Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಾಳೆಯಿಂದ ದೇಶಾದ್ಯಂತ ಜಿಎಸ್ಟಿ 2.0 ಜಾರಿ: ಯಾವುದು ಅಗ್ಗ? ಇಲ್ಲಿದೆ ಸಂಪೂರ್ಣ ಪಟ್ಟಿ | GST 2.0

21/09/2025 7:00 PM

ಶಿವಮೊಗ್ಗ: ಮದ್ಯ ಸೇವನೆ ತ್ಯಜಿಸಿ ಸಮಾಜದಲ್ಲಿ ಗೌರವಯುತವಾಗಿ ಬದುಕಿ- ಮಲ್ಲಿಕಾರ್ಜುನ ಹಕ್ರೆ

21/09/2025 6:55 PM

ಈ ‘ವ್ಯಸನ’ಗಳೇ ಯುವ ಜನತೆಯಲ್ಲಿ ‘ಹೃದಯ ಸಂಬಂಧಿತ ಕಾಯಿಲೆ’ಗೆ ಕಾರಣ: ಡಾ.ಸಿ.ಎನ್.ಮಂಜುನಾಥ್

21/09/2025 6:15 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ಮದ್ಯ ಸೇವನೆ ತ್ಯಜಿಸಿ ಸಮಾಜದಲ್ಲಿ ಗೌರವಯುತವಾಗಿ ಬದುಕಿ- ಮಲ್ಲಿಕಾರ್ಜುನ ಹಕ್ರೆ
KARNATAKA

ಶಿವಮೊಗ್ಗ: ಮದ್ಯ ಸೇವನೆ ತ್ಯಜಿಸಿ ಸಮಾಜದಲ್ಲಿ ಗೌರವಯುತವಾಗಿ ಬದುಕಿ- ಮಲ್ಲಿಕಾರ್ಜುನ ಹಕ್ರೆ

By kannadanewsnow0921/09/2025 6:55 PM

ಶಿವಮೊಗ್ಗ: ಮದ್ಯ ವೆಸನದಿಂದ ಸಮಾಜದಲ್ಲಿ ಅಗೌರವವೇ ವಿನಹ ಯಾರೂ ಗೌರವ ಕೊಡುವುದಿಲ್ಲ. ಮದ್ಯ ಸೇವನೆಯನ್ನು ತ್ಯಜಿಸಿ ಸಮಾಜದಲ್ಲಿ ಗೌರವಯುತವಾಗಿ ಬದುಕು ಕಟ್ಟಿಕೊಳ್ಳಿ ಎಂಬುದಾಗಿ ಶಿರಸಿ ವಿಭಾಗದ ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷರು, ಹಾಲಿ ಸದಸ್ಯರು ಹಾಗೂ ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ಮಲ್ಲಿಕಾರ್ಜುನ ಹಕ್ರೆ ಮದ್ಯವರ್ಜನ ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ 1981ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದಂತ ಅವರು, ಮದ್ಯ ವೆಸನದಿಂದ ಕುಟುಂಬಗಳು ಬೀಗಿದೆ ಬರುತ್ತಿವೆ. ನೆಮ್ಮದಿ ಹಾಳಾಗುತ್ತಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪರಮಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಡಾ.ಹೇಮಾಪತಿ ವಿ ಹೆಗ್ಗಡೆ ಮದ್ಯವರ್ಜನ ಶಿಬಿರ ಆಯೋಜಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಕುಡಿತದ ಚಟವನ್ನು ಬಿಟ್ಟು ಸಮಾಜದಲ್ಲಿ ತಲೆ ಎತ್ತುವಂತೆ ಬದುಕಬೇಕು. ಉತ್ತಮ ಜೀವನವನ್ನು ಇಲ್ಲಿಂದ ಹೊರಗೆ ತೆರಳಿದ ಮೇಲೆ ಕಟ್ಟಿಕೊಳ್ಳಬೇಕು. ಇಂದು ನೀವೆಲ್ಲರೂ ಕುಡಿತ ಬಿಟ್ಟಿದ್ದೀರಿ. ಉತ್ತಮ ಬದುಕು ಕಟ್ಟಿಕೊಳ್ಳಿ. ಮನೆ ಕಟ್ಟಿ, ವಾಹನ ಖರೀದಿಸಿ. 85 ಶಿಬಿರಾರ್ಥಿಗಳೂ ನವ ಜೀವನವನ್ನು ಕಟ್ಟಿಕೊಳ್ಳಿ ಎಂಬುದಾಗಿ ತಿಳಿಸಿದರು.

