ಮಡಿಕೇರಿ: ಜೀವ ಉಳಿಸಲು ರೋಗಿಯನ್ನು ಆಂಬುಲೆನ್ಸ್ ಮೂಲಕ ಕರೆದೊಯ್ಯುತ್ತಿದ್ದಂತ ವೇಳೆಯಲ್ಲಿ ಬ್ರೇಕ್ ಫೇಲ್ ಆಗಿತ್ತು. ಆದರೇ ಆ ಚಾಲಕ ಮಾತ್ರ ಅದನ್ನು ಲೆಕ್ಕಿಸದೇ ತನ್ನ ಜೀವನನ್ನೇ ಪಣವಾಗಿಟ್ಟು ಗರ್ಭಿಣಿ ಮಹಿಳೆಯೊಬ್ಬರನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ತಲುಪಿಸಿ, ನೆರವಾಗಿದ್ದಾರೆ.
ಆಂಬುಲೆನ್ಸ್ ವಾಹನ ಬ್ರೇಕ್ ಫೇಲ್ ಆದರೂ ತನ್ನ ಜೀವವನ್ನು ಲೆಕ್ಕಿಸದ ಚಾಲಕನೊಬ್ಬ ಮಡಿಕೇರಿಯಿಂದ ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಗೆ ಗರ್ಭಿಣಿಯನ್ನು ಕರೆದೊಯ್ದು ಸೇಫ್ ಆಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದಷ್ಟೇ ಅಲ್ಲದೇ ದಾರಿ ಮಧ್ಯದಲ್ಲಿ ತಲೆಗೆ ಬೆಟ್ಟು ಬಿದ್ದು ಗಾಯಗೊಂಡಿದ್ದಂತ ವ್ಯಕ್ತಿಯೊಬ್ಬನನ್ನು ಬಿಳಿಕೆರೆಯಿಂದ ಹುಣಸೂರು ಆಸ್ಪತ್ರೆಗೆ ಸಾಗಿಸಿ ಸಾಹಸ ಮೆರೆದಿದ್ದಾನೆ. ಚಾಲಕ ಬಿಎಸ್ ವೆಂಕಟೇಶ್ (ಕಿಶೋರ್ ಪೂಜಾರಿ) ಅವರ ಕಾರ್ಯಕ್ಕೆ ಜನತೆ ಮೆಚ್ಚುಗೆ ವ್ಯಪಡಿಸಿದ್ದಾರೆ.
ಕಿಶೋರ್ ಪೂಜಾರಿ ಮಡಿಕೇರಿ ತಾಲ್ಲೂಕು ಜಿಲ್ಲಾಸ್ಪತ್ರೆಯಲ್ಲಿ ಆಂಬುಲೆನ್ಸ್ ಚಾಲಕರಾಗಿದ್ದಂತ ಇವರು, ಕೋವಿಡ್ ವೇಳೆ ಮೃತದೇಹಗಳನ್ನು ಅಂತ್ಯ ಸಂಸ್ಕಾರ ನೆರವೇರಿಸಲು ನೆರವಾಗಿದ್ದರು. ಇದೀಗ ಬ್ರೇಕ್ ಫೇಲ್ ಆದರೂ ಗರ್ಭಿಣಿ ಮಹಿಳೆಯನ್ನು ಸರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸಿ ಮೆಚ್ಚುಗೆ ಗಳಿಸಿದ್ದಾರೆ.
ನಾಳೆಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ/ಜಾತಿ ಸಮೀಕ್ಷೆ ಆರಂಭ: ಈ ಪ್ರಶ್ನೆಗಳಿಗೆ ಉತ್ತರ ಕಡ್ಡಾಯ