ಬೆಂಗಳೂರು: ರಾಜ್ಯದಲ್ಲೊಂದು ಅಪರೂಪದ ಮದುವೆ ಎನ್ನುವಂತೆ 19 ವರ್ಷದ ಯುವಕನನ್ನು ಯುವತಿಯೊಬ್ಬಳು ಮದುವೆಯಾಗಿದ್ದಳು. ಮನೆಯವರ ವಿರೋಧದ ನಡುವೆಯೂ ಈ ವಿವಾಹ ನಡೆದಿತ್ತು. ಆದರೇ ಇದೀಗ 19 ವರ್ಷದ ಯುವಕನನ್ನು ಬಾಲ್ಯ ವಿವಾಹವಾದಂತ ಯುವತಿಯ ವಿರುದ್ಧ ಕೇಸ್ ದಾಖಲಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕುದೂರಲ್ಲಿ ಪರಸ್ಪರ ಪ್ರೀತಿಸುತ್ತಿದ್ದ 19 ವರ್ಷದ ಸೌಮ್ಯ ಹಾಗೂ 19 ವರ್ಷದ ವಸಂತ್ ವಿವಾಹವಾಗಿದ್ದಾರೆ. ಇಬ್ಬರ ಮದುವೆಗೆ ಯುವತಿ ಸೌಮ್ಯ ಮನೆಯವರಿಂದ ತೀರ್ವ ವಿರೋಧ ವ್ಯಕ್ತವಾಗಿದ್ದನ್ನು ತೆಕ್ಕಿಸದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಜುಲೈ.11ರಂದು ಮಾಗಡಿಯ ದೇಗುಲದಲ್ಲಿ ಇಬ್ಬರಿಗೂ ವಿವಾಹವಾಗಿತ್ತು. ಯುವತಿಗೆ 18 ವರ್ಷ, ಯುವಕನಿಗೆ 21 ವರ್ಷ ತುಂಬಿರಬೇಕು. ಹೀಗಿದ್ದರೂ 19 ವರ್ಷದ ಯುವತಿ ಮೇಜರ್ ಆಗಿದ್ದರೂ, ಯುವಕನಿಗೆ 21 ವರ್ಷ ಮದುವೆಯಾಗಲೂ ಕಡ್ಡಾಯವಾಗಿದೆ. ಈ ನಿಯಮ ಮೀರಿ ವಿವಾಹವಾದಂತ ಯುವತಿಯ ವಿರುದ್ಧ ಇದೀಗ ಕುದೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಪಂಡಿತ್ ಎಂ.ವೆಂಕಟೇಶ್ ಕುಮಾರ್’ಗೆ ‘ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ’
BREAKING: ಲಂಡನ್, ಬ್ರಸೆಲ್ಸ್, ಇತರ ಯುರೋಪಿಯನ್ ದೇಶಗಳಲ್ಲಿ ಸೈಬರ್ ದಾಳಿ, ವಿಮಾನ ಸೇವೆಯಲ್ಲಿ ವ್ಯತ್ಯಯ