ಬೆಂಗಳೂರು: ಕ್ರಿಶ್ಚಿಯನ್ ಹೊಸ ಜಾತಿಗಳ ಸೇರ್ಪಡೆಯಿಂದ ಸಾಮಾಜಿಕ ಧಕ್ಕೆ ಉಂಟಾಗಲಿದೆ. ಜೊತೆ ಜೊತೆಗೆ ದೀರ್ಘಕಾಲಿಕ ಸಮಸ್ಯೆಗಳು ಇದರಿಂದ ಉಂಟಾಗಲಿವೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪತ್ರ ಬರೆದು ತಿಳಿಸಿದ್ದಾರೆ.
ಈ ಸಂಬಂಧ ಸಿಎಂ ಸಿದ್ಧರಾಮಯ್ಯಗೆ ರಾಜ್ಯಪಾಲ ಗೆಹ್ಲೋಟ್ ಪತ್ರ ಬರೆದಿದ್ದು, ಕ್ರಿಶ್ಚಿಯನ್ ಹೊಸ ಜಾತಿಗಳ ಸೇರ್ಪಡೆಯಿಂದ ಸಾಮಾಜಿಕ ಧಕ್ಕೆ ಮತ್ತು ದೀರ್ಘಾವಧಿಯ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಸಾಮಾಜಿಕ ವ್ಯವಸ್ಥೆಗೆ ಸಮಸ್ಯೆಯಾಗದಂತೆ ಮರು ಪರಿಶೀಲಿಸುವಂತೆ ತಿಳಿಸಲಾಗಿದೆ.
ಜಾತಿ ಪಟ್ಟಿಯಲ್ಲಿ ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಸೇರಿ ಹೊಸ ಜಾತಿ ಪಟ್ಟಿಗಳ ಸೇರ್ಪಡೆ ಹಿನ್ನಲೆಯಲ್ಲಿ ಸಿಎಂ ಸಿದ್ಧರಾಮಯ್ಯ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪತ್ರದಲ್ಲಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಅಲ್ಲದೇ ಕ್ರಿಶ್ಚಿಯನ್ ಹೊಸ ಜಾತಿಗಳ ಸೇರ್ಪಡೆಯ ಬಗ್ಗೆ ಮರುಪರಿಶೀಲಿಸುವಂತೆ ಪತ್ರದಲ್ಲಿ ತಿಳಿಸಿದ್ದಾರೆ.
ರಾಜ್ಯಾಧ್ಯಂತ ಬಹುಮಹಡಿ ಕಟ್ಟಡಗಳಿಗೆ ‘ಕ್ಲಿಯರೆನ್ಸ್ ಪತ್ರ’ ನೀಡುವ ಕುರಿತು ಸರ್ಕಾರದಿಂದ ಮಹತ್ವದ ಆದೇಶ
BREAKING: ಲಂಡನ್, ಬ್ರಸೆಲ್ಸ್, ಇತರ ಯುರೋಪಿಯನ್ ದೇಶಗಳಲ್ಲಿ ಸೈಬರ್ ದಾಳಿ, ವಿಮಾನ ಸೇವೆಯಲ್ಲಿ ವ್ಯತ್ಯಯ