ಶ್ರೀ ಕ್ಷೇತ್ರದ ಮೇಲೆ ಆಪಾದನೆ ಬಂದಾಗ ಧರ್ಮಾಧಿಕಾರಿಗಳ ಕುಟುಂಬದೊಂದಿಗೆ ಜಾತ್ಯಾತೀತವಾಗಿ ಸಮುದಾಯಗಳು ಬೆಂಬಲಿಸಿ ನಿಂತುಕೊಂಡಿತು. ಬುರುಡೆ ಗ್ಯಾಂಕ್ ಕಥೆ ಏನಾಗಿದೆ ಅಂತ ನಿಮಗೂ ಗೊತ್ತಿದೆ. ಸರ್ಕಾರವೇ ಷಡ್ಯಂತ್ರವನ್ನು ಒಪ್ಪಿಕೊಂಡಿದೆ ಎಂದರು.

ಪ್ರಾಸ್ತಾವಿಕ ನುಡಿಯಾಡಿದಂತ  ವಿದ್ಯಾಧರ್, 1981ನೇ ಮದ್ಯವರ್ಜನ ಶಿಬಿರಕ್ಕೆ 87 ಜನರು ನೋಂದಾಯಿಸಿಕೊಂಡಿದ್ದರು. ಅವರಲ್ಲಿ 85 ಮಂದಿ ಅಂತಿಮಗೊಂಡು ಯಶಸ್ವಿಯಾಗಿ ನವ ಜೀವನಕ್ಕೆ ಕಾಲಿಟ್ಟಿದ್ದಾರೆ. ಶಿಬಿರಾರ್ಥಿಗಳಿಗೆ ವೈದ್ಯರಿಂದ ಆರೋಗ್ಯ ತಪಾಸಣೆಯಿಂದ ಆರಂಭಗೊಂಡು, 7 ದಿನ ಮನಸ್ಸು ಪರಿವರ್ತನೆ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಟೋಟೋಪ, ಭಜನೆ ಸೇರಿದಂತೆ ಇತರೆ ಪರಿವರ್ತನಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಇಲ್ಲಿಂದ ತೆರಳಿದ ನಂತ್ರ ಕುಡಿತ ಬಿಡುವಂತ ನಿರ್ಧರವನ್ನು 85 ಶಿಬಿರಾರ್ಥಿಗಳು ಕೈಗೊಂಡಿರುವುದು ಸಂತಸದ ವಿಷಯವಾಗಿದೆ ಎಂದರು.

ಉದ್ಘಾಟನಾ ನುಡಿಯಾಡಿದಂತ ಶ್ರೀ ನಾರಾಯಣ ಗುರು ಸಮುದಾಯ ಭವನದ ಅಧ್ಯಕ್ಷರಾದಂತ ಎಸ್.ಕೆ ಚಂದ್ರು ಅವರು, ನೀವು ಉತ್ತಮವಾಗಿ ಸಂಸಾರ ನಡೆಸಬೇಕು. ಉತ್ತಮವಾಗಿ ಜೀವನ ಸಾಗಿಸಬೇಕು ಅಂದ್ರೇ ಕುಡಿತ ಬಿಡಿ. ನಾನು ಮಂದರ್ತಿ ದುರ್ಗಾ ಪರಮೇಶ್ವರಿ ಆರಾಧಕನು. ಆಕೆಯ ಕೃಪೆ ನಿಮ್ಮ ಮೇಲಿರಲಿ. ನಿಮ್ಮ ಮುಂದಿನ ಭವಿಷ್ಯ ಉತ್ತಮವಾಗಿರಲೆಂದು ಹಾರೈಸಿದರು.

