ಬೆಂಗಳೂರು: ನೆರೆಹಾನಿಯಿಂದ ಸಂತ್ರಸ್ತರಾಗಿದ್ದರ ನಡುವೆ ಬಂದಂತ ಅಲ್ಪ ಸ್ವಲ್ಪ ಬೆಳೆಗೂ ಬೆಲೆ ಇರದಂತ ಕರ್ನಾಟಕದ ರೈತರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ. ಹೆಸರುಕಾಳು, ಉದ್ದಿನ ಕಾಳು ಸೇರಿದಂತೆ ಐದು ಧಾನ್ಯಗಳನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಹೌದು ಕರ್ನಾಟಕದ ರೈತರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ. 2025-26ನೇ ಸಾಲಿನ ಮುಂಗಾರು ಬೆಳೆಗಳಾದಂತ ಹೆಸರುಕಾಳು, ಉದ್ದಿನ ಬೇಳೆ, ಶೇಂಗಾ, ಸೋಯಾಬಿನ್ ಮತ್ತು ಸೂರ್ಯಕಾಂತಿ ಸೇರಿದಂತೆ ಐದು ಧಾನ್ಯಗಳನ್ನು ಕೇಂದ್ರ ಸರ್ಕಾರ ಬೆಂಬಲ ಬೆಲೆಯಡಿ ಖರೀದಿಸುವುದಾಗಿ ಘೋಷಿಸಿದೆ. ಅದರಂತೆ ರಾಜ್ಯ ಸರ್ಕಾರಕ್ಕೆ ಈ ಧಾನ್ಯಗಳನ್ನು ಬೆಂಬಲ ಬೆಲೆ ಯೋಜನೆಯ ಅಡಿಯಲ್ಲಿ ಖರೀದಿಸುವಂತೆ ನಿರ್ದೇಶಿಸಿದೆ.
ಈ ಸಂಬಂಧ ಕೇಂದ್ರ ಕೃಷಿ ಸಚಿವರು ಆಹಾರ ಸಚಿವ ಪ್ರಹ್ಲಾದ್ ಜೋಶಿಯವರಿಗೆ ಖುದ್ದು ಪತ್ರ ಬರೆದು ತಿಳಿಸಿದ್ದಾರೆ. ಕಾರಣ ಅವರು ಪ್ರಧಾನಿ ಮೋದಿ, ಕೃಷಿ ಸಚಿವರಿಗೆ ಕರ್ನಾಟಕದಲ್ಲಿ ಅತಿವೃಷ್ಠಿಯಿಂದ ಬೆಳೆಹಾನಿಯಾಗಿ ಅಲ್ಪಸ್ವಲ್ಪ ಬಂದಿದೆ. ಅದಕ್ಕೆ ಸೂಕ್ತ ಬೆಲೆಯಿಲ್ಲದಂತೆ ಆಗಿದೆ. ಹೀಗಾಗಿ ಬೆಂಬಲ ಬೆಲೆಯಡಿ ಧಾನ್ಯ ಖರೀದಿ ಮಾಡುವಂತೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಐದು ಧಾನ್ಯಗಳನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಗೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶಿಸಿದೆ.
‘PDO ಜೇಷ್ಠತಾ ಪಟ್ಟಿ’ಯ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವ ಪ್ರಿಯಾಂಕ್ ಖರ್ಗೆ
ಶಿವಮೊಗ್ಗ: ಉಳವಿಯಲ್ಲಿ ಯಶಸ್ವಿಯಾಗಿ ನಡೆದ ಈದ್ ಮಿಲಾದ್ ಪ್ರಯುಕ್ತ ಆಯೋಜಿಸಿದ್ದ ‘ರಕ್ತದಾನ ಶಿಬಿರ’