿಗೆ ಉತ್ತರ ಕಡ್ಡಾಯ