ಶಿಬಿರಾರ್ಥಿ ಜನಾರ್ಧನ ಹೊಸಗದ್ದೆ ಸಿದ್ದಾಪುರ ಮಾತನಾಡಿ, 90ಟಿ ಇಂದ ಆರಂಭವಾಗಿ 8 ಕ್ವಾಟರ್ ವರೆಗೂ ಕುಡಿದಿದ್ದೇನೆ. ಗೆಳೆಯನೊಬ್ಬನಿಗೆ ಬ್ರೈನ್ ಹ್ಯಾಮರೇಜ್ ಆಗಿ ತೀರಿಕೊಂಡ ನಂತ್ರ ಮೂರು ವರ್ಷ ಕುಡಿತ ಬಿಟ್ಟೆ. ಆ ಬಳಿಕ ಮತ್ತೆ ಶುರು ಮಾಡಿದೆ. ಈ ಶಿಬಿರಕ್ಕೆ ಸೇರಿ ನಂತ್ರ ಮನಸ್ಸು ಪರಿವರ್ತನೆಗೊಂಡಿದೆ. ಮದ್ಯ ವ್ಯರ್ಜನ ಮಾಡಿದ್ದೇನೆ. ಇನ್ಮುಂದೆ ಕುಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.

ಶಿಬಿರಾರ್ಥಿ ಗಣಪತಿ ಮಂಕಳಲೆ ಮಾತನಾಡಿ ನನಗೆ 12 ವರ್ಷ ಆಗಿದ್ದಂತ ಸಂದರ್ಭದಲ್ಲಿ ನನ್ನ ಅಣ್ಣನಿಗೆ 14 ವರ್ಷವಿದ್ದಾಗ ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿಯಾಗಿತ್ತು. ಕಣ್ಣು ಕೆಲ ವರ್ಷಗಳ ನಂತ್ರ ಹೋಗುವುದಾಗಿ ವೈದ್ಯರು ತಿಳಿಸಿದ್ದರು. ಅದರಂತೆ ಅಣ್ಣನ ಕಣ್ಣು ಹೋಯ್ತು. ಆತನ ಸ್ಥಿತಿ ಕಂಡು ಮಮ್ಮಲ ಮರುಗಿದೆ. ಕುಡಿತದ ಚಟ ಅಂಟಿಸಿಕೊಂಡೆನು. ಆತ ನೋಂದು ಮನೆಯ ಬಳಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡನು. ಅಣ್ಣ, ತಾಯಿ, ಅಜ್ಜಿ ಸರಣಿ ಸಾವು ಕಂಡು ನೊಂದು ಕುಡಿತ ಜಾಸ್ತಿ ಆಯ್ತು. 90ಟಿಯಿಂದ ಶುರುವಾಗಿ ಇಡೀ ದಿನ ಕುಡಿಯುತ್ತಿದ್ದೆ. ಇಂದು ಮದ್ಯವ್ಯರ್ಜನ ಶಿಬಿರದಲ್ಲಿ ಮನಸ್ಸು ಬದಲಾವಣೆಗೊಂಡಿದೆ. ಎಲ್ಲದಕ್ಕೂ ಕುಡಿತವೇ ಪರಿಹಾರವಲ್ಲ ಎಂಬುದನ್ನು ಕಂಡುಕೊಂಡಿದ್ದೇನೆ. ಇಂದಿನಿಂದ ಕುಡಿಯದಂತೆ ಶಪತ ಮಾಡಿದ್ದೇನೆ ಎಂದರು.

