ಶಿವಮೊಗ್ಗ : ಸೆಪ್ಟೆಂಬರ್ 1ರಿಂದ ಶಾಮಿಯಾನ ಮತ್ತು ಧ್ವನಿಬೆಳಕು ಅಳವಡಿಕೆ ದರವನ್ನು ಹೆಚ್ಚಿಸಲಾಗಿದೆ. ಅತ್ಯಂತ ದುಬಾರಿ ಬೆಲೆಯಲ್ಲಿ ವಸ್ತುಗಳನ್ನು ಖರೀದಿಸಿ ನಾವು ಕಡಿಮೆ ದರಕ್ಕೆ ಈತನಕ ಶಾಮಿಯಾನ, ಧ್ವನಿ ಬೆಳಕು ಅಳವಡಿಸಿಕೊಂಡು ಬರಲಾಗಿತ್ತು. ಇದೀಗ ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಧ್ವನಿ ಬೆಳಕು ಶಾಮೀಯಾನ ಮಾಲೀಕರ ಸಂಘದ ಗೌರವಾಧ್ಯಕ್ಷ ಮಹಾಬಲೇಶ್ವರ ವೈ.ಪಿ ಹೇಳಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕರ‍್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊರೋನಾಗಿಂತ ಮೊದಲು ನಾವು ದರ ಪರಿಷ್ಕರಣೆ ನಡೆದಿತ್ತು. ನಂತರದ ದಿನಗಳಲ್ಲಿ ರಾಜ್ಯದ ಇತರೆ ಜಿಲ್ಲಾ, ತಾಲ್ಲೂಕುಗಳಲ್ಲಿ ದರ ಹೆಚ್ಚು ಮಾಡಿದ್ದರೂ ನಮ್ಮ ತಾಲ್ಲೂಕಿನಲ್ಲಿ ಮಾತ್ರ ಕಡಿಮೆ ದರದಲ್ಲಿ ಧ್ವನಿಬೆಳಕು ಶಾಮಿಯಾನ ಹಾಕುತ್ತಿದ್ದೇವು ಎಂದರು.
ಸೆ. 16ರಂದು ನಡೆದ ಸಂಘದ ಸರ್ವಸದಸ್ಯರ ಸಭೆಯಲ್ಲಿ ದರ ಏರಿಕೆ ಅನಿವಾರ್ಯತೆಯನ್ನು ಸಂಘದ ಎಲ್ಲಾ ಸದಸ್ಯರು ವ್ಯಕ್ತಪಡಿಸಿದ್ದು, ಉದ್ಯಮ ಉಳಿಯಬೇಕಾದರೆ ಸಣ್ಣ ಪ್ರಮಾಣದಲ್ಲಿ ಶಾಮಿಯಾನ ದರ ಏರಿಸುವ ಅನಿವಾರ್ಯತೆ ಹಿನ್ನೆಲೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಸಾರ್ವಜನಿಕರು ನೂತನ ದರಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಗುರುಬಸವಯ್ಯ, ಪ್ರಮುಖರಾದ ಶ್ರೀಧರ ಹೆಚ್.ಆರ್., ಪ್ರಕಾಶ್ ಕಾಮತ್, ಅಣ್ಣಪ್ಪ ಕೆ.ಜಿ., ಸಂಪತ್ ಕುಮಾರ್ ಮಾನೆ ಉಪಸ್ಥಿತರಿದ್ದರು.
ಹೀಗಿದೆ ಇಂದಿನ ಬೆಂಗಳೂರು ರಸ್ತೆ ಗುಂಡಿ ಕುರಿತ ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ಸಭೆಯ ಪ್ರಮುಖ ಹೈಲೈಟ್ಸ್
19 ವರ್ಷದ ಯುವಕನನ್ನು ಮದುವೆಯಾದ 19 ವರ್ಷದ ಯುವತಿ ವಿರುದ್ಧ ಕೇಸ್ ದಾಖಲು