ಬೆಂಗಳೂರು: ನಗರದಲ್ಲಿ ಶಾಂಕಿಂಗ್ ಕೃತ್ಯ ಎನ್ನುವಂತೆ ತಂದೆಯ ಆಸ್ತಿಗಾಗಿ ಪುತ್ರನೊಬ್ಬ ಸ್ನೇಹಿತನೊಂದಿಗೆ ಸೇರಿಕೊಂಡು ಅಪ್ಪನನ್ನೇ ಕೊಲೆಗೈದ ಘಟನೆ ನಡೆದಿದೆ.
ಬೆಂಗಳೂರಿನ ಬಾಗಲಗುಂಟೆಯಲ್ಲಿ ಆಸ್ತಿಯ ಆಸೆಗಾಗಿ ಸ್ನೇಹಿತನೊಂದಿಗೆ ಸೇರಿದಂತ ಪುತ್ರನೊಬ್ಬ ತಂದೆಯನ್ನು ಕೊಲೆ ಮಾಡಿರುವಂತ ಕೃತ್ಯವು ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿ ಬಯಲಾಗಿದೆ.
ಬೆಂಗಳೂರಿನ ದಾಸರಹಳ್ಳಿಯ ಕೆಂಪೇಗೌಡ ನಗರದ ಉದ್ಯಮಿ ಮಂಜಣ್ಣ ಎಂಬುವರೇ ಪುತ್ರನಿಂದ ಕೊಲೆಯಾದಂತ ದುರ್ದೈವಿಯಾಗಿದ್ದಾರೆ. ಪುತ್ರ ಮನೋಜ್ ಹಾಗೂ ಸ್ನೇಹಿತ ಸೇರಿಕೊಂಡು ಆಸ್ತಿಯ ಆಸೆಗಾಗಿ ತಂದೆಯನ್ನು ಕೊಲೆಗೈದಿರೋದು ತಿಳಿದು ಬಂದಿದೆ.
ಕಳೆದ ಸೆಪ್ಟೆಂಬರ್ 2ರಂದು ದಾಸರಹಳ್ಳಿಯ ಕೆಂಪೇಗೌಡ ನಗರದಲ್ಲಿ ಉದ್ಯಮಿ ಮಂಜಣ್ಣ ಅವರು ಮನೆಯಲ್ಲಿ ಮಲಗಿದ್ದಂತ ಜಾಗದಲ್ಲೇ ಸಾವನ್ನಪ್ಪಿದ್ದರು. ಮಂಜಣ್ಣ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಮನೆಯವರು ಅಂತ್ಯಕ್ರಿಯೆ ನೆರವೇರಿಸಿದ್ದರು. ಮಂಜಣ್ಣ ಅವರ ಮರಣೋತ್ತರ ವರದಿ ಬಂದಿದ್ದು, ಅದರಲ್ಲಿ ಮಂಜಣ್ಣನನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ.
ಅಂದಹಾಗೇ ಮೃತ ಮಂಜಣ್ಣ ಬಾಗಲಗುಂಟೆಯಲ್ಲಿ ಐದಾರು ಬಿಲ್ಡಿಂಗ್, ನಾಲ್ಕೈದು ಸೈಟ್, ಒಂದು ವುಡ್ ವರ್ಕ್ ಫ್ಯಾಕ್ಟರಿ ಹೊಂದಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದರು. ದೊಡ್ಡ ಮಗ ಮನೋಜ್ ಕೆಲಸ ಕಾರ್ಯ ಮಾಡದೇ ಸುತ್ತಾಡುತ್ತಿದ್ದನು. ಆತನಿಗೆ ತಂದೆ ಕೆಲಸ ಮಾಡುವಂತೆ ಬುದ್ಧಿ ಹೇಳಿದ್ದರು.
ತಂದೆಯ ಆಸ್ತೆಯ ಮೇಲೆ ಕಣ್ಣಿಟ್ಟಿದ್ದಂತ ಪುತ್ರ ಮನೋಜ್, ಸ್ನೇಹಿತ ಪ್ರವೀಣ್ ಗೆ ತಂದೆಯನ್ನು ಕೊಲೆಗೈಯಲ್ಲು 15 ಲಕ್ಷಕ್ಕೆ ಸುಫಾರಿ ನೀಡಿದ್ದನು. ಅಲ್ಲದೇ ಮುಂಗಡವಾಗಿ 15,000 ಹಣ ಕೂಡ ಸಂದಾಯ ಮಾಡಿದ್ದರು. ಮನೆಯಲ್ಲಿ ಮಲಗಿದ್ದಂತ ಸಂದರ್ಭದಲ್ಲಿ ಸೆ.2ರಂದು ಪುತ್ರ ಮನೋಜ್, ಸ್ನೇಹಿತ ಪ್ರವೀಣ್ ಸೇರಿಕೊಂಡು ಕುತ್ತಿಗೆ ಬಿಗಿದು ಹತ್ಯೆಗೈದು, ಹೃದಯಾಘಾತದ ನಾಟಕ ಕಟ್ಟಿದ್ದರು. ಇದೀಗ ಮರಣೋತ್ತರ ತನಿಖೆಯಲ್ಲಿ ಬಟಾಬಯಲಾಗಿದೆ.
ನಾಳೆಯಿಂದ ಸಾಗರದ ‘ಶ್ರೀ ಮಾರಿಕಾಂಬಾ ದೇವಿ ದೇವಸ್ಥಾನ’ದಲ್ಲಿ ‘ಶರನ್ನವರಾತ್ರಿ ಉತ್ಸವ’ ಆರಂಭ
ನಾಳೆಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ/ಜಾತಿ ಸಮೀಕ್ಷೆ ಆರಂಭ: ಈ ಪ್ರಶ್ನೆಗಳಿಗೆ ಉತ್ತರ ಕಡ್ಡಾಯ