ಗಣಪತಿ ಬ್ಯಾಂಕ್ ಅಧ್ಯಕ್ಷ, ಸಾಗರ ನಗರಸಭೆ ಸದಸ್ಯ ಶ್ರೀನಿವಾಸ್ ಮೇಸ್ತ್ರಿ ಮಾತನಾಡಿ ಕುಡಿತದಿಂದ ಮಕ್ಕಳು, ಮನೆಯವರಿಗೆ, ಇಡೀ ಕುಟುಂಬಕ್ಕೆ ಕಷ್ಟ. ಸಮಾಜದಲ್ಲಿ ಗೌರವ ಕೂಡ ಸಿಗಲ್ಲ. ಇಂತಹ ಶಿಬಿರದಿಂದ ಜನರು ಬದಲಾಗೋದಕ್ಕೆ ಸಹಕಾರಿಯಾಗುತ್ತಿವೆ. 85 ಶಿಬಿರಾರ್ಥಿಗಳು ಇಂದು ಕುಡಿತ ಬಿಟ್ಟಿದ್ದಾರೆ. ಈ ಸಂಖ್ಯೆ ಮುಂದೆ ಹೆಚ್ಚಾಗಲಿ. ಕುಡಿತ ವಿಸರ್ಜಿಸಿದ ತಾವುಗಳು ನಿಮ್ಮ ಆಸೆಯನ್ನು ಈಡೇರಿಸಿಕೊಳ್ಳುವಂತ ಸುಸ್ಥಿತಿಗೆ ಬನ್ನಿ ಎಂಬುದಾಗಿ ಹಾರೈಸಿದರು.

ಬೆಳ್ತಂಗಡಿಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯ ಸಂಘಟನಾದ ಅಧ್ಯಕ್ಷರಾದಂತ ನಟರಾಜ್ ಬಾದಾಮಿ ಅವರು ಮಾತನಾಡಿ ಉತ್ತಮ ಜೀವನ ನಡೆಸಿ. ಶಿಬಿರಾರ್ಥಿಗಳಿಗೆ ಹಳೆಯನ್ನು ಕುಟುಂಬಸ್ಥರು ನೆನಪಿಸಬೇಡಿ. ಇಲ್ಲಿಂದ ಹೋದ ಬಳಿಕ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಳ್ಳಿ. ಮಕ್ಕಳು, ಸಮಾಜದ ಮುಂದೆ ಮಾದರಿ ವ್ಯಕ್ತಿಗಳಾಗಿ ಬದುಕಿ. ಕುಟುಂಬದವರೊಂದಿಗೆ ಕಳೆಯುವ ಒಳ್ಳೆಯ ದಿನಗಳು ಮುಂದಿವೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದಂತ ಕಲ್ಮನೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯ ಹಾಗೂ 1981ನೇ ಮದ್ಯವ್ಯರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಅವರು, ಶಿಬಿರಾರ್ಥಿಗಳು ಇಲ್ಲಿಗೆ ಬರುವಾಗ ಒಂದು ರೀತಿ ಇದ್ದರು. ಆರಂಭದಲ್ಲಿ ಇಲ್ಲಿಗೆ ಏಕೆ ಕರೆದುಕೊಂಡು ಬಂದಿದ್ದೀರಿ ಎಂದು ಗಲಾಟೆ ಮಾಡಿದವರು ಇದ್ದಾರೆ. ಇಲ್ಲಿಂದ ತಪ್ಪಿಸಿಕೊಂಡು ಹೋಗೋದಕ್ಕೆ ಪ್ರಯತ್ನಿಸಿದವರೂ ಇದ್ದಾರೆ. ಆದರೇ ಇಂದು ಶಿಬಿರಾರ್ಥಿಗಳು ಬದಲಾವಣೆಗೊಂಡು ನವ ಜೀವನಕ್ಕೆ ಕಾಲಿಟ್ಟಿದ್ದಾರೆ. ನಮ್ಮ ತಾಲ್ಲೂಕಿಗೆ ಮಧ್ಯವ್ಯರ್ಜನ ಶಿಬಿರ ಬಂದಿದ್ದು ಸಂತೋಷದ ಸಂಗತಿಯಾಗಿದೆ. ನನಗೆ ಇಂತಹ ಕಾರ್ಯಕ್ರಮದ ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆಯವರಿಗೆ, ಸಂಘಕ್ಕೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಶಿರಸಿ ಜಿಲ್ಲಾ ವಿಭಾಗದ ನಿರ್ದೇಶಕರಾದಂತ ದಿನೇಶ್ ಎಂ, ಸಾಗರ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ನಾಗರಾಜ್ ಕಲ್ಮನೆ, ದೇವರಾಜ್ ಕುರುವರಿ, ಕಸ್ತೂರಿ ಸಾಗರ್, ಬಿ.ಎಸ್ ಸುಂದರ್, ರಫೀಕ್, ಕೃಷ್ಣಮೂರ್ತಿ, ವಿಠ್ಠಲ ಪೈ, ಗಣೇಶ್ ಆಚಾರ್, ಯೋಗ ಶಿಕ್ಷಕ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಣೀಣಾಭಿವೃದ್ದಿ ಸಂಘದ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಸಾಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ನ ಯೋಜನಾಧಿಕಾರಿ ದಯಾನಂದ ಪೂಜಾರಿ ಸ್ವಾಗತಿಸಿದರೇ, ಮದ್ಯವ್ಯರ್ಜನ ವ್ಯವಸ್ಥಾಪನ ಸಮಿತಿಯ ಉಪಾಧ್ಯಕ್ಷರಾದಂತ ರೂಪ ರಮೇಶ್ ಅವಿನಹಳ್ಳಿ ಅವರು ವಂದಿಸಿದರು.

ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು

ಕಾಂಗ್ರೆಸ್‌ ಸರ್ಕಾರ ಮಾಡುತ್ತಿರುವ ಜಾತಿ ಸಮೀಕ್ಷೆಯು ಹಿಂದೂ ಧರ್ಮವನ್ನು ಒಡೆಯುವ ಪ್ರಯತ್ನ: ಆರ್‌.ಅಶೋಕ್ ಕಿಡಿ

ಈ ‘ವ್ಯಸನ’ಗಳೇ ಯುವ ಜನತೆಯಲ್ಲಿ ‘ಹೃದಯ ಸಂಬಂಧಿತ ಕಾಯಿಲೆ’ಗೆ ಕಾರಣ: ಡಾ.ಸಿ.ಎನ್.ಮಂಜುನಾಥ್

ನಾಳೆಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ/ಜಾತಿ ಸಮೀಕ್ಷೆ ಆರಂಭ: ಈ ಪ್ರಶ್ನೆಗಳಿಗೆ ಉತ್ತರ ಕಡ್ಡಾಯ

Share. Facebook Twitter LinkedIn WhatsApp Email

Related Posts

ಈ ‘ವ್ಯಸನ’ಗಳೇ ಯುವ ಜನತೆಯಲ್ಲಿ ‘ಹೃದಯ ಸಂಬಂಧಿತ ಕಾಯಿಲೆ’ಗೆ ಕಾರಣ: ಡಾ.ಸಿ.ಎನ್.ಮಂಜುನಾಥ್

21/09/2025 6:15 PM1 Min Read

ಕಾಂಗ್ರೆಸ್‌ ಸರ್ಕಾರ ಮಾಡುತ್ತಿರುವ ಜಾತಿ ಸಮೀಕ್ಷೆಯು ಹಿಂದೂ ಧರ್ಮವನ್ನು ಒಡೆಯುವ ಪ್ರಯತ್ನ: ಆರ್‌.ಅಶೋಕ್ ಕಿಡಿ

