ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಈದ್ ಮಿಲಾದ್ ಪ್ರಯುಕ್ತ ಉಳವಿಯ ಫಲಾಹುಲ್ ಮುಸ್ಲಿಂ ಕಮಿಟಿಯಿಂದ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.
ಈ ಕುರಿತಂತೆ ಉಳವಿಯ ಫಲಾಹುಲ್ ಮುಸ್ಲಿಂ ಕಮಿಟಿಯು ಮಾಹಿತಿ ಹಂಚಿಕೊಂಡಿದ್ದು, ದಿನಾಂಕ 20-09-2025ರಂದು ಬೆಳಗ್ಗೆ 10 ಗಂಟೆಗೆ ದೂಗೂರು ಹಳ್ಳಿಸಂತೆ ಕಟ್ಟಡದ ಆವರಣದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದೆ.
ಫಲಾಹುಲ್ ಮುಸ್ಲಿಂ ಕಮಿಟಿ ಸಂಯುಕ್ತ ಆಶ್ರಯದಲ್ಲಿ ದೂಗೂರು ಗ್ರಾಮ ಪಂಚಾಯ್ತಿ, ಉಳವಿ ಗ್ರಾಮ ಪಂಚಾಯ್ತಿ ಹಾಗೂ ಉಳವಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಉಳವಿ, ದೂಗೂರಿನ ಸಾರ್ವಜನಿಕರು ರಕ್ತ ದಾನ ಶಿಬಿರದಲ್ಲಿ ಪಾಲ್ಗೊಂಡು ಶಿಬಿರವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಲಾಗಿದೆ.
ಯಾರು ರಕ್ತದಾನ ಮಾಡಬಹುದು?
ಕನಿಷ್ಠ 45 ಕೆಜಿ ದೇಹ ತೂಕ ಇರುವಂತ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದಾಗಿದೆ. 18 ರಿಂದ 60 ವರ್ಷದ ಒಳಗಿನ ಪುರುಷರು ಮತ್ತು ಮಹಿಳೆಯರು, ಕನಿಷ್ಠ 12.5 ಗ್ರಾ ಹಿಮೋಗ್ಲೋಬಿನ್ ಪ್ರಮಾಣ ರಕ್ತದಲ್ಲಿ ಇರೋರು ರಕ್ತದಾನ ಮಾಡಬಹುದಾಗಿದೆ. ಆದ್ರೇ ರಕ್ತದಾನ ಮಾಡುವಾಗ ರಕ್ತದ ಒತ್ತಡ ಸಮವಾಗಿರಬೇಕು.
ಯಾರು ರಕ್ತದಾನ ಮಾಡುವಂತಿಲ್ಲ?
ಒಂದು ವರ್ಷದಿಂದ ಈಚೆಗೆ ಮಲೇರಿಯಾ, ಟೈಪೈಡ್, ಜಾಂಡೀಸ್ ಆದವರು ರಕ್ತದಾನವನ್ನು ಮಾಡುವಂತಿಲ್ಲ. ಅಲ್ಲದೇ ಒಂದು ವರ್ಷದ ಈಚೆಗೆ ಶಸ್ತ್ರಚಿಕಿತ್ಸೆಗೆ ಒಳಗಾದವರು ರಕ್ತದಾನ ಮಾಡಬಾರದು. ಗರ್ಭಿಣಿ ಸ್ತ್ರೀಯರು, ಹಾಲುಣಿಸುವಂತ ತಾಯಂದಿರು, ಋತುಸ್ರಾವದಲ್ಲಿರುವ ಸ್ತ್ರೀಯರು ರಕ್ತದಾನ ಮಾಡುವಂತಿಲ್ಲ.
ನಾಳೆ ತಪ್ಪದೇ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಭಾಗದಲ್ಲಿನ ದೂಗೂರು ಹಳ್ಳಿ ಸಂತೆಯಲ್ಲಿನ ರಕ್ತದಾನದಲ್ಲಿ ಭಾಗಿಯಾಗಿ, ರಕ್ತದಾನ ಮಾಡಿ
ನಾಳೆ ಆರೋಗ್ಯವಂತ ಯುವಕ, ಯುವತಿಯರು ತಪ್ಪದೇ ಉಳವಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಮುಂಭಾಗದಲ್ಲಿರುವಂತ ದೂಗೂರು ಹಳ್ಳಿ ಸಂತೆಗೆ ಆಗಮಿಸಿ, ರಕ್ತದಾನ ಮಾಡಿ. ರಕ್ತದಾನದ ತುರ್ತು ಅವಶ್ಯಕತೆ ಇರುವಂತವರಿಗೆ ಇದರಿಂದ ಸಹಾಯವಾಗಲಿದೆ. ರಕ್ತದಾನ ಮಹಾದಾನ, ಬನ್ನಿ, ಭಾಗವಹಿಸಿ, ರಕ್ತದಾನ ಮಾಡಿ ಎಂಬುದಾಗಿ ದೂಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಫಯಾಸ್ ಅಹ್ಮದ್ ಮನವಿ ಮಾಡಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ನಾವು ಜಾತಿಗಣತಿ ಸಮೀಕ್ಷೆಯನ್ನು ಮುಂದೂಡಲ್ಲ: ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ
ರಾಜ್ಯದ ರೈತರ ಜಮೀನುಗಳಿಗೆ ಕಾಲುದಾರಿ, ಬಂಡಿದಾರಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