21/09/2025 6:09 PM2 Mins Read

BREAKING: ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟಣೆ

21/09/2025 5:26 PM1 Min Read
Recent News

ನಾಳೆಯಿಂದ ದೇಶಾದ್ಯಂತ ಜಿಎಸ್ಟಿ 2.0 ಜಾರಿ: ಯಾವುದು ಅಗ್ಗ? ಇಲ್ಲಿದೆ ಸಂಪೂರ್ಣ ಪಟ್ಟಿ | GST 2.0

21/09/2025 7:00 PM

ಶಿವಮೊಗ್ಗ: ಮದ್ಯ ಸೇವನೆ ತ್ಯಜಿಸಿ ಸಮಾಜದಲ್ಲಿ ಗೌರವಯುತವಾಗಿ ಬದುಕಿ- ಮಲ್ಲಿಕಾರ್ಜುನ ಹಕ್ರೆ

21/09/2025 6:55 PM

ಈ ‘ವ್ಯಸನ’ಗಳೇ ಯುವ ಜನತೆಯಲ್ಲಿ ‘ಹೃದಯ ಸಂಬಂಧಿತ ಕಾಯಿಲೆ’ಗೆ ಕಾರಣ: ಡಾ.ಸಿ.ಎನ್.ಮಂಜುನಾಥ್

21/09/2025 6:15 PM

ಕಾಂಗ್ರೆಸ್‌ ಸರ್ಕಾರ ಮಾಡುತ್ತಿರುವ ಜಾತಿ ಸಮೀಕ್ಷೆಯು ಹಿಂದೂ ಧರ್ಮವನ್ನು ಒಡೆಯುವ ಪ್ರಯತ್ನ: ಆರ್‌.ಅಶೋಕ್ ಕಿಡಿ

21/09/2025 6:09 PM
State News
KARNATAKA

ಶಿವಮೊಗ್ಗ: ಮದ್ಯ ಸೇವನೆ ತ್ಯಜಿಸಿ ಸಮಾಜದಲ್ಲಿ ಗೌರವಯುತವಾಗಿ ಬದುಕಿ- ಮಲ್ಲಿಕಾರ್ಜುನ ಹಕ್ರೆ

By kannadanewsnow0921/09/2025 6:55 PM KARNATAKA 3 Mins Read

ಶಿವಮೊಗ್ಗ: ಮದ್ಯ ವೆಸನದಿಂದ ಸಮಾಜದಲ್ಲಿ ಅಗೌರವವೇ ವಿನಹ ಯಾರೂ ಗೌರವ ಕೊಡುವುದಿಲ್ಲ. ಮದ್ಯ ಸೇವನೆಯನ್ನು ತ್ಯಜಿಸಿ ಸಮಾಜದಲ್ಲಿ ಗೌರವಯುತವಾಗಿ ಬದುಕು…

ಈ ‘ವ್ಯಸನ’ಗಳೇ ಯುವ ಜನತೆಯಲ್ಲಿ ‘ಹೃದಯ ಸಂಬಂಧಿತ ಕಾಯಿಲೆ’ಗೆ ಕಾರಣ: ಡಾ.ಸಿ.ಎನ್.ಮಂಜುನಾಥ್

21/09/2025 6:15 PM

ಕಾಂಗ್ರೆಸ್‌ ಸರ್ಕಾರ ಮಾಡುತ್ತಿರುವ ಜಾತಿ ಸಮೀಕ್ಷೆಯು ಹಿಂದೂ ಧರ್ಮವನ್ನು ಒಡೆಯುವ ಪ್ರಯತ್ನ: ಆರ್‌.ಅಶೋಕ್ ಕಿಡಿ

21/09/2025 6:09 PM

BREAKING: ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಸ್ಥಾನದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟಣೆ

21/09/2025 5:26 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.